Pubg: ಪಬ್ಜಿ ಆಡಬೇಡ ಎಂದು ತಂದೆ-ಮಗನ ಮಧ್ಯೆ ಜಗಳ, ಇಬ್ಬರ ಜಗಳದಲ್ಲಿ ಪ್ರಾಣ ಕಳೆದುಕೊಂಡ ತಾಯಿ

| Updated By: ಆಯೇಷಾ ಬಾನು

Updated on: May 25, 2022 | 5:18 PM

ಕುಡಿದ ಮತ್ತಿನಲ್ಲಿದ್ದ ಇಮ್ತಿಯಾಜ್ ಗುಂಡು ಹಾರಿಸಿ ಪತ್ನಿಯನ್ನು ಹತ್ಯೆಗೈದಿದ್ದಾರೆ. ಆರೋಪಿ ಇಮ್ತಿಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Pubg: ಪಬ್ಜಿ ಆಡಬೇಡ ಎಂದು ತಂದೆ-ಮಗನ ಮಧ್ಯೆ ಜಗಳ, ಇಬ್ಬರ ಜಗಳದಲ್ಲಿ ಪ್ರಾಣ ಕಳೆದುಕೊಂಡ ತಾಯಿ
ಇಮ್ತಿಯಾಜ್ ಬಂಧಿಸಿದ ಪೊಲೀಸರು
Follow us on

ಚಿಕ್ಕಮಗಳೂರು: ಜಿಲ್ಲೆಯ ಹಾಗಲಖಾನ್ ಎಸ್ಟೇಟ್ನಲ್ಲಿ ಭೀಕರ ದುರ್ಘಟನೆಯೊಂದು ಸಂಭವಿಸಿದೆ. ಮಗನ ಪಬ್ಜಿ ಹುಚ್ಚಿಗೆ ತಾಯಿ ಬಲಿಯಾಗಿದ್ದಾರೆ. ಮೈಮುನಾ(40) ಕೊಲೆಯಾದ ಮಹಿಳೆ. ಪಬ್ಜಿ ಆಡದಂತೆ ಮಗನ ಜೊತೆ ತಂದೆ ಇಮ್ತಿಯಾಜ್ ಜಗಳವಾಡುತ್ತಿದ್ದರು. ಈ ವೇಳೆ ನಿನ್ನ ಸಾಯಿಸುತ್ತೇನೆಂದು ಅಪ್ಪ ಮಗನಿಗೆ ಕೋವಿ ಹಿಡಿದಿದ್ದ. ಕೋಪದಲ್ಲಿ ಗುಂಡು ಹಾಕಿಸಿದರೆ ಮಗನ ಪ್ರಾಣ ಹೋಗುತ್ತೆ ಎಂದು ತಾಯಿ ಮೈಮುನಾ ಅಡ್ಡ ಬಂದಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಇಮ್ತಿಯಾಜ್ ಗುಂಡು ಹಾರಿಸಿ ಪತ್ನಿಯನ್ನು ಹತ್ಯೆಗೈದಿದ್ದಾರೆ. ಆರೋಪಿ ಇಮ್ತಿಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಪರಿಚಿತ ವ್ಯಕ್ತಿ ಮೇಲೆ ಲಾರಿ ಹಾಯ್ದು ವ್ಯಕ್ತಿ ಸ್ಥಳದಲ್ಲಿ ಸಾವು
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಟ್ರಕ್ ಟರ್ಮಿನಲ್ ಬಳಿ ಅಪರಿಚಿತ ವ್ಯಕ್ತಿ ಮೇಲೆ ಲಾರಿ ಹಾಯ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆರಳಿಗೆ ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ತಮಿಳುನಾಡು ಮೂಲದ ಲಾರಿಯೊಂದು ಹತ್ತಿದ ಪರಿಣಾಮ ಸ್ಥಳದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಡ್ರಾಪ್‌ ಕೇಳೋ ನೆಪದಲ್ಲಿ ದರೋಡೆ
ಡ್ರಾಪ್ ಕೊಡೋಕೆ ಗಾಡಿ ನಿಲ್ಲಿಸಿದವನ ಮೇಲೆ ಅಟ್ಯಾಕ್ ಮಾಡಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಹೊರಮಾವು ಬಳಿ, ವಿಜಯಾ ಬ್ಯಾಂಕ್ ಕಾಲೊನಿ ಎಕ್ಸ್ಟೆನ್ಶನ್ ಬಳಿ‌ ನಡೆದಿದೆ. ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಹಾಗೂ ಬೈಕ್ ಕಸಿದು ಖದೀಮರು ಪರಾರಿಯಾಗಿದ್ದಾರೆ. ಮೇ 18 ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬೈಕ್‌ಗೆ ಪೆಟ್ರೋಲ್ ತುಂಬಿಸಲು ಸಹಾಯ ಬೇಕು ಎಂದು ಬೈಕ್ ಗೆ ಅಡ್ಡ ಹಾಕಿದ್ದ ದರೋಡೆಕೋರರು ಬಳಿಕ ಬೈಕ್ ನಿಲ್ಲಿಸುತ್ತಿದ್ದಂತೆ ಚಾಕು ತೆಗೆದು ಎರಡ್ಮೂರು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ‌ಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತರುಣ್ ಅಗರ್ವಾಲ್ ಹಲ್ಲೆಗೊಳಗಾಗಿರುವ ವ್ಯಕ್ತಿ. ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯಲ್ಲಿ ಕೆಲಸ ಮಾಡ್ತಿರುವ ತರುಣ್ ಬಳಿ‌ ಇದ್ದ ಎರಡು ಮೊಬೈಲ್ ಹಾಗೂ‌ ಹೊಂಡಾ ಆ್ಯಕ್ಟಿವಾ ಕಸಿದು ಆರೋಪಿಗಳು ಪರಾರಿಯಾಗಿದ್ದಾರೆ. ಅದು ಸಾಲದು ಅಂತ ಏರಿಯಾದ ಮತ್ತೊಂದು ರಸ್ತೆಯಲ್ಲೂ ಬೈಕ್ ಎಗರಿಸಿದ್ದಾರೆ. ಆ ದೃಶ್ಯವೂ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಫ್‌ಐಆರ್ ದಾಖಲಿಸಿ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Published On - 3:36 pm, Wed, 25 May 22