ಚಿಕ್ಕಮಗಳೂರು: ತಾನು ಬೆಳೆದ ಬೆಳೆ ಬೆಳೆ ಉಳಿಸುವಂತೆ ಪ್ರಾರ್ಥಿಸಿ ರೈತರೊಬ್ಬರು ಗಣೇಶನಿಗೆ ಜೀವಂತ ಇಲಿ ಸಮರ್ಪಣೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ. ಕೃಷಿಯನ್ನು ಉಳಿಸುವಂತೆ ಕೇಳಿಕೊಂಡು ಗಣೇಶನಿಗೆ ರೈತ ಭಕ್ತರೊಬ್ಬರು ಇಲಿ ನೀಡಿದ್ದಾರೆ. ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಭಕ್ತರೊಬ್ಬ ಗಣಪನಿಗೆ ಹೀಗೆ ಮೊರೆ ಹೋಗಿದ್ದಾರೆ. ಜಮೀನಿನಲ್ಲಿ ಇದ್ದ ಇಲಿಯನ್ನ ಹಿಡಿದು ತಂದು ಗಣೇಶನಿಗೆ ಕೊಟ್ಟಿದ್ದಾರೆ.
ಇಲಿಗಳು ಹೊಲದಲ್ಲಿ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಹೀಗಾಗಿ ಇಲಿಗಳಿಂದ ಬೆಳೆ ಹಾನಿ ತಪ್ಪಿಸುವಂತೆ ಗಣೇಶನಿಗೆ ಮೊರೆ ಹೋಗಿದ್ದಾರೆ. ಮರ್ಕಲ್ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಇಲಿ ನೀಡಿದ್ದಾರೆ. ಮರ್ಕಲ್ ಗ್ರಾಮದ ನಿತಿನ್ ಎಂಬವರು ಗಣೇಶನಿಗೆ ಮೂಷಿಕವನ್ನ ಅರ್ಪಿಸಿದ ಭಕ್ತರು. ಗಣೇಶನಿಗೆ ತಾನು ತಂದಿದ್ದ ಇಲಿ ಹೊರತೆಗೆದು ಅರ್ಪಿಸುತ್ತಿದ್ದಂತೆ ಆ ಮೂಷಿಕ ಕಾಲ್ಕಿತ್ತಿದೆ.
ಬೆಂಗಳೂರು: ದೊಡ್ಡಗಣೇಶ ದೇಗುಲದಲ್ಲಿ ವಿಶೇಷ ಪೂಜೆ
ಕೊರೊನಾ ನಡುವೆ ಗಣೇಶ ಚತುರ್ಥಿ ಸಂಭ್ರಮ ಕರ್ನಾಟಕದ ಎಲ್ಲೆಡೆ ನಡೆಯುತ್ತಿದೆ. ದೊಡ್ಡ ಗಣೇಶ ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ. ಹಬ್ಬದ ನಿಮಿತ್ತ ದರ್ಶನ ಪಡೆಯಲು ಭಕ್ತ ಜನರು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಕೊವಿಡ್19 ಕಾರಣದಿಂದಾಗಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಹೀಗಾಗಿ ದೇವಾಲಯದಲ್ಲಿ ತೀರ್ಥ, ಪ್ರಸಾದ ವಿತರಣೆಯಿಲ್ಲ. ವಿಶೇಷ ಪೂಜೆಗೆ ಅವಕಾಶವಿಲ್ಲ. ಕೇವಲ ದೇವರ ದರ್ಶನ ಮಾತ್ರ ಸಿಗುತ್ತಿದೆ. ಮಾಸ್ಕ್ ಧರಿಸಿ ಸರತಿ ಸಾಲಿನಲ್ಲಿ ಆಗಮಿಸಿ ಜನ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Ganesha chaturthi 2021: ಗಣಪತಿ ಉತ್ಸವದ ಆಚರಣೆ ಆರಂಭವಾಗಿದ್ದು ಯಾವಾಗ? ಗಣೇಶೋತ್ಸವದ ಉದ್ದೇಶ ಏನು?
ಇದನ್ನೂ ಓದಿ: Ganesh Chaturthi 2021: 2 ಸಾವಿರ ನೀಡಿ ಗೌರಿ ಗಣೇಶ ಮೂರ್ತಿ ಖರೀದಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
Published On - 5:51 pm, Fri, 10 September 21