ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ; ಸ್ವಪಕ್ಷದ ಮುಖಂಡರ ವಿರುದ್ಧ ಎಂಪಿ ಕುಮಾರಸ್ವಾಮಿ ಗರಂ

| Updated By: sandhya thejappa

Updated on: Jan 02, 2022 | 11:26 AM

ಸಂಪುಟ ಪುನಾರಚನೆ, ನಿಗಮ ಮಂಡಳಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಆದರೂ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.

ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ; ಸ್ವಪಕ್ಷದ ಮುಖಂಡರ ವಿರುದ್ಧ ಎಂಪಿ ಕುಮಾರಸ್ವಾಮಿ ಗರಂ
ಎಂಪಿ ಕುಮಾರಸ್ವಾಮಿ
Follow us on

ಚಿಕ್ಕಮಗಳೂರು: ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಅಂತ ಸ್ವಪಕ್ಷದ ಮುಖಂಡರ ವಿರುದ್ಧ ಮೂಡಿಗೆರೆಯಲ್ಲಿ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ (MP Kumaraswamy) ಗರಂ ಆಗಿದ್ದಾರೆ. ಕಾಂಗ್ರೆಸ್ ಸೇರುತ್ತೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡರೇ ಅಪಪ್ರಚಾರ ಮಾಡುತ್ತಿದ್ದಾರೆ. ನಾನೇಕೆ ಕಾಂಗ್ರೆಸ್ಗೆ ಹೋಗಲಿ, ನಾನು ಪಕ್ಷದ ನಿಷ್ಠಾವಂತ. ಬಿಜೆಪಿ ಮುಖಂಡರು, ಪಕ್ಷ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನಾನು ಕಾಂಗ್ರೆಸ್ ಸೇರುವುದು ಸುಳ್ಳು ಅಂತ ಎಂಪಿ ಕುಮಾರಸ್ವಾಮಿ ಹೇಳಿದರು.

ಸಂಪುಟ ಪುನಾರಚನೆ, ನಿಗಮ ಮಂಡಳಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಆದರೂ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ವಿಪಕ್ಷದವರಿಗಿಂತ ನಮ್ಮ ಪಕ್ಷದವರೇ ಅಪಪ್ರಚಾರ ಮಾಡ್ತಿದ್ದಾರೆ. ನಮ್ಮವರೇ ಕೆಲವರು ಕಾಂಗ್ರೆಸ್ ಸೇರುವ ಸುದ್ದಿ ಹರಿಬಿಡುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

ಮತದಾರರಿಂದ ಆಣೆ ಪ್ರಮಾಣ ಮಾಡಿಸಿಕೊಂಡ ರೇಣುಕಾಚಾರ್ಯ
ದಾವಣಗೆರೆ: ಚುನಾವಣೆಯಲ್ಲಿ ತನಗೇ ವೋಟ್ ಹಾಕಬೇಕೆಂದು ಹೊನ್ನಾಳಿ ತಾಲೂಕಿನ ಬಿಜೆಪಿ ಶಾಸಕ ರೇಣುಕಾಚಾರ್ಯ ಮತದಾರರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ವೋಟ್ ಹಾಕುವುದಾಗಿ ಎರಡು ಕೈ ಎತ್ತಿ ಹೇಳಿ ಅಂತ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಬೊಮ್ಮಾಯಿ ಸರ್ಕಾರ 1 ಲಕ್ಷ ಕೊವಿಡ್ ಪರಿಹಾರ ನೀಡುತ್ತಿದೆ. ನಾನು ನಿಮಗೆ 10 ಸಾವಿರ ವೈಯಕ್ತಿಕ ಹಣ ನೀಡುತ್ತಿದ್ದೇನೆ. ನೀವು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕು. ನಿಮ್ಮ ಊರಿನಲ್ಲಿ ಎಲ್ಲರಿಗೂ ಹೇಳಿ ಅಂತ ಮತದಾರರ ಬಳಿ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ರೇಣುಕಾಚಾರ್ಯ ಆಣೆ ಪ್ರಮಾಣ ಮಾಡಿಸುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ

ಮುಖ್ಯಮಂತ್ರಿಗಿಂತ ಅವರ ಮಗ 5 ಪಟ್ಟು ಹೆಚ್ಚು ಶ್ರೀಮಂತ !-ಯಾವ ರಾಜ್ಯ? ಆಸ್ತಿ ವಿವರದ ಮಾಹಿತಿ ಇಲ್ಲಿದೆ

Omicron ಭಾರತದಲ್ಲಿ 1,500 ಗಡಿ ದಾಟಿದ ಒಮಿಕ್ರಾನ್ ಪ್ರಕರಣ; 23 ರಾಜ್ಯಗಳಲ್ಲಿ ಸೋಂಕು ಪತ್ತೆ