Karnataka News Live: ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ದೇಗುಲಗಳ ತೆರವು ಕಾರ್ಯಕ್ಕೆ ವ್ಯಾಪಕ ವಿರೋಧ
Karnataka Breaking News LIVE Updates: ಕರ್ನಾಟಕ ರಾಜ್ಯದಲ್ಲಿ ಹಲವು ದೇಗುಲ, ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಆದೇಶ ಪ್ರಕಟವಾಗಿದ್ದು ಸಾರ್ವಜನಿಕರು ಹಾಗೂ ಧರ್ಮೀಯ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇತ್ತ ವಿಧಾನಸೌಧದಲ್ಲಿ ನಡೆಯುತ್ತಿರುವ ಕಲಾಪದಲ್ಲೂ ಈ ಬಗ್ಗೆ ವಿಷಯ ಪ್ರಸ್ತಾಪವಾಗುತ್ತಿದ್ದು, ಗಂಭೀರ ಚರ್ಚೆ ನಡೆಯುತ್ತಿದೆ.
LIVE NEWS & UPDATES
-
ಸಾಹ-ಅಶ್ವಿನ್ ಔಟ್
ಎಜಾಜ್ ಪಟೇಲ್ ಸ್ಪಿನ್ ಜಾದು ಅರಿಯುವನ್ನು ಭಾರತ ಮತ್ತೆ ಎಡವಿದೆ. ವೃದ್ದಿಮಾನ್ ಸಾಹ ಇಂದು ಕೇವಲ 2 ರನ್ ಗಳಿಸಿ 27 ರನ್ಗೆ ಎಲ್ಬು ಬಲೆಗೆ ಸಿಲುಕಿದರೆ, ಆರ್. ಅಶ್ವಿನ್ ಬಂದ ಬೆನ್ನಲ್ಲೇ ಕ್ಲೀನ್ ಬೌಲ್ಡ್ ಆದರು.
-
2ನೇ ದಿನದಾಟ ಆರಂಭ: ವಿಕೆಟ್ ಪತನ
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ 2ನೇ ಟೆಸ್ಟ್ನ ಎರಡನೇ ದಿನದಾಟ ಆರಂಭವಾಗಿದ್ದು, ಟೀಮ್ ಇಂಡಿಯಾ ದೊಡ್ಡ ಆಘಾತ ಅನುಭವಿಸಿದೆ.
-
ಮೊದಲ ದಿನದಾಟದ ಅಂತ್ಯಕ್ಕೆ
ಮೊದಲ ದಿನದಾಟದ ಅಂತ್ಯಕ್ಕೆ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ 70 ಓವರ್ 221/4
(ಮಯಂಕ್ ಅಗರ್ವಾಲ್ ಅಜೇಯ 120, ಶುಭ್ಮನ್ ಗಿಲ್ 44, ವೃದ್ಧಿಮಾನ್ ಸಾಹ ಅಜೇಯ 25, ಎಜಾಜ್ ಪಟೇಲ್ 73/4)
ಮೋರ್ಗನ್ ಮತ್ತು ವಿಲಿಯಮ್ಸನ್ ಮತ್ತೆ ಮುಖಾಮುಖಿ
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಮತ್ತೊಮ್ಮೆ ನಾಕೌಟ್ ಪಂದ್ಯ. ಕೊನೆಯ ಘರ್ಷಣೆ 2019 ರ ವಿಶ್ವಕಪ್‌ನ ಫೈನಲ್ ಆಗಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್‌ನ ಗೆಲುವಿನ ಮೂವರು ದೊಡ್ಡ ಹೀರೋಗಳಾದ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ವೇಗದ ಬೌಲರ್ ಜೋಫ್ರಾ ಆರ್ಚರ್ ಮತ್ತು ಲಿಯಾಮ್ ಪ್ಲಂಕೆಟ್ ಈ ಪಂದ್ಯದ ಭಾಗವಾಗಿಲ್ಲ. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಈ ಬಾರಿ ಆಂಗ್ಲ ತಂಡದ ನಾಯಕ ಮಾರ್ಗನ್ ಜೊತೆಗಿನ ಖಾತೆಯನ್ನು ಇತ್ಯರ್ಥಪಡಿಸುವರೇ?
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್
ಟಾಸ್ ಗೆದ್ದಿರುವ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಉಭಯ ತಂಡಗಳ ಮುಖಾಮುಖಿ ಅಂಕಿ-ಅಂಶಗಳು
Hello & welcome from Sharjah for Match 46 of the #VIVOIPL ?
It's the @ImRo45-led @mipaltan who square off against @RishabhPant17's @DelhiCapitals. ? ? #MIvDC
Which team are you rooting for❓ ? ? pic.twitter.com/tYCcBUFVlu
— IndianPremierLeague (@IPL) October 2, 2021
ಹಿಟ್ಮ್ಯಾನ್ ರೋಹಿತ್-ಪಂಟರ್ ಪಂತ್: ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು
Hello & welcome from Sharjah for Match 46 of the #VIVOIPL ?
It's the @ImRo45-led @mipaltan who square off against @RishabhPant17's @DelhiCapitals. ? ? #MIvDC
Which team are you rooting for❓ ? ? pic.twitter.com/tYCcBUFVlu
— IndianPremierLeague (@IPL) October 2, 2021
RR vs RCB: ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು
Hello & welcome from Dubai ?
It’s @IamSanjuSamson‘s @rajasthanroyals who will face the @imVkohli-led @RCBTweets in Match 4⃣3⃣ of the #VIVOIPL. ? ? #RRvRCB
Which team will come out on top tonight❓ ? ? pic.twitter.com/6ZCE4qKhAC
— IndianPremierLeague (@IPL) September 29, 2021
ಹಿಂದೂ ದೇವಾಲಯ ಉಳಿವಿಗಾಗಿ ಉಪವಾಸ ಸತ್ಯಾಗ್ರಹ
ಹಿಂದೂ ದೇವಾಲಯ ಉಳಿವಿಗಾಗಿ ಮೈಸೂರಿನ ಗಾಂಧಿ ಪ್ರತಿಮೆ ಬಳಿ ಜಾಗೋ ಮೈಸೂರು ವತಿಯಿಂದ ಚೇತನ್ ಗೌಡ ಧರಣಿ ನಡೆಸುತ್ತಿದ್ದಾರೆ.‘ಸುಪ್ರೀಂ’ ಆದೇಶ ನೆಪವಾಗಿಟ್ಟುಕೊಂಡು ತೆರವು ಬೇಡ ಅಂತ ಚೇತನ್ ಗೌಡ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ದೇವಸ್ಥಾನನಗಳ ತೆರವು ಬಗ್ಗೆ ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ ಮಾಹಿತಿ
ದಾವಣಗೆರೆ ಜಿಲ್ಲೆಯಲ್ಲಿ 24 ಧಾರ್ಮಿಕ ಕಟ್ಟಡಗಳು ಸಾರ್ವಜನಿಕ ಸ್ಥಳದಲ್ಲಿವೆ. 13 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. 11 ತೆರವುಗೊಳಿಸುವುದು ಬಾಕಿಯಿದೆ. ಈ ಬಾಕಿ 11 ಕಟ್ಟಡಗಳು 2009ಕ್ಕೆ ಮುಂಚೆ ನಿರ್ಮಾಣವಾಗಿದೆ. ಅವುಗಳ ಸ್ಥಳಾಂತರ ಅಥವಾ ಅಧಿಕೃತಗೊಳಿಸುವ ಕಾರ್ಯ ನಡೆಯಬೇಕಿದೆ. 7 ದಾವಣಗೆರೆ, 2 ಚನ್ನಗಿರಿ, 2 ಹರಿಹರ ಒಟ್ಟು 11 ತೆರವಾಗದ ಧಾರ್ಮಿಕ ಕಟ್ಟಡಗಳಿವೆ. 20 ದಿನಗಳ ಒಳಗೆ ಎಲ್ಲ ಕಾರ್ಯಗಳು ಪೂರ್ಣಗೊಳ್ಳಬೇಕಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಬೇಕಾಗಿದೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.
ಹಿಂದೂ ದೇವಾಲಯಗಳ ಉಳಿವಿಗಾಗಿ ಏಕಾಂಗಿ ಪ್ರತಿಭಟನೆ
ಮೈಸೂರು: ಹಿಂದೂ ದೇವಾಲಯಗಳ ಉಳಿವಿಗಾಗಿ ಮೈಸೂರಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಜಾಗೋ ಮೈಸೂರು ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಸಂಘಟನೆಯ ಚೇತನ್ ಗೌಡ ಎಂಬುವವರು ಏಕಾಂಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ನೆಪವಾಗಿಟ್ಟುಕೊಂಡು ದೇವಸ್ಥಾನ ತೆರವು ಮಾಡುವುದು ಸರಿಯಲ್ಲ. ಆದೇಶವನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ತೆರವಿಗೆ ಮುಂದಾಗುವಂತೆ ಮನವಿ ಮಾಡಿದ್ದಾರೆ
ಕೊಪ್ಪಳದಲ್ಲಿ ಯಾವುದೇ ತೆರವು ಮಾಡೋ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಇಲ್ಲ ಎಂದ ಜಿಲ್ಲಾಧಿಕಾರಿ
ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ತೆರವು ಮಾಡುವ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಇಲ್ಲ ಅಂತ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 306 ದೇವಸ್ಥಾನ, ಚರ್ಚ್ ಮಸೀದಿ ಗುರುತಿಸಲಾಗಿತ್ತು. ಇದರಲ್ಲಿ 232 ದೇವಸ್ಥಾನ ತೆರವು ಮಾಡಲಾಗಿದೆ. 74 ದೇವಸ್ಥಾನ,ಚರ್ಚ್ ಸೇರಿದಂತೆ ಮಸೀದಿಗಳನ್ನ ಸಕ್ರಮ ಮಾಡಲಾಗಿದೆ. ಜಿಲ್ಲಾಡಳಿತದಲ್ಲಿ ಚರ್ಚೆ ಮಾಡಿ ಸಕ್ರಮ ಮಾಡಲಾಗಿದೆ. ನಮಗೆ ಸರ್ಕಾರದಿಂದ ಯಾವುದೇ ನೋಟಿಸ್ ಕೂಡಾ ಬಂದಿಲ್ಲ ಎಂದು ತಿಳಿಸಿದ್ದಾರೆ.
ದೇಗುಲ ಉಳಿಸಿ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಪ್ರತಿಭಟನೆ
ಮೈಸೂರು ದೇಗುಲ ಉಳಿಸಿ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಪ್ರತಿಭಟನೆ ಏರ್ಪಡಿಸಲಾಗಿದ್ದು, ಚಾಮರಾಜ ಜೋಡಿ ರಸ್ತೆ, ದತ್ತಾತ್ರೇಯ ದೇವಸ್ಥಾನ ಹಾಗೂ ಬಾಲ ಸುಬ್ರಹ್ಮಣ್ಯ ದೇವಸ್ಥಾನ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಒಡೆದುಹಾಕುವ ಆದೇಶ ಸರಿಯಲ್ಲ. ಸ್ಥಳೀಯ ಭಕ್ತಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರಾತ್ರೋರಾತ್ರಿ ನೆಲಸಮ ಮಾಡುವುದು ಅಕ್ಷಮ್ಯ. ನಂಜನಗೂಡಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಾಲಯವನ್ನು ಪುನರ್ನಿರ್ಮಾಣ ಮಾಡಿ ಭಕ್ತಾಧಿಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಹೀಗೆ ಆಗಿದ್ದರೆ ಬಿಜೆಪಿ, ಆರ್ಎಸ್ಎಸ್ ಸುಮ್ನೆ ಬಿಡ್ತಿದ್ರಾ: ದಿನೇಶ್ ಗುಂಡೂರಾವ್
ಅನಧಿಕೃತ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಈಗ ಬಿಜೆಪಿಯವರು ಒಂದು ಸಣ್ಣ ಹೇಳಿಕೆ ಕೊಟ್ಟು ಸಮಾಧಾನವಾಗಿ ಮಾತನಾಡುತ್ತಿದ್ದಾರೆ. ಇದೆಲ್ಲ ನಡೆಯುತ್ತಿರುವುದರ ವಿರುದ್ಧ ಬಿಜೆಪಿಯವರು ಯಾರೂ ಗಟ್ಟಿಯಾಗಿ ಮಾತನಾಡುತ್ತಿಲ್ಲ. ಒಂದುವೇಳೆ ಕಾಂಗ್ರೆಸ್ ಇದ್ದಾಗ ಈ ರೀತಿಯಾಗಿದ್ದರೆ ಏನು ಮಾಡುತ್ತಿದ್ದರು, RSS ಮತ್ತು ಬಿಜೆಪಿಯವರು ಹೇಗೆ ಮಾತನಾಡುತ್ತಿದ್ದರು ಎಂದು ಯೋಚಿಸಿ. ಈಗ ಏಕೆ ಸುಮ್ಮನೆ ಕುಳಿತುಕೊಂಡಿದ್ದಾರೆ ಅಂದರೆ ಅವರ ಆಡಳಿತ ಇದ್ದಾಗಲೇ ಈ ರೀತಿ ನಡೆದಿದೆ. ನಮ್ಮ ಸರ್ಕಾರ ಆಗಿದ್ದದಿದ್ದರೆ ಗಲಾಟೆ ಮಾಡುತ್ತಿದ್ದರು. ಅದಕ್ಕೆ ಹೇಳೋದು ಎಲ್ಲರ ಜೊತೆ ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳಬೇಕಿತ್ತು. ಕೋರ್ಟ್ ಒಂದು ರೀತಿ ಹೇಳುತ್ತಿದೆ, ಅದನ್ನು ನಾವು ಯಾವ ರೀತಿ ಅನುಷ್ಠಾನ ತರಬೇಕು ಎಂದು ತೀರ್ಮಾನ ಮಾಡಬೇಕಿತ್ತು. ಸರ್ಕಾರ ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದೇವಸ್ಥಾನ ಹಿಂದೂಗಳಿಗೆ ಮಾತ್ರ ಭಾವನಾತ್ಮಕ ವಿಚಾರ ಅಲ್ಲ: ಕಾಂಗ್ರೆಸ್ ನಾಯಕ ಸಿ.ಎಂ ಇಬ್ರಾಹಿಂ
ದೇವಸ್ಥಾನ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಸಿ.ಎಂ ಇಬ್ರಾಹಿಂ ಮಾತನಾಡಿದ್ದು, ಮೈಸೂರಿನಲ್ಲಿ ದೇವಸ್ಥಾನ ತೆರವಿಗೆ ಸುಪ್ರೀಂಕೋರ್ಟ್ ಆದೇಶ ಇದೆ ಅಂತಾರೆ ದೇವಸ್ಥಾನಗಳು ಕರ್ನಾಟಕ ಸಂಸ್ಕೃತಿಯ ಪ್ರತೀಕ. ಕೂಡಲೇ ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಲಿ. ಆದೇಶ ಹಿಂಪಡೆಯಲು ವಿನಂತಿಸಿಕೊಳ್ಳಲಿ. ದೇವಸ್ಥಾನ ಹಿಂದೂಗಳಿಗೆ ಮಾತ್ರ ಭಾವನಾತ್ಮಕ ವಿಚಾರ ಅಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 46 ಅನಧಿಕೃತ ಧಾರ್ಮಿಕ ಕೇಂದ್ರ ಕಟ್ಟಡ ಗುರುತಿಸಲಾಗಿದೆ: ಜಿಲ್ಲಾಧಿಕಾರಿ
ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವಿಗೆ ಸುಪ್ರೀಂಕೋರ್ಟ್ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 46 ಅನಧಿಕೃತ ಧಾರ್ಮಿಕ ಕೇಂದ್ರ ಕಟ್ಟಡ ಗುರುತಿಸಲಾಗಿದೆ. ಎಲ್ಲಾ 46 ಅನಧಿಕೃತ ಧಾರ್ಮಿಕ ಕೇಂದ್ರ ಕಟ್ಟಡಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿವೆ. ನಿಪ್ಪಾಣಿಯಲ್ಲಿ ನಾಲ್ಕು ಧಾರ್ಮಿಕ ಕೇಂದ್ರ ಕಟ್ಟಡ ಸ್ಥಳಾಂತರಗೊಳಿಸಬೇಕಿದೆ. ಇದರಲ್ಲಿ ಯಾವುದೇ ಐತಿಹಾಸಿಕ ಕಟ್ಟಡಗಳಿಲ್ಲ. ರೆಗ್ಯೂಲರೈಸ್ಡ್ ಮಾಡಲೂ ಸಹ ನಮಗೆ ಅವಕಾಶ ಇದೆ. ಟ್ರಾಫಿಕ್ ತೊಂದರೆ ಸೇರಿ ಸಾರ್ವಜನಿಕರಿಗೆ ತೊಂದರೆ ಆಗದೇ ಇರುವ ಕಟ್ಟಡಗಳ ರೆಗ್ಯುಲರೈಸ್ಡ್ ಮಾಡಲು ಅವಕಾಶವಿದೆ. 39 ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವು ಕಾರ್ಯ ಪೆಂಡಿಂಗ್ ಇದೆ. ಗಣೇಶೋತ್ಸವ ಮುಗಿದ ಮೇಲೆ ತೆರವು ಮಾಡಲು ಕ್ರಮ ಕೈಗೊಳ್ಳುತ್ತೇವೆ. ಸ್ಥಳೀಯರನ್ನು ವಿಶ್ವಾಸಕ್ಕೆ ತಗೆದುಕೊಂಡೇ ತೆರವು ಮಾಡಲಾಗುವುದು. ಕೂಲಂಕಷವಾಗಿ ವಾರ್ಡ್‌ವಾರು ಪರಿಶೀಲಿಸಿ ಪಟ್ಟಿ ಮಾಡಲಾಗಿದೆ. ಎಲ್ಲಾ ಸಣ್ಣಪುಟ್ಟ ಕಟ್ಟಡಗಳಿದ್ದು ವಿವಾದ ಆಗುವಂತಹದ್ದು ಯಾವುದೂ ಇಲ್ಲ. ಈಗ 17 ಧಾರ್ಮಿಕ ಕೇಂದ್ರ ಕಟ್ಟಡ ತೆರವು ಮಾಡಿದರೂ ಯಾರೂ ವಿರೋಧಿಸಿಲ್ಲ. ತಾಲೂಕು ಕೇಂದ್ರಗಳ ಪೈಕಿ ನಾಲ್ಕು ಕಟ್ಟಡಗಳು ನಿಪ್ಪಾಣಿಯಲ್ಲಿದ್ದು ಅವುಗಳ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತಗಳು ಸಂಯಮದಿಂದ ವರ್ತಿಸಬೇಕು: ಆರ್.ಅಶೋಕ್
ದೇವಸ್ಥಾನಗಳನ್ನು ಏಕಾಏಕಿ ತೆರವು ಮಾಡುವುದು ಸರಿಯಲ್ಲ. ಇದು ಮೈಸೂರು ಒಂದೇ ಅಲ್ಲ ಇಡೀ ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಈ ಬಗ್ಗೆ ಜಿಲ್ಲಾಡಳಿತಗಳಿಗೆ ಸೂಚನೆ ಕೊಡಲಾಗಿದೆ. ಜಿಲ್ಲಾಧಿಕಾರಿಗಳು ಸಂಯಮದಿಂದ ವರ್ತಿಸಬೇಕು. ಜನರ ಭಾವನೆಗೆ ಬೆಲೆ ಕೊಡಲು ಸೂಚಿಸಲಾಗಿದೆ. ಸಿಎಂ ಜತೆ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ನಂಜನಗೂಡಿನಲ್ಲಿ ದೇವಾಲಯ ತೆರವು ಮಾಡಿದ ತಹಶೀಲ್ದಾರ್‌ಗೆ ಸರ್ಕಾರದಿಂದ ನೋಟಿಸ್
ನಂಜನಗೂಡಿನಲ್ಲಿ ದೇವಾಲಯ ತೆರವು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿರೋಧ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತೆರವು ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ನಂಜನಗೂಡು ತಹಶೀಲ್ದಾರ್‌ಗೆ ಸರ್ಕಾರದಿಂದ ನೋಟಿಸ್ ನೀಡಲಾಗಿದೆ.
ದೇವಸ್ಥಾನ ತೆರವಿಗೆ ಮುಂದಾಗುವ ಅಧಿಕಾರಗಳ ವಿರುದ್ಧ ಕ್ರಮ: ಯತ್ನಾಳ್
ಸರ್ಕಾರದಿಂದ ಆದೇಶ ಬರುವವರೆಗೆ ಯಾವುದೇ ದೇಗುಲಗಳನ್ನು ತೆರವು ಮಾಡುವಂತಿಲ್ಲ. ದೇವಾಲಯ ತೆರವು ಮಾಡಬಾರದೆಂದು ನೋಟಿಸ್ ಇದೆ. ನಿನ್ನೆ ಸಭೆಯಲ್ಲಿ ಕೂಡಾ ಸಿಎಂ ಬೊಮ್ಮಾಯಿ ದೇವಾಲಯಗಳಿಗೆ ತೊಂದರೆಯಾಗಲ್ಲವೆಂದು ಭರವಸೆ ಕೊಟ್ಟಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿ ತೆರವು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ತೆರವು ಮಾಡಿದ ಅಧಿಕಾರಿಗಳಿಗೂ ನೋಟಿಸ್ ನೀಡಲಾಗುವುದು. ಉದ್ಧಟತನ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಆಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕಾಗುತ್ತದೆ; ಅಧಿಕಾರಿಗಳು ಮಾಡಿದ ತಪ್ಪಿನಿಂದ ಗೊಂದಲ ಉಂಟಾಗಿದೆ
ಕೋರ್ಟ್ ಆದೇಶದಂತೆ ದೇವಾಲಯಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಬಿಜೆಪಿ ಶಾಸಕರು ವಿಷಯ ಪ್ರಸ್ತಾಪ ಮಾಡಿದ್ದು, ತೆರವು ಕಾರ್ಯದ ಬಗ್ಗೆ ಸಭೆಯಲ್ಲಿ ನೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಎಲ್ಲವನ್ನೂ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ಸಮಾಧಾನದ ಉತ್ತರ ಕೊಟ್ಟಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಈ ಗೊಂದಲ ಉಂಟಾಗಿದೆ, ಸ್ಥಳೀಯ ಜನರ ಅಭಿಪ್ರಾಯ ಪಡೆದೇ ತೀರ್ಮಾನ ಮಾಡಲಾಗುತ್ತದೆ. ನಾವು ನಕಲಿ ಹಿಂದುತ್ವವಾದಿಗಳಲ್ಲ. ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದಿರುವುದು ಗೊತ್ತಾಗಿದೆ. ಈ ಮಧ್ಯೆ ನಂಜನಗೂಡು ದೇಗುಲ ತೆರವು ಸಂಬಂಧ ವಸ್ತು ಸ್ಥಿತಿ ವರದಿ ಸಿಎಂ ಕಚೇರಿಗೆ ತಲುಪಿದ್ದು, ಅದರ ಪರಿಶೀಲನೆ ನಡೆಯಲಿದೆ. ರಾಜ್ಯದಲ್ಲಿ ದೇಗುಲ ತೆರವು ಕಾರ್ಯ ಸ್ಥಗಿತಗೊಳಿಸುವ ಕುರಿತು ಇನ್ನೂ ಯಾವುದೇ ಅಧಿಕೃತ ಆದೇಶವನ್ನು ಸಿಎಂ ನೀಡಿಲ್ಲವಾದರೂ ಅವರ ಆದೇಶದ ನಿರೀಕ್ಷೆಯಲ್ಲಿ ಮೈಸೂರು ಭಾಗದ ಬಿಜೆಪಿ ಸಂಸದರು ಮತ್ತು ಶಾಸಕರು ಇದ್ದಾರೆ.
ರಾತ್ರೋರಾತ್ರಿ ದೇವಾಲಯ ತೆರವು ಮಾಡುವುದು ಸರಿಯಲ್ಲ: ಹೆಚ್.ಡಿ.ರೇವಣ್ಣ
ದೇವಾಲಯ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ, ರಾತ್ರೋರಾತ್ರಿ ದೇವಾಲಯ ತೆರವು ಮಾಡುವುದು ಸರಿಯಲ್ಲ. ಯಾವುದೇ ಧಾರ್ಮಿಕ ಕೇಂದ್ರವನ್ನಾದರೂ ಹಾಗೆ ತೆರವು ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ತೆರವು ಕಾರ್ಯಾಚರಣೆಗೆ ಭಜರಂಗ ದಳ ಕಾರ್ಯಕರ್ತರಿಂದ ಭಾರೀ ವಿರೋಧ
2009 ರಿಂದ ಈಚೆಗೆ ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ಧಾರ್ಮಿಕ ಕಟ್ಟಡಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ನೆಲಮಂಗಲ ತಹಶಿಲ್ದಾರ್ ಕೆ.ಮಂಜುನಾಥ್ ನೇತೃತ್ವದಲ್ಲಿ ತೆರವು ಕಾರ್ಯಚರಣೆ ಆರಂಭವಾಗುತ್ತಿದ್ದಂತೆಯೇ ಭಜರಂಗ ದಳದ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಅನಧಿಕೃತ ಕಟ್ಟಡ ತೆರವುಗೊಳಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಸಿ ಶ್ರೀನಿವಾಸ್ ಅವರಿಗೆ ಸುಪ್ರೀಂ ಕೋರ್ಟ್ ಅದೇಶ ಬಂದಿದ್ದು, ಅದನ್ನು ಪಾಲಿಸುವಂತೆ ಎಲ್ಲಾ ತಹಶಿಲ್ದಾರ್ಗಳಿಗೆ ಅವರು ಸೂಚನೆ ನೀಡಿದ್ದಾರೆ. ಆದರೆ, ತೆರವು ಕಾರ್ಯಚರಣೆ ವೇಳೆ ಭಜರಂಗ ದಳದ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ನೆಲಮಂಗಲ ತಾಲೂಕಿನಲ್ಲಿ 20 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಪಟ್ಟಿ ಮಾಡಲಾಗಿದ್ದು, 20 ರಲ್ಲಿ ಕೇವಲ 4 ರ ತೆರವು ಕಾರ್ಯಚರಣೆ ಮಾತ್ರ ನಡೆದಿದೆ. ಪೋಲಿಸ್ ಸಿಬ್ಬಂದಿ ಸಹಕಾರ ಪಡೆದು ತೆರವು ಕಾರ್ಯಚರಣೆ ಮಾಡಲಾದರೂ ಭಾರೀ ವಿರೋಧ ವ್ಯಕ್ತವಾದ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ದೇಗುಲಗಳನ್ನು ತೆರವು ಮಾಡಬೇಕೆಂಬ ವಿಚಾರ ಈಗ ವಿವಾದವಾಗಿದೆ. ಕರ್ನಾಟಕ ರಾಜ್ಯದಲ್ಲಿ ಹಲವು ದೇಗುಲ, ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಆದೇಶ ಪ್ರಕಟವಾಗಿದ್ದು ಸಾರ್ವಜನಿಕರು ಹಾಗೂ ಧರ್ಮೀಯ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇತ್ತ ವಿಧಾನಸೌಧದಲ್ಲಿ ನಡೆಯುತ್ತಿರುವ ಕಲಾಪದಲ್ಲೂ ಈ ಬಗ್ಗೆ ವಿಷಯ ಪ್ರಸ್ತಾಪವಾಗುತ್ತಿದ್ದು, ಗಂಭೀರ ಚರ್ಚೆ ನಡೆಯುತ್ತಿದೆ. ಆ ಕುರಿತಾದ ಮಾಹಿತಿ ಇಲ್ಲಿದೆ.
(Karnataka Breaking News Assembly session demolition of temple in Karnataka CM Bommai Bengaluru News)
Published On - Sep 14,2021 11:23 AM