ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ ಎಂದು ಪೊಲೀಸರಿಗೆ ಶರಣಾದ 44 ನಕ್ಸಲರು

ಇದೀಗ ಶರಣಾದ ನಕ್ಸಲರು, ತಾವು ಮಾವೋವಾದಿಗಳ ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ. ಅಷ್ಟೇ ಅಲ್ಲ, ಪೊಲೀಸರು ನಕ್ಸಲರಿಗಾಗಿ ರಚಿಸಿರುವ ಪುನಾ ನರ್ಕೋಮ್​ ಪುನರ್ವಸತಿ ಅಭಿಯಾನದತ್ತ ಆಕರ್ಷಿತರಾಗಿದ್ದೇವೆ ಎಂದಿದ್ದಾರೆ.

ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ ಎಂದು ಪೊಲೀಸರಿಗೆ ಶರಣಾದ 44 ನಕ್ಸಲರು
ಶರಣಾದ ನಕ್ಸಲರೊಂದಿಗೆ ರಕ್ಷಣಾ ಸಿಬ್ಬಂದಿ
Follow us
TV9 Web
| Updated By: Lakshmi Hegde

Updated on: Jan 02, 2022 | 9:18 AM

ರಾಯ್ಪುರ: ಛತ್ತೀಸ್​ಗಢ್​ ಎಂಬುದು ನಕ್ಸಲ್​ ಪೀಡಿತ ರಾಜ್ಯ. ಅದರಲ್ಲೂ ಸುಕ್ಮಾ ಸೇರಿ ಕೆಲವು ಪ್ರದೇಶಗಳಲ್ಲಂತೂ ಸದಾ ನಕ್ಸಲರ ಕಾಟ, ದಂಗೆ, ಹಿಂಸಾಚಾರ ನಡೆಯುತ್ತಲೇ ಇರುತ್ತದೆ. ಆದರೆ ಇದೀಗ ಅದೇ ಸುಕ್ಮಾ ಜಿಲ್ಲೆಯಲ್ಲಿ 44 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಇದೀಗ ಶರಣಾಗಿರುವ ನಕ್ಸಲರು ಚಿಂತಾಲ್​ನರ್​, ಕಿಸ್ಟಾರಾಮ್ ಮತ್ತು ಬೇಜಿ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದರು. ಹಾಗೇ, ಕೆಳಮಟ್ಟದ ಕೇಡರ್​ಗಳಲ್ಲಿ ಇದ್ದ ಮಾವೋವಾದಿಗಳಾಗಿದ್ದಾರೆ ಎಂದು ಸುಕ್ಮಾ ಪೊಲೀಸ್​ ವರಿಷ್ಠಾಧಿಕಾರಿ ಸುನಿಲ್​ ಶರ್ಮಾ ತಿಳಿಸಿದ್ದಾರೆ. ಅವರೆಲ್ಲ ಇದೀಗ ಶರಣಾಗಿದ್ದು, ಕರಿಗುಂಡಮ್​ ಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಪೊಲೀಸ್​ ಕ್ಯಾಂಪ್​ನಲ್ಲಿ ಬೀಡುಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. 

ಹೀಗೆ ಶರಣಾದವರಲ್ಲಿ ಮಡ್ಕಮ್​ ದುಲಾ ಎಂಬುವನೊಬ್ಬನಿದ್ದಾನೆ. ಆತನ ತಲೆಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಉಳಿದವರೆಲ್ಲ ಮಾವೋವಾದಿಗಳ ಸಾಂಸ್ಕೃತಿಕ ದಳ ಚೇತನ ನಾಟ್ಯ ಮಂಡಳಿಯ ಸದಸ್ಯರಾಗಿದ್ದಾರೆ. ಕೆಲವರು ನಕ್ಸಲ್​ ಸೇನಾ ಸಿಬ್ಬಂದಿಯೂ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.  ರಾಯ್ಪುರದಿಂದ 400 ಕಿಮೀ ದೂರದಲ್ಲಿ ಈ ಕರಿಗುಂಡಮ್​ ಹಳ್ಳಿಯಿದೆ. ಹೀಗೆ ನಕ್ಸಲರು ಶರಣಾದ ಸುದ್ದಿ ಕೇಳಿ, ಸುತ್ತಲಿನ ಹಳ್ಳಿಗಳ ಅನೇಕರು ಅವರನ್ನು ನೋಡಲು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೀಗ ಶರಣಾದ ನಕ್ಸಲರು, ತಾವು ಮಾವೋವಾದಿಗಳ ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ. ಅಷ್ಟೇ ಅಲ್ಲ, ಪೊಲೀಸರು ನಕ್ಸಲರಿಗಾಗಿ ರಚಿಸಿರುವ ಪುನಾ ನರ್ಕೋಮ್​ ಪುನರ್ವಸತಿ ಅಭಿಯಾನದತ್ತ ಆಕರ್ಷಿತರಾಗಿದ್ದೇವೆ  ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ, ಪೊಲೀಸರ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದು, ಅವರಿಗೆ ಪೊಲೀಸರು ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ; ದೆಹಲಿ ಮಾದರಿ ಕ್ರಮಕ್ಕೆ ತಜ್ಞರ ಶಿಫಾರಸು