ಕಂದಾಯ ಸಚಿವ ಆರ್​. ಅಶೋಕ್ PA ಗಂಗಾಧರ್ ವಿರುದ್ಧ ಕೊನೆಗೂ ದಾಖಲಾಯ್ತು FIR

| Updated By: ಸಾಧು ಶ್ರೀನಾಥ್​

Updated on: Jan 30, 2021 | 11:21 AM

ಶೃಂಗೇರಿ ರಿಜಿಸ್ಟ್ರಾರ್ H.S.ಚೆಲುವರಾಜು, ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ತಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದರು.

ಕಂದಾಯ ಸಚಿವ ಆರ್​. ಅಶೋಕ್ PA ಗಂಗಾಧರ್ ವಿರುದ್ಧ ಕೊನೆಗೂ ದಾಖಲಾಯ್ತು FIR
ಸಚಿವ ಅಶೋಕ್ PA ಗಂಗಾಧರ್​ (ಎಡ); ಸಬ್​ ರೆಜಿಸ್ಟ್ರಾರ್​ ಚೆಲುವರಾಜ್​ (ಬಲ)
Follow us on

ಚಿಕ್ಕಮಗಳೂರು: ಲಂಚ ಕೇಳಿದ ಆರೋಪದಡಿ ಕಂದಾಯ ಸಚಿವ R. ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ತಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶೃಂಗೇರಿ ಸಬ್​ ರಿಜಿಸ್ಟ್ರಾರ್ H.S. ಚೆಲುವರಾಜು ಅವರು ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದರು.

ಘಟನೆಯ ಹಿನ್ನೆಲೆ
ಜನವರಿ 24ರಂದು ಸಚಿವ ಆರ್ ಅಶೋಕ್ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸಚಿವ ಆರ್ ಅಶೋಕ್ ಪಿಎ ಗಂಗಾಧರ್, ಶೃಂಗೇರಿ ಸಬ್​ ರಿಜಿಸ್ಟ್ರಾರ್ H.S. ಚೆಲುವರಾಜು ಅವರಿಗೆ ಕರೆ ಮಾಡಿ ಸಚಿವರು ಶೃಂಗೇರಿಗೆ ಬರ್ತಿದ್ದಾರೆ. ನೀವು ತರ್ತೀರಾ ಎಂದು ಕೇಳಿದ್ದಾರೆ. ಆ ನಂತರ, ಅದೇ ದಿನ ರೂಮ್​ಗೆ ಕರೆಯಿಸಿಕೊಂಡು ಕೊಡಿ ಕೊಡಿ ಎಂದು ಪೀಡಿಸಿದ್ದಾರಂತೆ.
ಏನು ತಂದಿದ್ದೀರಾ ಅದನ್ನು ಕೊಡಿ ಅಂತಾನೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಚೆಲುವರಾಜು ಆರೋಪ ಮಾಡಿದ್ದರು. ಹಾಗೂ ಈ ಬಗ್ಗೆ ದೂರು ದಾಖಲಿಸಿದ್ದರು. ಹಾಗಾಗಿ ಸಚಿವ ಆರ್. ಅಶೋಕ್ ತಮ್ಮ ಪಿಎ ಗಂಗಾಧರ್​ನನ್ನು ಮಾತೃ‌ ಇಲಾಖೆಗೆ ಕಳುಹಿಸಿದ್ದರು.

ಲಂಚ ಆರೋಪ; ಮಾತೃ ಇಲಾಖೆಗೆ ಪಿಎ ಗಂಗಾಧರ್, ಸಚಿವ ಆರ್.ಅಶೋಕ್ ನಿರ್ಧಾರ

ಲಂಚ ಆರೋಪ: ಶೃಂಗೇರಿ ಸಬ್ ರಿಜಿಸ್ಟ್ರಾರ್​ನಿಂದ ಸಚಿವ ಆರ್.ಅಶೋಕ್ ಪಿಎ ವಿರುದ್ಧ ದೂರು ದಾಖಲು