ದೇಗುಲ ರಕ್ಷಣೆ ಹೋರಾಟದ 5 ಪರ್ಸೆಂಟ್ ಲಾಭ ಪಡೆಯಲು ಕಾಂಗ್ರೆಸ್​ನಿಂದ ಯತ್ನ: ಸಂಸದ ತೇಜಸ್ವಿ ಸೂರ್ಯ

ಮೂರ್ತಿಭಂಜಕ ಟಿಪ್ಪು ಜಯಂತಿ ಮಾಡಿದವರ ಬಗ್ಗೆ ನಮಗೆ ತಿಳಿದಿದೆ. ಕಾಂಗ್ರೆಸ್​ನವರ ಆಷಾಢಭೂತಿತನ ತೋರಿಸುವ ನಾಟಕವನ್ನು ಜನರು ನಂಬಲ್ಲ. ಹೀಗೆ ನಾಟಕ ಮಾಡುವುದನ್ನು ಕಾಂಗ್ರೆಸ್​ ಮೊದಲು ನಿಲ್ಲಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ದೇಗುಲ ರಕ್ಷಣೆ ಹೋರಾಟದ 5 ಪರ್ಸೆಂಟ್ ಲಾಭ ಪಡೆಯಲು ಕಾಂಗ್ರೆಸ್​ನಿಂದ ಯತ್ನ: ಸಂಸದ ತೇಜಸ್ವಿ ಸೂರ್ಯ
ತೇಜಸ್ವೀ ಸೂರ್ಯ
TV9kannada Web Team

| Edited By: guruganesh bhat

Sep 16, 2021 | 2:50 PM


ಚಿಕ್ಕಮಗಳೂರು: ದೇಗುಲಗಳ ರಕ್ಷಣೆ ಹೋರಾಟದಲ್ಲಿ 5 ಪರ್ಸೆಂಟ್ ಲಾಭ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಹೀಗಾಗಿಯೇ ಕಾಂಗ್ರೆಸ್ಗೆ ರಾತ್ರೋರಾತ್ರಿ ದೇಗುಲಗಳ ಬಗ್ಗೆ ಪ್ರೀತಿ ಉಕ್ಕಿ ಬಂದಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ನಾಯಕರಿಗೆ ರಾತ್ರೋರಾತ್ರಿ ದೇಗುಲ, ಜೀವದ ಕುರಿತು ಪ್ರೀತಿ ಬಂದಿದೆ. ಆದರೆ ಮೂರ್ತಿಭಂಜಕ ಟಿಪ್ಪು ಜಯಂತಿ ಮಾಡಿದವರ ಬಗ್ಗೆ ನಮಗೆ ತಿಳಿದಿದೆ. ಕಾಂಗ್ರೆಸ್​ನವರ ಆಷಾಢಭೂತಿತನ ತೋರಿಸುವ ನಾಟಕವನ್ನು ಜನರು ನಂಬಲ್ಲ. ಹೀಗೆ ನಾಟಕ ಮಾಡುವುದನ್ನು ಕಾಂಗ್ರೆಸ್ ಮೊದಲು ನಿಲ್ಲಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಪೂಜಾ ಸ್ಥಳ ನೆಲಸಮ ಪ್ರಕ್ರಿಯೆಯನ್ನು ನಿಲ್ಲಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ರಾಜ್ಯದ ಹಲವೆಡೆ ಏಕಾಏಕಿ ದೇವಸ್ಥಾನ ನೆಲಸಮ ಮಾಡಲಾಗಿದೆ. ಈ ಪ್ರಕ್ರಿಯೆಯಿಂದ ರಾಜ್ಯಾದ್ಯಂತ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಭಕ್ತರು ತಮ್ಮ ನೋವನ್ನು ಪ್ರತಿಭಟನೆ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಭಕ್ತರ ನೋವಿಗೆ ಸ್ಪಂದಿಸುವ ಮನಸ್ಥಿತಿ ನಮ್ಮ ಮುಖ್ಯಮಂತ್ರಿಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು: ಗ್ರಾಮಸ್ಥರ ಪ್ರತಿಭಟನೆ, ಕಾಂಗ್ರೆಸ್ ಆಕ್ರೋಶ

ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ-ಹೊಮ್ಮರಗಳ್ಳಿ ರಸ್ತೆಯಲ್ಲಿರುವ ಹುಚ್ಚಗಣಿ ಮಹದೇವಮ್ಮ ದೇಗುಲ ತೆರವುಗೊಳಿಸುವಾಗ ಗ್ರಾಮಸ್ಥರಿಗೆ ಮಾಹಿತಿ ನೀಡಿರಲಿಲ್ಲ. ಸೂಕ್ತ ರೀತಿಯಲ್ಲಿ ಪರಾಮರ್ಶಿಸಿಲ್ಲ ಎಂಬ ವಿಚಾರ ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಸೆಪ್ಟೆಂಬರ್ 15ರಂದು ಹುಲ್ಲಹಳ್ಳಿದಲ್ಲಿರುವ ದೇಗುಲಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಿದರು. ಗ್ರಾಮಸ್ಥರಿಗೆ ಮಾಹಿತಿ ನೀಡದೆ ದೇಗುಲ ಕೆಡವಲಾಗಿದೆ ಎಂದು ಆರೋಪಿಸಿದ ಅವರು, ಜನರನ್ನು ವಿಶ್ವಾಸಕ್ಕೆ‌ ತೆಗೆದುಕೊಂಡು ತೆರವು ಕಾರ್ಯಾಚರಣೆ ನಡೆಸಬೇಕಿತ್ತು ಎಂದರು.

ದೇವಾಲಯ ಕಟ್ಟುವುದರಲ್ಲಿ ಮಾತ್ರವಲ್ಲ ಕೆಡವುದರಲ್ಲಿಯೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಗ್ರಾಮಸ್ಥರ ಸಭೆ ಮಾಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರವು ಮಾಡಬೇಕಿತ್ತು. ರಸ್ತೆ ಬದಿಯಲ್ಲಿರುವ ಹಲವು ದೇವಾಲಯಗಳನ್ನು ಈ ಹಿಂದೆಯೂ ತೆರವು ಮಾಡಲಾಗಿದೆ. ನಾನು ಸಂಸದನಾಗಿದ್ದಾಗಲೂ ದೇಗುಲಗಳನ್ನು ತೆರವು ಮಾಡಿಸಿದ್ದೇನೆ. ಆದರೆ ಈ ಬಾರಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ. ಹಳೇ ದೇಗುಲ ಪಕ್ಕದಲ್ಲಿಯೇ ಮತ್ತೊಂದು ದೇಗುಲ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: 

Karnataka News Live: ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ದೇಗುಲಗಳ ತೆರವು ಕಾರ್ಯಕ್ಕೆ ವ್ಯಾಪಕ ವಿರೋಧ

ತೆರವುಗೊಳಿಸಬೇಕಾದ ಅನಧಿಕೃತ ದೇಗುಲಗಳ ಪಟ್ಟಿಗೆ ಸೇರಿರುವ ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರಗಳು ಇವು

(MP Tejasvi Surya Says Congress try to make 5 percent profit by Temple Demolished issue protest)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada