ಚಿಕ್ಕಮಗಳೂರು: ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇದರ ನಡುವೆ ಒಮಿಕ್ರಾನ್ ಕರ್ನಾಟಕಕ್ಕೆ ಕಾಲಿಟ್ಟಿರುವುದು ಆತಂಕ ದುಪ್ಪಟ್ಟಾಗಿದೆ. ಕರ್ನಾಟಕದಲ್ಲಿ ಎರಡು ಒಮಿಕ್ರಾನ್ ಕೇಸ್ ದಾಖಲಾಗಿದ್ದು ದೇಶದಲ್ಲಿ ನಿನ್ನೆ ಮತ್ತೆರಡು ಕೇಸ್ ಪತ್ತೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸಿಗೋಡು ಗ್ರಾಮದ ಬಳಿಯಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟಗೊಂಡಿದೆ. ವಸತಿ ಶಾಲೆಯಲ್ಲಿರುವ 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಈಗ ಜವಾಹರ್ ನವೋದಯ ವಿದ್ಯಾಲಯ ಸೀಲ್‌ಡೌನ್ ಮಾಡಲಾಗಿದೆ.
ಮೂವರು ವಿದ್ಯಾರ್ಥಿಗಳು, 4 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಸತಿ ಶಾಲೆಯಲ್ಲಿದ್ದ 418 ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ವಿದ್ಯಾರ್ಥಿಗಳು, ಸಿಬ್ಬಂದಿಗೆ ರೋಗ ಲಕ್ಷಣಗಳಿಲ್ಲ. ಜಿಲ್ಲಾಡಳಿತ ವಸತಿ ಶಾಲೆಯಲ್ಲಿಯೇ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ. ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಜಗತ್ತಿನ 31 ದೇಶಗಳಲ್ಲಿ ಒಮಿಕ್ರಾನ್ ಪತ್ತೆ
ದಕ್ಷಿಣ ಆಫ್ರಿಕಾದಲ್ಲಿ 227, ಬೋಟ್ಸ್ವಾನ್ 21 ಸೋಂಕಿತರು ಪತ್ತೆಯಾದ್ರೆ, ಬೆಲ್ಜಿಯಂ 6, ಇಂಗ್ಲೆಂಡ್ 74, ಜೆರ್ಮನ್ 51, ಆಸ್ಟ್ರೇಲಿಯಾ 11, ಇಟಲಿ 4, ಜೆಕ್ ಗಣರಾಜ್ಯ 1, ಡೆನ್ಮಾರ್ಕ್ 2, ಆಸ್ಟ್ರಿಯಾ 11, ಕೆನಡಾ 10 , ಸ್ವಿಡನ್ನಲ್ಲಿ 1, ಸ್ವಿಟ್ಜರ್ಲ್ಯಾಂಡ್ ನಲ್ಲಿ 6, ಸ್ಪೇನ್ನಲ್ಲಿ 7, ಪೋರ್ಚುಗಲ್ ನಲ್ಲಿ 13, ಜಪಾನ್ 2, ಫ್ರಾನ್ಸ್ 4, ಘನಾ 33, ದಕ್ಷಿಣ ಕೋರಿಯಾದಲ್ಲಿ 3, ನೈಜೀರಿಯಾದಲ್ಲಿ 3, ಬ್ರಿಜಿಲ್ ನಲ್ಲಿ 2, ಅಮೆರಿಕದಲ್ಲಿ 16 ಒಮಿಕ್ರಾನ್ ಕೇಸ್ ಪತ್ತೆಯಾಗಿವೆ.
ದೇಶದ ಎಲ್ಲ ಪ್ರಮುಖ ನಗರಗಳಲ್ಲೂ ಒಮಿಕ್ರಾನ್ ಇದೆ
ಒಂದ್ಕಡೆ ಒಮಿಕ್ರಾನ್ ತಲೆನೋವು ತಂದಿಟ್ಟಿದ್ರೆ, CSIR-CCMB ಮುಖ್ಯಸ್ಥ ರಾಕೇಶ್ ಮಿಶ್ರಾ ಆತಂಕ ಪಡೋ ಅಗತ್ಯವಿಲ್ಲ ಎಂದಿದ್ದಾರೆ. ಯಾಕಂದ್ರೆ, ದೇಶದಲ್ಲಿ ಅಂದ್ರೆ ಕರ್ನಾಟಕದಲ್ಲಿ ಯಾವುದೇ ವಿದೇಶ ಪ್ರಯಾಣದ ಹಿಸ್ಟರಿ ಇಲ್ಲದವರಲ್ಲೂ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ ಹೀಗಾಗಿ, ಈ ವೈರಸ್ ವಿದೇಶದಿಂದ ಬರ್ತಿಲ್ಲ ಈಗಾಗಲೇ ಒಮಿಕ್ರಾನ್ ದೇಶದಲ್ಲೇ ಇದೆ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ನೀಡಿಕೆಯಲ್ಲಿ ಶೇ.100ರ ಸಾಧನೆ ಮಾಡಿದ ಹಿಮಾಚಲ ಪ್ರದೇಶ; ಎರಡೂ ಡೋಸ್ ಪೂರ್ಣ, ಡಿ.5ಕ್ಕೆ ಸನ್ಮಾನ ಕಾರ್ಯಕ್ರಮ