ಕೆಲವರು ಓಡಿದರು,ಕೆಲವರು ಬಿದ್ದರು; ವೈಷ್ಣೋ ದೇವಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಅನುಭವ ಹಂಚಿಕೊಂಡ ಭಕ್ತರು

Vaishno Devi Shrine Stampede ಏನಾಯಿತು ಎಂದು ನನಗೆ ತಿಳಿದಿರಲಿಲ್ಲ, ಆದರೆ ಅನೇಕ ಜನರು ಕೆಳಗೆ ಬೀಳುವುದನ್ನು ನಾನು ನೋಡಿದೆ. ನಂತರ, ಜನರು ನನ್ನ ಮೇಲೆ ಓಡಿದಾಗ ನಾನು ಕೆಳಗೆ ಬಿದ್ದೆ. ನಾನು ಬದುಕಿ ಉಳಿಯಲಾರೆ ಎಂದು ಅಂದುಕೊಂಡಿದ್ದೆ. ನಾನು ಪ್ರಜ್ಞೆ ತಪ್ಪಿ ಬಿದ್ದೆ.

ಕೆಲವರು ಓಡಿದರು,ಕೆಲವರು ಬಿದ್ದರು; ವೈಷ್ಣೋ ದೇವಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಅನುಭವ ಹಂಚಿಕೊಂಡ ಭಕ್ತರು
ವೈಷ್ಣೋದೇವಿ ದೇಗುಲದಲ್ಲಿ ದರ್ಶನಕ್ಕಾಗಿ ಕಾದು ನಿಂತ ಭಕ್ತರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 02, 2022 | 11:39 AM

ಶ್ರೀನಗರ: ಒಬ್ಬ ಹದಿಹರೆಯದವನು ಪ್ರಜ್ಞೆ ತಪ್ಪಿ ಬಿದ್ದಿದ್ದ, ಎಚ್ಚರವಾದಾಗ ಸುತ್ತಲೂ ಹೆಣಗಳ ರಾಶಿ ಇತ್ತು. ನೂಕುನುಗ್ಗಲಲ್ಲಿ ಉಸಿರಾಡಲು ಹೆಣಗಾಡುತ್ತಾ ದಂಪತಿಗಳು ಜೀವ ಉಳಿಸಲು ಕಂಬವೊಂದರಲ್ಲಿ ನೇತಾಡಿದರು. ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಉಳಿಸಲು ಇತರ ಮಕ್ಕಳನ್ನು ಪಕ್ಕಕ್ಕೆ ತಳ್ಳುತ್ತಿದ್ದರು. ಶನಿವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಮಾತಾ ವೈಷ್ಣೋ ದೇವಿ (Mata Vaishno Devi shrine) ದೇಗುಲದಲ್ಲಿ 12 ಯಾತ್ರಾರ್ಥಿಗಳು ಕಾಲ್ತುಳಿತದಲ್ಲಿ(stampede) ಸಾವಿಗೀಡಾಗಿದ್ದಾರೆ. ಅಲ್ಲಿನ ಭಯಾನಕ ಘಟನೆ ಬಗ್ಗೆ ಸಂತ್ರಸ್ತರು ಹಂಚಿಕೊಂಡ ಅನುಭವಗಳು ಇಲ್ಲಿವೆ. ದೆಹಲಿಯ(Delhi) ಹದಿನೇಳು ವರ್ಷದ ಆಯುಷ್ ದೇಗುಲದಿಂದ ಹಿಂತಿರುಗುತ್ತಿದ್ದಾಗ, ಪೊಲೀಸ್ ಚೆಕ್‌ಪಾಯಿಂಟ್‌ನ ಬಳಿ ಮುಂದಿರುವ ಜನರನ್ನು ಕಂಡು ಹಿಂತಿರುಗಿ ಓಡಿದೆ. “ಏನಾಯಿತು ಎಂದು ನನಗೆ ತಿಳಿದಿರಲಿಲ್ಲ, ಆದರೆ ಅನೇಕ ಜನರು ಕೆಳಗೆ ಬೀಳುವುದನ್ನು ನಾನು ನೋಡಿದೆ. ನಂತರ, ಜನರು ನನ್ನ ಮೇಲೆ ಓಡಿದಾಗ ನಾನು ಕೆಳಗೆ ಬಿದ್ದೆ. ನಾನು ಬದುಕಿ ಉಳಿಯಲಾರೆ ಎಂದು ಅಂದುಕೊಂಡಿದ್ದೆ. ನಾನು ಪ್ರಜ್ಞೆ ತಪ್ಪಿ ಬಿದ್ದೆ ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ. ನನಗೆ  ಪ್ರಜ್ಞೆ ಮರಳಿದಾಗ ಅಲ್ಲಿ ಅನೇಕ ಮೃತ ದೇಹಗಳು ಬಿದ್ದಿರುವುದನ್ನು ನಾನು ನೋಡಿದೆ.  ನನ್ನ ಕಾಲಿನಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತು. ನಾನು ನನ್ನ ಅಣ್ಣನನ್ನು ಹುಡುಕಲು ಪ್ರಾರಂಭಿಸಿದೆ ಮತ್ತು ಅವನು ಹತ್ತಿರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಸ್ಥಳೀಯರು ಮತ್ತು ಕೆಲವು ಯಾತ್ರಿಕರ ಸಹಾಯದಿಂದ, ನಾನು ಅವರನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದೆ, ಅಲ್ಲಿ ವೈದ್ಯರು ನಮಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ನಮ್ಮನ್ನು ಆಂಬ್ಯುಲೆನ್ಸ್‌ನಲ್ಲಿ ಕತ್ರಾದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತನ್ನ ಸಹೋದರ ಮತ್ತು ಸ್ನೇಹಿತನೊಂದಿಗೆ ತೀರ್ಥಯಾತ್ರೆಗೆ ಆಗಮಿಸಿದ ಆಯುಷ್ ಹೇಳಿದರು.

ನನ್ನ ಸಹೋದರ ವೆಂಟಿಲೇಟರ್ ಸಹಾಯದಲ್ಲಿದ್ದು ನನ್ನನ್ನು ವೈದ್ಯರು ಒಂದು ನಂತರ ಡಿಸ್ಚಾರ್ಜ್ ಮಾಡಿದರು ಎಂದು ಆಯುಷ್ ಹೇಳಿದ್ದಾರೆ. “ಜನಸಂದಣಿಯನ್ನು ನಿಯಂತ್ರಿಸಲು ಯಾರೂ ಇರಲಿಲ್ಲ. ನಮ್ಮ ಯಾತ್ರಾ ಸ್ಲಿಪ್‌ಗಳು ಮತ್ತು ಕೊವಿಡ್ ಪರೀಕ್ಷಾ ಪ್ರಮಾಣಪತ್ರಗಳನ್ನು ಯಾರೂ ಪರಿಶೀಲಿಸಲಿಲ್ಲ, ”ಎಂದು ಅವರು ಹೇಳಿದರು.

ದೆಹಲಿಯ ವಿಕಾಸಪುರಿಯ ಉದ್ಯಮಿ ರಜತ್ ಶರ್ಮಾ, 43, ಕಾಲ್ತುಳಿತದ ಗಂಟೆಗಳ ಮೊದಲು ತನ್ನ ಪತ್ನಿ ಮತ್ತು 17 ವರ್ಷದ ಮಗನೊಂದಿಗೆ ದೇಗುಲಕ್ಕೆ ಭೇಟಿ ನೀಡಿದ್ದರು. “ಬಸ್, ಜಾನ್ ಬಚ್ ಗಯಿ (ನಮ್ಮ ಜೀವ ಉಳಿಯಿತು)” ಎಂದು ಅವರು ಹೇಳಿದರು.

ದುರಂತಕ್ಕಾಗಿ ದೇವಾಲಯದ ಮಂಡಳಿಯನ್ನು ದೂಷಿಸಿದ ಅವರು ” ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಯಲ್ಲಿ ಕನಿಷ್ಠ ಪ್ರಕಟಣೆಗಳನ್ನು ಮಾಡಬಹುದಿತ್ತು, ಜನರು ತಾವು ಇರುವ ಸ್ಥಳದಲ್ಲಿ ನಿಲ್ಲುವಂತೆ ಕೇಳಿಕೊಳ್ಳಬಹುದಾಗಿತ್ತು. ಶುಕ್ರವಾರ ತಡರಾತ್ರಿ ಅವರು ದೇಗುಲವನ್ನು ತಲುಪಿದಾಗ ಸಿಕ್ಕಾಪಟ್ಟೆ ಜನರು ಇದ್ದರು ಎಂದು ಶರ್ಮಾ ನೆನಪಿಸಿಕೊಂಡರು. “ದರ್ಶನದ ಕೆಲವು ಗಂಟೆಗಳ ನಂತರ, ನಾವು ಸಿಆರ್‌ಪಿಎಫ್ ನಿರ್ವಹಿಸುವ ಮತ್ತೊಂದು ಮಾರ್ಗದಿಂದ ಹೊರಬಂದೆವು. ನಾವು ಪೊಲೀಸ್ ಭದ್ರತಾ ಕೊಠಡಿಯನ್ನು ಸಮೀಪಿಸಿದಾಗ, ಅಶಿಸ್ತಿನ ಯುವಕರ ಗುಂಪೊಂದು ನೂಕಿದ್ದು ತಮ್ಮ ಮಗನ ಕಾಲಿಗೆ ಗಾಯವಾಯಿತು, ”ಎಂದು ಶರ್ಮಾ ಹೇಳಿದರು.

“ನಾವು ಪ್ರತಿಕ್ರಿಯಿಸುವ ಮೊದಲು, 300-400 ಜನರ ಗುಂಪು ನಮ್ಮ ದಿಕ್ಕಿನಲ್ಲಿ ಧಾವಿಸುತ್ತಿರುವುದನ್ನು ನಾವು ನೋಡಿದೆವು. ಆಗಲೇ ಕಿಕ್ಕಿರಿದು ತುಂಬಿದ್ದ ಪೊಲೀಸ್ ಕೊಠಡಿಯಲ್ಲಿ ಆಶ್ರಯ ಪಡೆದೆವು. ಗಲಿಬಿಲಿ ಸಮಯದಲ್ಲಿ, ಅನೇಕ ಜನರು ತಮ್ಮ ಪುಟ್ಟ ಮಕ್ಕಳನ್ನು ಕಾಪಾಡಲು ನಮ್ಮ ಕೈಗೆಗೆ ಒಪ್ಪಿಸಿದರು, ”ಎಂದು ಅವರು ಹೇಳಿದರು. ಅಲ್ಲಿನ ದೃಶ್ಯವನ್ನು ವಿವರಿಸಿದ ಶರ್ಮಾ “ಎಲ್ಲೆಡೆ ಅವ್ಯವಸ್ಥೆ” ಇದೆ ಎಂದು ಹೇಳಿದರು. “ಸಂಕೀರ್ಣದಲ್ಲಿರುವ ಮನೋಕಾಮ್ನಾ ಭವನದ ಬಳಿ, 400-500 ಜನರ ಮತ್ತೊಂದು ಗುಂಪು ಮುಂದೆ ಹೋಗಲು ಇತರರನ್ನು ಪಕ್ಕಕ್ಕೆ ತಳ್ಳುತ್ತಿತ್ತು. ಇದ್ದಕ್ಕಿದ್ದಂತೆ ಜನರು ಎಲ್ಲಾ ದಿಕ್ಕುಗಳಲ್ಲಿ ಓಡಲು ಪ್ರಾರಂಭಿಸಿದರು. ಗುಂಪನ್ನು ನಿಯಂತ್ರಿಸಲು ಯಾರೂ ಇರಲಿಲ್ಲ. ಕೆಲವರು ಬೀಳುತ್ತಿದ್ದಂತೆ, ಇತರರು ಅವರ ಮೇಲೆ ಓಡಿದರು, ”ಎಂದು ಅವರು ಹೇಳಿದರು.

ದೆಹಲಿಯಿಂದ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಬಂದ 30 ವರ್ಷದ ಮುಖೇಶ್, ಕತ್ರಾ ಮತ್ತು ದೇಗುಲದಿಂದಜನಸಂದಣಿಯು ಮುಂದಕ್ಕೆ ಬರುತ್ತಿರುವುದನ್ನು ನೋಡಿದಾಗ ಅವರು ಸರದಿಯಲ್ಲಿ ನಿಂತಿದ್ದರು ಎಂದು ಹೇಳಿದರು. “ಅವರು ಮುಂದುವರಿಯಲು ಇತರರನ್ನು ಪಕ್ಕಕ್ಕೆ ತಳ್ಳುತ್ತಿದ್ದರು. ಕೆಲವು ಅಪ್ರಾಪ್ತ ಮಕ್ಕಳು ಅಲ್ಲಿ ನಿಂತಿದ್ದರು, ಮತ್ತು ಕೆಲವು ಪೋಷಕರು ತಮ್ಮ ಮಕ್ಕಳನ್ನು ತುಳಿತದಿಂದ ರಕ್ಷಿಸಲು ಕೆಲವರನ್ನು ದೂರ ತಳ್ಳುತ್ತಿದ್ದರು, ”ಎಂದು ಅವರು ಹೇಳಿದರು. “ಇದು ನೂಕುನುಗ್ಗಲಿಗೆ ಕಾರಣವಾಯಿತು ಮತ್ತು ಇದ್ದಕ್ಕಿದ್ದಂತೆ ಜನರು ಓಡಲು ಪ್ರಾರಂಭಿಸಿದರು” ಎಂದು ಮುಕೇಶ್ ಹೇಳಿದರು, ನಾನು ಕೂಡ ಕೆಳಗೆ ಬಿದ್ದೆ. “ಕೆಲವು ಸ್ಥಳೀಯರು ನಮಗೆ ಹತ್ತಿರದ ಆರೋಗ್ಯ ಸೌಲಭ್ಯವನ್ನು ತಲುಪಲು ಸಹಾಯ ಮಾಡಿದ ಹೊರತು ಸಹಾಯ ಮಾಡಲು ಯಾರೂ ಇರಲಿಲ್ಲ” ಎಂದು ಅವರು ಹೇಳಿದರು.

ದೆಹಲಿಯ ಪ್ರಿಯಾಂಕಾ ಮತ್ತು ಅವರ ಪತಿ ಅಭಿಷೇಕ್, ತಮ್ಮನ್ನು ರಕ್ಷಿಸಿಕೊಳ್ಳಲು “ಶೆಡ್‌ನ ಕೆಳಗೆ ಒಂದು ಕಂಬವನ್ನು ಹಿಡಿದು ನಿಂತೆವು” ಎಂದು ಹೇಳಿದರು. “ಸ್ತಂಭ ಮತ್ತು ಜನಸಂದಣಿಯ ನಡುವೆ ಒತ್ತಿದರೆ, ನಾವು ಕಷ್ಟದಿಂದ ಉಸಿರಾಡುತ್ತಿದ್ದೆವು. ನಾವು ಬದುಕುಳಿಯುವುದಿಲ್ಲ ಎಂದು ನಾವು ಭಾವಿಸಿದ್ದೆವು ಎಂದು ಅಭಿಷೇಕ್ ತಮ್ಮ ಅನುಭವವನ್ನು ಹೇಳಿದ್ದಾರೆ.

ಇದನ್ನೂ ಓದಿ: ಮಾತಾ ವೈಷ್ಣೋ ದೇವಿ ಮಂದಿರ ಸಂಕೀರ್ಣದಲ್ಲಿ ಮೊದಲ ಬಾರಿ ನಡೆದ ಕಾಲ್ತುಳಿತದ ದುರ್ಘಟನೆ; ಕನಿಷ್ಟ 12 ಭಕ್ತರ ದುರ್ಮರಣ

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ