ಕಾಫಿನಾಡಿನಲ್ಲಿ ವೈದ್ಯರು, ವಕೀಲರು, ಪೊಲೀಸರಿಗೂ ಕೊರೊನಾ ಸೋಂಕು
ಚಿಕ್ಕಮಗಳೂರು: ಜಗತ್ತಿಗೆನೇ ಮಹಾಮಾರಿಯಾಗಿ ಕಾಡ್ತಿರೋ ಕೊರೊನಾ ಆರಂಭದ ದಿನಗಳಲ್ಲಿ ಪ್ರಕೃತಿ ಸೌಂದರ್ಯದ ಖನಿ ಚಿಕ್ಕಮಗಳೂರಿನತ್ತ ಸುಳಿದಿರಲೇ ಇಲ್ಲ. ಜಿಲ್ಲೆಯ ಜನ, ಕಾಫಿನಾಡು ಶತಮಾನಗಳಿಂದ ಗ್ರೀನ್ ಜೋನ್, ಈಗಲೂ ಗ್ರೀನ್ ಜೋನ್ ಎಂದು ಬೀಗುತ್ತಿದ್ದರು. ಆದರೆ, ಮೇ 19ರ ನಂತರ ಚಿತ್ರಣವೇ ಬದಲಾಯಿತು. ಅಂದು ಮೂಡಿಗೆರೆ ವೈದ್ಯ ಹಾಗೂ ತರೀಕೆರೆ ಗರ್ಭಿಣಿ ಪ್ರಕರಣದಿಂದ ಆರಂಭವಾದ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಈಗ 50ಕ್ಕೆ ಏರಿದೆ. ಆ ಎರಡು ಪ್ರಕರಣಗಳು ಅದೃಷ್ಟವಶಾತ್ ನೆಗಟಿವ್ ಎಂದು ನಂತರ ಬಂದರೂ, ಅಲ್ಲಿಂದ ಆರಂಭವಾದ ಸೋಂಕಿತರ […]
ಚಿಕ್ಕಮಗಳೂರು: ಜಗತ್ತಿಗೆನೇ ಮಹಾಮಾರಿಯಾಗಿ ಕಾಡ್ತಿರೋ ಕೊರೊನಾ ಆರಂಭದ ದಿನಗಳಲ್ಲಿ ಪ್ರಕೃತಿ ಸೌಂದರ್ಯದ ಖನಿ ಚಿಕ್ಕಮಗಳೂರಿನತ್ತ ಸುಳಿದಿರಲೇ ಇಲ್ಲ. ಜಿಲ್ಲೆಯ ಜನ, ಕಾಫಿನಾಡು ಶತಮಾನಗಳಿಂದ ಗ್ರೀನ್ ಜೋನ್, ಈಗಲೂ ಗ್ರೀನ್ ಜೋನ್ ಎಂದು ಬೀಗುತ್ತಿದ್ದರು.
ಆದರೆ, ಮೇ 19ರ ನಂತರ ಚಿತ್ರಣವೇ ಬದಲಾಯಿತು. ಅಂದು ಮೂಡಿಗೆರೆ ವೈದ್ಯ ಹಾಗೂ ತರೀಕೆರೆ ಗರ್ಭಿಣಿ ಪ್ರಕರಣದಿಂದ ಆರಂಭವಾದ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಈಗ 50ಕ್ಕೆ ಏರಿದೆ. ಆ ಎರಡು ಪ್ರಕರಣಗಳು ಅದೃಷ್ಟವಶಾತ್ ನೆಗಟಿವ್ ಎಂದು ನಂತರ ಬಂದರೂ, ಅಲ್ಲಿಂದ ಆರಂಭವಾದ ಸೋಂಕಿತರ ಸಂಖ್ಯೆ ಈಗ ಅರ್ಧ ಶತಕ ಬಾರಿಸಿದೆ.
ವೈದ್ಯರು, ವಕೀಲರು, ಪೊಲೀಸರು ಹೀಗೆ ಯಾರನ್ನೂ ಬಿಡುತ್ತಿಲ್ಲ ಕೊರೊನಾ ಮುಂಬೈ ರಿಟರ್ನ್ಸ್ ಕೇಸ್‌ಗಳು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 50ಕ್ಕೇರಿದೆ. ಇವುಗಳಲ್ಲಿ ಹತ್ತರಿಂದ ಹದಿನೈದು ಪ್ರಕರಣಗಳು ತೀವ್ರ ಆತಂಕ, ಭಯ ಹುಟ್ಟಿಸಿವೆ. ಯಾಕಂದರೆ, ಕಳೆದ ಆರು ತಿಂಗಳಿಂದ ಜೈಲಿನಲ್ಲಿದ್ದ ಖೈದಿಗೂ ಪಾಸಿಟಿವ್, ಕಳ್ಳನನ್ನ ಕಂಬಿ ಹಿಂದೆ ಹಾಕಿರೋ ಖಾಕಿಗೂ ಪಾಸಿಟಿವ್, ಕೋರ್ಟಿನಲ್ಲಿ ವಾದ ಮಾಡೋ ಲಾಯರ್‌ಗೂ ಸೋಂಕು. ಎಂಎನ್‌ಸಿ ಕಂಪನಿಯ ಯುವಕ-ಯುವತಿಗೂ ಕೊರಾನಾ ನಂಜು. ಇಷ್ಟೇ ಅಲ್ಲ ಈಗ ರಾಜಕೀಯ ಪಕ್ಷಗಳ ಲೀಡರ್‌ಗಳಿಗೂ ಸೋಂಕು ತಗುಲಿದೆ.
ಆತಂಕದಲ್ಲಿ ಚಿಕ್ಕಮಗಳೂರು ಜನತೆ ಹೀಗೆ ಜಿಲ್ಲೆಯಲ್ಲಿ ಪ್ರತಿದಿನ ಒಂದಲ್ಲ ಒಂದು ಪಾಸಿಟಿವ್ ಕೇಸ್ ಬರುತ್ತಿವೆ. ಇವುಗಳಲ್ಲಿ ಕೆಲವೊಂದು ಕೇಸ್‌ಗಳು ಜಿಲ್ಲಾಡಳಿತಕ್ಕೆ ತಲೆನೋವು ತರಿಸಿವೆ. ಜಿಲ್ಲೆಯ50ಪ್ರಕರಣಗಳಲ್ಲಿ ಚಿಕಿತ್ಸೆ ಬಳಿಕ 27 ಜನ ಗುಣಮುಖರಾಗಿದ್ದಾರೆ. ಇನ್ನೂ 22 ಸಕ್ರೀಯ ಕೇಸ್‌ಗಳಿವೆ. ಈ ಹೆಮ್ಮಾರಿ ಕೊರೊನಾಗೆ 72 ವರ್ಷದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಕಳೆದ ನಲವತ್ತು ದಿನಗಳ ಹಿಂದೆ ಗ್ರೀನ್ ಜೋನ್ ಅಂತ ಬೀಗುತ್ತಿದ್ದ ಜಿಲ್ಲೆಯ ಜನ ಈಗ ಆತಂಕಕ್ಕೀಡಾಗಿದ್ದಾರೆ. ಎಲ್ಲೋ ಇದ್ದ ಕೊರೊನಾ ಈಗ ಪಕ್ಕದ ಮನೆಗೂ ಬಂದಿದ್ದು, ನಾಳೆ ನಮಗೂ ಬರುವುದಿಲ್ಲ ಅನ್ನೋ ಗ್ಯಾರಂಟಿಯಾದ್ರೂ ಏನು ಎಂದು ಕಂಗಾಲಾಗಿದ್ದಾರೆ.