ರಾಷ್ಟ್ರಪತಿಗೆ ಅಗೌರದ ಮಾತುಗಳನ್ನಾಡಿದ ಸಿದ್ದರಾಮಯ್ಯ: ಕ್ಷಮೆ ಕೇಳುವಂತೆ ಸಿಟಿ ರವಿ ಆಗ್ರಹ

ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಶೋಷಿತರ ಜಾಗೃತಿ ​​ಸಮಾವೇಶದಲ್ಲಿ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಏಕವಚನದಲ್ಲೇ ಮಾತನಾಡಿದ್ದರು. ಈ ಬಗ್ಗೆ ಬಿಜೆಪಿ ಟೀಕಿಸುತ್ತಿದೆ. ಕೂಡಲೇ ಕ್ಷಮೆ ಕೇಳುವಂತೆ ಸಿಟಿ ರವಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರ ಸೋಲಿನ ಭಯದಲ್ಲಿ ಶೋಷಿತರ ಜಾಗೃತಿ ​​ಸಮಾವೇಶ ನಡೆಸಿದ್ದಾರೆ ಎಂದರು.

ರಾಷ್ಟ್ರಪತಿಗೆ ಅಗೌರದ ಮಾತುಗಳನ್ನಾಡಿದ ಸಿದ್ದರಾಮಯ್ಯ: ಕ್ಷಮೆ ಕೇಳುವಂತೆ ಸಿಟಿ ರವಿ ಆಗ್ರಹ
ಸಿಟಿ ರವಿ ಮತ್ತು ಸಿದ್ದರಾಮಯ್ಯ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Rakesh Nayak Manchi

Updated on: Jan 28, 2024 | 8:59 PM

ಚಿಕ್ಕಮಗಳೂರು, ಜ.28: ಶೋಷಿತರ ಜಾಗೃತಿ ​​ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಿಂಚಿತ್ತು ಗೌರವ ಕೊಡದೆ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಬಿಜೆಪಿ ನಾಯಕ ಸಿಟಿ ರವಿ (CT Ravi) ಆಕ್ರೋಶ ಹೊರಹಾಕಿದ್ದಾರೆ. ಈ ಕೂಡಲೇ ಸಿದ್ದರಾಮಯ್ಯ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಶೋಷಿತರ ಹೆಸರಿನಲ್ಲಿ ಸಮಾವೇಶ ಮಾಡಿದ್ದಾರೆ. ಅಲ್ಲಿಗೆ ಬಂದವರು ಯಾರು? ಸ್ಪಾನ್ಸರ್ ಮಾಡಿದ್ದು ಯಾರು? ಭೈರತಿ ಸುರೇಶ್ ಕೋಟಿ ಕೋಟಿ ಹಣಕೊಟ್ಟು ಶೋಷಿತರ ಸಮಾವೇಶ ಮಾಡಿದ್ದಾರೆ. ಇವರು ಶೋಷಿತರಾ? ಹೆಸರು ಮಾತ್ರ ಶೋಷಿತ ಸಮಾವೇಶ ಅಷ್ಟೇ. ಸಿದ್ದರಾಮಯ್ಯನವರಿಗೆ ಅಧಿಕಾರ ತಪ್ಪಿ ಹೋಗಬಾರದು ಅಂತ ಶೋಷಿತ ಸಮಾವೇಶ ಮಾಡಿದ್ದಾರೆ ಎಂದರು.

ಶೋಷಿತರ ಸಮಾವೇಶದಲ್ಲಿ ಮಹಾಮಹಿಮ ರಾಷ್ಟ್ರಪತಿ ಅವರಿಗೆ ಕಿಂಚಿತ್ತು ಗೌರವ ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಏಕವಚನದಲ್ಲಿ ರಾಷ್ಟ್ರಪತಿ ಬಗ್ಗೆ ಮಾತನಾಡಿದ್ದಾರೆ. ಮಹಿಳೆ ಎನ್ನುವುದನ್ನು ನೋಡದೆ ಅವಳು ಇವಳು ಎಂದು ಮಾತನಾಡಿದ್ದಾರೆ. ನಾಲಿಗೆ ಕುಲ ಹೇಳುತ್ತದೆ ಎಂದು ಹಳ್ಳಿಗಳಲ್ಲಿ ಆಡು ಮಾತಿದೆ. ಆ ಸ್ಥಾನಕ್ಕೆ ಗೌರವ ಕೊಡದ ನಿಮ್ಮ ವ್ಯಕ್ತಿತ್ವ ರಾಜ್ಯಕ್ಕೆ ಕಪ್ಪು ಚುಕ್ಕಿ. ಇದು ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್​ನ ಸಂಸ್ಕೃತಿಯನ್ನು ತೋರಿಸುತ್ತದೆ. ರಾಷ್ಟ್ರಪತಿ ಸ್ಥಾನದ ಬಗ್ಗೆ ನಿಮಗೆ ಕಿಂಚಿತ್ತು ಗೌರವ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ರಾಷ್ಟ್ರಪತಿಗೆ ಏಕವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಹುದ್ದೆಯಿಂದ ಕೂಡಲೇ ವಜಾ ಮಾಡುವಂತೆ ಕುಮಾರಸ್ವಾಮಿ ಆಗ್ರಹ

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡಿದ ಪ್ರಕರಣ ಸಂಬಂಧ ಮಾತನಾಡಿದ ಸಿಟಿ ರವಿ, ಅನುಮತಿ ಪಡೆದು ಶಾಶ್ವತ ದ್ವಜ ಸ್ಥಂಭ ನಿರ್ಮಾಣ ಮಾಡಿ ಹನುಮ ಧ್ವಜ ಹಾಕಿದ್ದರು. ಆಗಸ್ಟ್ 15, ಜನವರಿ 26 ರಾಷ್ಟ್ರದ ಧ್ವಜ ಹಾರಿಸಿ ಉಳಿದಂತೆ ಧರ್ಮ ಧ್ವಜ ಹಾಕುತ್ತಿದ್ದರು. ಇದೀಗ ಜಿಲ್ಲಾಧಿಕಾರಿಯವರು ಏಕಾಏಕಿ ಹನುಮ ಧ್ವಜ ತೆರವು ಮಾಡುವುದಕ್ಕೆ ಕಾರಣ ಎನು? ಯಾರ ಒತ್ತಡದ ಮೇಲೆ ಧ್ವಜ ತೆರವು ಮಾಡಿದ್ದಾರೆ? ಧರ್ಮ ಧ್ವಜ ನಿಷೇಧಿತ ದ್ವಜವೇ? ಇದರ ಹಿಂದೆ ಪಿತೂರಿ ಇದೆ, ಕಾಂಗ್ರೆಸ್ ಮಾನಸಿಕತೆ ಇದು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರಿಗೆ ಸನಾತನ ಧರ್ಮದ ಮೇಲಿನ ಭಾವನೆ ಏನು ಅಂತ ಜನರಿಗೆ ಗೊತ್ತಾಗಿದೆ. ಹುಬ್ಬಳ್ಳಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿದವರ ಮೇಲೆ ಗೋಲಿಬಾರ್ ಮಾಡಿದ್ದರು. ಆ ಗೋಲಿಬಾರ್​ನಲ್ಲಿ ಐದು ಜನರನ್ನು ಸಾಯಿಸಿದ್ದರು. ಇಂದು ಹನುಮ ಧ್ವಜ ತೆಗೆದು, ರಾಷ್ಟ್ರ ದ್ವಜ ಹಾರಿಸಬೇಕಾ? ನಿಮಗೆ ಮತ್ತೊಂದು ಧ್ವಜಸ್ತಂಭ ಹಾಕಿ ಇನ್ನೂ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸುವ ಯೋಗ್ಯತೆ ಇಲ್ವಾ? ನಮಗೆ ರಾಷ್ಟ್ರಧ್ವಜದ ಮೇಲೆ ಗೌರವಿದೆ, ಆದರೆ, ಹನುಮ ಧ್ವಜ ತೆಗೆದೇ ಹಾರಿಸಬೇಕಾ? ಘಟನೆಯನ್ನು ಸವಾಲಾಗಿ ಸ್ವೀಕರಾ ಮಾಡುತ್ತೇವೆ‌. ರಾಷ್ಟ್ರ ಧ್ವಜ, ಧರ್ಮ ಧ್ವಜ ಹಿಡಿದು ಹೋರಾಟ ಮಾಡುತ್ತೇವೆ ಎಂದರು.

ನಾವು ರಾಷ್ಟ್ರಧ್ವಜವನ್ನೂ ಎಲ್ಲಕ್ಕಿಂತ ಎತ್ತರದಲ್ಲಿ ಹಾರಿಸುತ್ತೇವೆ, ಅದರ ಪಕ್ಕ ಹನುಮ ಧ್ವಜವನ್ನೂ ಹಾರಿಸುತ್ತೇವೆ. ಜಿಲ್ಲಾಡಳಿತ ಯಾರ ಕೈಗೊಂಬೆ ಅಲ್ಲ. ಹನುಮ‌ಧ್ವಜ ತೆಗೆಯುವ ಅಧಿಕಾರ ಯಾರೂ ಕೊಟ್ಟಿಲ್ಲ, ಯಾವ ಆದೇಶದ ಮೇರೆಗೆ ತೆಗೆದಿದ್ದೀರಿ? ಯಾರ ಓಲೈಕೆಗೆ ಹನುಮಧ್ವಜ ತೆರವು ಮಾಡಿದ್ದೀರಾ? ಮರ್ಯಾದೆಯಿಂದ ನೀವೇ ಧ್ವಜ ಹಾರಿಸಬೇಕು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?