Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿಗಿಂತ ಅವರ ಮಗ 5 ಪಟ್ಟು ಹೆಚ್ಚು ಶ್ರೀಮಂತ !-ಯಾವ ರಾಜ್ಯ? ಆಸ್ತಿ ವಿವರದ ಮಾಹಿತಿ ಇಲ್ಲಿದೆ

ಪ್ರತಿವರ್ಷ ಕೊನೇ ದಿನ  ಸರ್ಕಾರದ ಸಂಪುಟದ ಎಲ್ಲ ಸಚಿವರೂ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು. ಅದು ಸರ್ಕಾರಿ ವೆಬ್​ಸೈಟ್​ನಲ್ಲಿ ಉಲ್ಲೇಖವಾಗಬೇಕು ಎಂದು ಈ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿತ್ತು.

ಮುಖ್ಯಮಂತ್ರಿಗಿಂತ ಅವರ ಮಗ 5 ಪಟ್ಟು ಹೆಚ್ಚು ಶ್ರೀಮಂತ !-ಯಾವ ರಾಜ್ಯ? ಆಸ್ತಿ ವಿವರದ ಮಾಹಿತಿ ಇಲ್ಲಿದೆ
ನಿಶಾಂತ್​
Follow us
TV9 Web
| Updated By: Lakshmi Hegde

Updated on: Jan 02, 2022 | 10:42 AM

ರಾಜಕಾರಣಿಗಳೆಂದೆರೇ ಶ್ರೀಮಂತರು. ಅವರ ಮಕ್ಕಳು ಮತ್ತೂ ಶ್ರೀಮಂತರು..! ಈ ಮಾತು ಅನ್ವಯ ಆಗುವುದು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮತ್ತು ಅವರ ಪುತ್ರನಿಗೆ. ಬಿಹಾರ ಸಿಎಂ ನಿತೀಶ್​ ಕುಮಾರ್​ಗಿಂತ ಅವರ ಪುತ್ರ 5 ಪಟ್ಟು ಹೆಚ್ಚು ಶ್ರೀಮಂತರಂತೆ. ನಿತೀಶ್​ ಕುಮಾರ್​ ಬಳಿ ಒಟ್ಟಾರೆ (ಚಿರಾಸ್ತಿ, ಸ್ಥಿರಾಸ್ಥಿ ಎಲ್ಲ ಸೇರಿ ) 75.36 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯಿದ್ದರೆ, ಅವರ ಪುತ್ರ ನಿಶಾಂತ್​ ಬಳಿ, ಈ ಮೊತ್ತದ 5 ಪಟ್ಟು ಜಾಸ್ತಿ ಆಸ್ತಿಯಿದೆ.  ಬಿಹಾರ ಸರ್ಕಾರಿ ವೆಬ್​ಸೈಟ್​​ನಲ್ಲಿ ಡಿ.31ರಂದು ಉಲ್ಲೇಖವಾದ ಆಸ್ತಿ ವಿವರದ ಅನ್ವಯ, ನಿತೀಶ್ ಕುಮಾರ್​  ಬಳಿ, 29,385 ರೂಪಾಯಿ ನಗದು ಇದೆ. ಹಾಗೇ, ಬ್ಯಾಂಕ್​ ಅಕೌಂಟ್​​ನಲ್ಲಿ 42,763 ರೂಪಾಯಿ ಇದೆ. ಆದರೆ ಅವರ ಪುತ್ರನ ಬಳಿ ಕೈಯಲ್ಲಿ 16, 549 ರೂಪಾಯಿ ಇದ್ದು, ಬ್ಯಾಂಕ್​ನಲ್ಲಿ 1.28 ಕೋಟಿ ರೂಪಾಯಿ ಎಫ್​ಡಿ ಇದೆ. 

ನಿತೀಶ್​ ಕುಮಾರ್​ ಬಳಿ 16.51 ಲಕ್ಷ ರೂಪಾಯಿ ಚರಾಸ್ತಿ ಇದ್ದು, 58.85 ಲಕ್ಷ ರೂ.ಮೌಲ್ಯ ಸ್ಥಿರಾಸ್ತಿ ಇದೆ. ಆದರೆ ಅವರ ಪುತ್ರ ಕೋಟಿ ರೂಪಾಯಿಯಲ್ಲಿ ಸಂಪಾದಿಸಿದ್ದಾರೆ. ಪುತ್ರ ನಿಶಾಂತ್​ ಚರಾಸ್ತಿ ಮೌಲ್ಯ 1.63 ಕೋಟಿ ರೂಪಾಯಿ ಹಾಗೂ ಸ್ಥಿರಾಸ್ತಿ ಮೌಲ್ಯ 1.98 ಕೋಟಿ ರೂಪಾಯಿ.  ಸಿಎಂ ನಿತೀಶ್​ ಕುಮಾರ್ ಅವರು ದೆಹಲಿಯ ದ್ವಾರಕಾದ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಮುಖ್ಯಮಂತ್ರಿಯವರು ಒಂದು ವಸತಿ ಫ್ಲಾಟ್ ಹೊಂದಿದ್ದಾರೆ. ಹಾಗೇ, ಇವರ ಪುತ್ರ ನಿಶಾಂತ್​ ಕಲ್ಯಾಣ್ ಬಿಘಾ ಮತ್ತು ಹಕೀಕತ್​ಪುರದಲ್ಲಿ ಕೃಷಿ ಭೂಮಿ ಮತ್ತು ವಸತಿ ಗೃಹಗಳನ್ನು ಹೊಂದಿದ್ದಾರೆ. ಕಂಕರ್​ಬಾಗ್​​ನಲ್ಲೂ ಕೂಡ ಇವರ ಆಸ್ತಿ ಇದೆ. ಕಲ್ಯಾಣ್​ ಬಿಘಾ ನಿತೀಶ್​ ಕುಮಾರ್​ ಅವರ ಪೂರ್ವಜರು ವಾಸವಾಗಿದ್ದ ಹಳ್ಳಿ. ಇಲ್ಲಿ ನಿಶಾಂತ್​, ಕೃಷಿ ಭೂಮಿ ಮತ್ತು ಕೃಷಿ ಯೋಗ್ಯವಲ್ಲದ ಭೂಮಿಗಳನ್ನು ಹೊಂದಿದ್ದಾರೆ. ಇನ್ನು ನಿತೀಶ್​ ಕುಮಾರ್ ಅವರು 1.45 ಲಕ್ಷ ರೂಪಾಯಿ ಮೌಲ್ಯದ 13 ಹಸುಗಳು ಮತ್ತು 9 ಕರುಗಳನ್ನು ಹೊಂದಿದ್ದಾಗಿ ವೆಬ್​ಸೈಟ್​ನಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿವರ್ಷ ಕೊನೇ ದಿನ  ಸರ್ಕಾರದ ಸಂಪುಟದ ಎಲ್ಲ ಸಚಿವರೂ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು. ಅದು ಸರ್ಕಾರಿ ವೆಬ್​ಸೈಟ್​ನಲ್ಲಿ ಉಲ್ಲೇಖವಾಗಬೇಕು ಎಂದು ಈ ಹಿಂದೆಯೇ ನಿತೀಶ್ ಕುಮಾರ್​ ಸರ್ಕಾರ ಆದೇಶ ಹೊರಡಿಸಿತ್ತು.  ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸೇರಿ ಎಲ್ಲರೂ ಕಡ್ಡಾಯವಾಗಿ ತಮ್ಮ ಆಸ್ತಿ ವಿವರವನ್ನು ನಮೂದಿಸಲೇಬೇಕಾಗುತ್ತದೆ. ಇನ್ನೂ ಒಂದು ಮುಖ್ಯವಾದ ವಿಷಯವೆಂದರೆ, ನಿತೀಶ್​ ಕುಮಾರ್ ಅವರು ತಮ್ಮ ಸಂಪುಟದ ಎಲ್ಲ ಸಹೋದ್ಯೋಗಿಗಳಿಗಿಂತಲೂ ಬಡವರೇ ಆಗಿದ್ದಾರೆ.

ಇದನ್ನೂ ಓದಿ: ಹೋಮ-ಹವನ ವಿಶೇಷ ಪೂಜೆ ಮೂಲಕ ತಮ್ಮ ನೆಚ್ಚಿನ ಕೋತಿ ಚಿಂಟು 2ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಿದ ಸಾ.ರಾ.ಮಹೇಶ್

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್