ದತ್ತ ಪಾದುಕೆ ಪೂಜೆ – ರಾಜ್ಯ ಸರ್ಕಾರ ಅರ್ಚಕರಿಗೆ ಸಂಬಳ ಕೊಡುತ್ತಿಲ್ಲ! ಯಾಕೆ?

ಹಿಂದಿನ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ದತ್ತಪೀಠ ವ್ಯವಸ್ಥಾಪನಾ ಸಮಿತಿ ಮತ್ತು ಅರ್ಚಕರ ನೇಮಕವನ್ನ ಪ್ರಶ್ನಿಸಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸಮಗ್ರ ಮಾಹಿತಿ ಕೇಳಿದೆ. ಸಚಿವ ಸಂಪುಟದ ಉಪ ಸಮಿತಿ ರಚಿಸಿ ವರದಿ ನೀಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸೂಚನೆ ನೀಡಿತ್ತು.

ದತ್ತ ಪಾದುಕೆ ಪೂಜೆ - ರಾಜ್ಯ ಸರ್ಕಾರ ಅರ್ಚಕರಿಗೆ ಸಂಬಳ ಕೊಡುತ್ತಿಲ್ಲ! ಯಾಕೆ?
ದತ್ತ ಪಾದುಕೆ ಪೂಜೆ - ರಾಜ್ಯ ಸರ್ಕಾರ ಅರ್ಚಕರಿಗೆ ಸಂಬಳ ಕೊಡುತ್ತಿಲ್ಲ! ಯಾಕೆ?
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Jan 29, 2024 | 4:24 PM

ದಕ್ಷಿಣದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ (Sri Guru Dattatreya Bababudangiri Swami Dargah) ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ದತ್ತ ಪಾದುಕೆಗೆ (Datta Paduka) ಪೂಜೆ ಸಲ್ಲಿಸಲು ಅರ್ಚಕರ ನೇಮಕ ಮಾಡುವಂತೆ ದಶಕಗಳ ಕಾಲ ಹೋರಾಟ ನಡೆದಿತ್ತು. ಸಾವಿರಾರು ಹಿಂದೂ ಕಾರ್ಯಕರ್ತರ ಹೋರಾಟದ ಫಲವಾಗಿ 13 ತಿಂಗಳ ಹಿಂದೆ ಇಬ್ಬರು ಅರ್ಚಕರು (priests) ನೇಮಕವಾಗಿದ್ರು. ಆದ್ರೆ ಸರ್ಕಾರ ಬಡ ಅರ್ಚಕರಿಗೆ ಬಿಡಿಗಾಸು ಸಂಬಳವನ್ನೂ (salary) ನೀಡಿಲ್ಲ. ಮತ್ತೊಂದು ಕಡೆ ವ್ಯವಸ್ಥಾಪನಾ ಸಮಿತಿ, ಅರ್ಚಕರ ನೇಮಕ ಸಂಬಂಧ ಉಪ ಸಮಿತಿ ನೇಮಕ ಮಾಡಿರುವ ಸರ್ಕಾರದ ವಿರುದ್ಧ ಹಿಂದೂ ಕಾರ್ಯಕರ್ತರು ಕೆಂಡವಾಗಿದ್ದಾರೆ.

ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಅರ್ಚಕರ ಸಂಬಳದ ವಿಚಾರಕ್ಕೆ ಮತ್ತೆ ಮುನ್ನೆಲೆಗೆ ಬಂದಿದೆ. ವಿವಾದಿತ ಗುಹೆ ಒಳಗಿರುವ ದತ್ತ ಪಾದುಕೆಗೆ ಪೂಜೆ ಸಲ್ಲಿಸಲು ಹಿಂದಿನ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ಇಬ್ಬರು ಅರ್ಚಕರಿಗೆ ಕಾಂಗ್ರೆಸ್ ಸರ್ಕಾರ ಸಂಬಳ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಮುಜಾವರ್ ನೇತೃತ್ವದಲ್ಲಿ ದತ್ತ ಪಾದುಕೆಗೆ ಪೂಜೆ ಸಲ್ಲಿಸುವುದಕ್ಕೆ ವಿರೋಧ ವ್ಯಕ್ತವಾಗಿ ಅರ್ಚಕರ ನೇಮಕ ಮಾಡುವಂತೆ ದಶಕಗಳ ಕಾಲ ಹೋರಾಟ ನಡೆದಿತ್ತು. ಹೋರಾಟದ ಫಲವಾಗಿ ಹಿಂದಿನ ಬಿಜೆಪಿ ಸರ್ಕಾರ ದತ್ತಪೀಠ ವ್ಯವಸ್ಥಾಪನಾ ಸಮಿತಿ ರಚಿಸಿ ಇಬ್ಬರು ಅರ್ಚಕರ ನೇಮಕ ಮಾಡಿತ್ತು. ಆದ್ರೆ ಅರ್ಚಕರ ನೇಮಕವಾದ ದಿನದಿಂದ ಇಲ್ಲಿಯವರೆಗೂ ಒಂದು ರೂಪಾಯಿ ಸಂಬಳ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡಿರುವ ಹಿಂದೂ ಕಾರ್ಯಕರ್ತರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಕೆಂಡವಾಗಿದ್ದು ಮುಜಾವರ್​ಗೆ ಪ್ರತಿ ತಿಂಗಳು ಸಂಬಳ ನೀಡುವ ಸರ್ಕಾರ ಅರ್ಚಕರಿಗೆ ಯಾಕೆ ಸಂಬಳ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ದತ್ತಪೀಠ ವ್ಯವಸ್ಥಾಪನಾ ಸಮಿತಿ ಮತ್ತು ಅರ್ಚಕರ ನೇಮಕವನ್ನ ಪ್ರಶ್ನಿಸಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸಮಗ್ರ ಮಾಹಿತಿ ಕೇಳಿದೆ. ಸಚಿವ ಸಂಪುಟದ ಉಪ ಸಮಿತಿ ರಚಿಸಿ ವರದಿ ನೀಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಸರ್ಕಾರ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಿದ್ದು ಇದಕ್ಕೆ ಹಿಂದೂ ಸಂಘಟನೆ, ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಹಿಂದೂ ಗಳ ಪರವಾಗಿ ಸುಪ್ರೀಂ ಕೋರ್ಟ್ ಗೆ ಕಾಂಗ್ರೆಸ್ ಸರ್ಕಾರ ಮಾಹಿತಿ ನೀಡುವುದೆ ಅನುಮಾನ, ಇದು ಷಡ್ಯಂತ್ರದ ಭಾಗ ಎಂದಿದ್ದಾರೆ ಸಿಟಿ ರವಿ, ಬಿಜೆಪಿ ಮಾಜಿ ಶಾಸಕ.

ಲೋಕಸಭಾ ಚುನಾವಣೆಯ ಸಮಯದಲ್ಲಿ ವಿವಾದಿತ ಇನಾಂ‌ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ ಮತ್ತೆ ಸುದ್ದಿಗೆ ಬಂದಿದ್ದು. ಅರ್ಚಕರಿಗೆ ಸಂಬಳ ನೀಡಿಲ್ಲ ಎಂಬ ಗಂಭೀರ ಆರೋಪದ ಜೊತೆಗೆ ಉಪ ಸಮಿತಿ ರಚನೆಯ ಬಗ್ಗೆ ಸರ್ಕಾರ ಏನು ಉತ್ತರ ನೀಡುತ್ತೆ ಕಾದುನೋಡಬೇಕಿದೆ.

ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
ಕಾಶಿ ಕ್ಷೇತ್ರಕ್ಕೆ ಹೋದಾಗ ಏನನ್ನು ಬಿಟ್ಟು ಬಂದರೆ ಒಳ್ಳೆಯದು?
ಕಾಶಿ ಕ್ಷೇತ್ರಕ್ಕೆ ಹೋದಾಗ ಏನನ್ನು ಬಿಟ್ಟು ಬಂದರೆ ಒಳ್ಳೆಯದು?
ಹೊಸ ವರ್ಷದ ಎರಡನೇ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಹೊಸ ವರ್ಷದ ಎರಡನೇ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ