ಔಷಧೀಯ ಗುಣಗಳಿರುವ ನೇರಳೆ ಹಣ್ಣಿಗೆ ಫುಲ್ ಡಿಮ್ಯಾಂಡ್

| Updated By:

Updated on: Jun 28, 2020 | 6:56 PM

ಚಿಕ್ಕಬಳ್ಳಾಪುರ: ನೇರಳೆ ಹಣ್ಣಿನಲ್ಲಿ ವಿವಿಧ ಔಷಧೀಯ ಗುಣಗಳಿವೆ, ಕೆಲವು ಕಾಯಿಲೆಗಳಿಗೆ ನೇರಳೆ ಹಣ್ಣು ರಾಮಬಾಣ. ಇದ್ರಿಂದ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಮುಗಿಬಿದ್ದು ನೇರಳೆ ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಎಲ್ಲಾ ಹಣ್ಣುಗಳ ಮೇಲೆ ಕೊರೊನಾ ಎಫೆಕ್ಟ್ ಆದ್ರೂ ನೇರಳೆ ಹಣ್ಣಿನ ಮೇಲೆ ಕೊರೊನಾ ಕರಿಛಾವೆ ಬಿದ್ದಿಲ್ಲ. ಕಾರಣ ಅದರಲ್ಲಿರುವ ಔಷಧಿಯ ಗುಣಗಳ ಮಹಿಮೆ. ಹೌದು! ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನ ವಾಸಿಮಾಡಬಲ್ಲ, ಔಷಧೀಯ ಗುಣಗಳಿವೆ ಅನ್ನೋದು ಗೊತ್ತಾಗುತ್ತಿದ್ದಂತೆ, ನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಾತ್ರ […]

ಔಷಧೀಯ ಗುಣಗಳಿರುವ ನೇರಳೆ ಹಣ್ಣಿಗೆ ಫುಲ್ ಡಿಮ್ಯಾಂಡ್
Follow us on

ಚಿಕ್ಕಬಳ್ಳಾಪುರ: ನೇರಳೆ ಹಣ್ಣಿನಲ್ಲಿ ವಿವಿಧ ಔಷಧೀಯ ಗುಣಗಳಿವೆ, ಕೆಲವು ಕಾಯಿಲೆಗಳಿಗೆ ನೇರಳೆ ಹಣ್ಣು ರಾಮಬಾಣ. ಇದ್ರಿಂದ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಮುಗಿಬಿದ್ದು ನೇರಳೆ ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಎಲ್ಲಾ ಹಣ್ಣುಗಳ ಮೇಲೆ ಕೊರೊನಾ ಎಫೆಕ್ಟ್ ಆದ್ರೂ ನೇರಳೆ ಹಣ್ಣಿನ ಮೇಲೆ ಕೊರೊನಾ ಕರಿಛಾವೆ ಬಿದ್ದಿಲ್ಲ. ಕಾರಣ ಅದರಲ್ಲಿರುವ ಔಷಧಿಯ ಗುಣಗಳ ಮಹಿಮೆ.

ಹೌದು! ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನ ವಾಸಿಮಾಡಬಲ್ಲ, ಔಷಧೀಯ ಗುಣಗಳಿವೆ ಅನ್ನೋದು ಗೊತ್ತಾಗುತ್ತಿದ್ದಂತೆ, ನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಾತ್ರ ನೇರಳೆ ಹಣ್ಣು ಕಾಣಸಿಗುತ್ತೆ. ಹಾಗಾಗಿ ಚಿಕ್ಕಬಳ್ಳಾಪುರದ ಗಲ್ಲಿ ಗಲ್ಲಿಗಳಲ್ಲಿ ನೇರಳೆ ಹಣ್ಣಿನದ್ದೇ ಕಾರುಬಾರು. ಕೆ.ಜಿ ನೇರಳೆ ಹಣ್ಣಿಗೆ 200 ರೂಪಾಯಿ ಕೊಟ್ಟು ಮಧುಮೇಹಿಗಳು ಖರೀದಿ ಮಾಡುತ್ತಿದ್ದಾರೆ.

ನೇರಳೆ ಮರಕ್ಕೂ ಡಿಮ್ಯಾಂಡ್
ನೇರಳೆ ಮರದ ಎಲೆ, ಕಾಯಿ, ತೊಗಟೆ, ಹಣ್ಣು, ಬೀಜ ಎಲ್ಲವೂ ಔಷಧೀಯ ಗುಣಗಳನ್ನ ಒಳಗೊಂಡಿದೆ. ಇದ್ರಿಂದ ನೇರಳೆ ಮರಗಳನ್ನ ಬೆಳೆದ ರೈತರಿಗೆ ಫುಲ್ ಡಿಮ್ಯಾಂಡ್ ಇದೆ. ನೇರಳೆ ಮರಕ್ಕೆ ಬಂಗಾರದ ಬೆಲೆ ಬಂದ ಕಾರಣ, ಕಾಡು ಮೇಡುಗಳಲ್ಲಿ ಇರುತ್ತಿದ್ದ ನೇರಳೆ ಮರಗಳು ಈಗ ರೈತರ ಜಮೀನುಗಳಲ್ಲಿ ತೋಟಗಳಾಗಿ ಮಾರ್ಪಡುತ್ತಿವೆ.

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೋ ಹಾಗೆ ಮೊದಲು ನೇರಳೆ ಹಣ್ಣನ್ನು ನೋಡಿ ಮೂಗು ಮುರಿಯುತ್ತಿದ್ದವರೇ ಹೆಚ್ಚು. ಆದ್ರೆ ಇದೀಗ ಮುಗಿಬಿದ್ದು ನೇರಳೆ ಹಣ್ಣನ್ನು ಖರೀದಿ ಮಾಡುತ್ತಿದ್ದಾರೆ. ಇದ್ರಿಂದ ನೇರಳೆ ಬೆಳೆದ ರೈತರಿಗೆ ವರದಾನವಾದ್ರೆ, ಗ್ರಾಹಕರಿಗೆ ನೈಸರ್ಗಿಕ ಔಷಧಿ ರೂಪದ ಹಣ್ಣನ್ನ ಸೇವಿಸಿದ ಸಂತೃಪ್ತಿಯಿದೆ.

Published On - 6:23 pm, Sun, 28 June 20