ಮೂಡಿಗೆರೆ: ಕೆಳಹೊಲದಗದ್ದೆ ಗ್ರಾಮದ ರಸ್ತೆಗಳು ಹೆಸರಿಗೆ ತಕ್ಕಂತೆ ಹೊಲ-ಗದ್ದೆ ಮಯವಾಗಿದೆ! ಕೇಳೋರು ಇಲ್ಲ

| Updated By: ಸಾಧು ಶ್ರೀನಾಥ್​

Updated on: Aug 19, 2021 | 11:12 AM

ಚಿಕ್ಕಮಗಳೂರು: ಹೊಂಡ, ಕೆಸರುಮಯ ರಸ್ತೆಯಲ್ಲಿ ನಿತ್ಯ ಜನರ ಪರದಾಟ. ಇದು ಚಿಕ್ಕಮಗಳೂರು ತಾಲ್ಲೂಕಿನ ಕೆಳಹೊಲದಗದ್ದೆ ಗ್ರಾಮಸ್ಥರ ಗೋಳಾಟ. ಆನ್ ಲೈನ್ ಶಿಕ್ಷಣಕ್ಕೂ ನೆಟ್​ವರ್ಕ್ ಹುಡುಕಿಕೊಂಡು ಗುಂಡಿ ಬಿದ್ದ ರಸ್ತೆಯಲ್ಲೇ ವಿದ್ಯಾರ್ಥಿಗಳ ಓಡಾಟ ನಡೆದಿದೆ. ಮಕ್ಕಳು, ವೃದ್ಧರನ್ನ ಆಸ್ಪತ್ರೆಗೆ ಕರೆದೊಯ್ಯಲು ಹದೆಗೆಟ್ಟ ರಸ್ತೆಯನ್ನೇ ಬಳಸಬೇಕಾದ ಅನಿವಾರ್ಯತೆ ಇಲ್ಲಿದೆ. ಇದು ಮೂಡಿಗೆರೆ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಕೆಳಹೊಲದಗದ್ದೆ ಗ್ರಾಮ ಕತೆ ವ್ಯಥೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ (mudigere) ಕ್ಷೇತ್ರದ ಕೆಳಹೊಲದಗದ್ದೆ (kelaholadagadde village) ಗ್ರಾಮ ರಸ್ತೆ ಕೆಸರು ಗದ್ದೆಯಂತಾಗಿದೆ (paddy […]

ಮೂಡಿಗೆರೆ: ಕೆಳಹೊಲದಗದ್ದೆ ಗ್ರಾಮದ ರಸ್ತೆಗಳು ಹೆಸರಿಗೆ ತಕ್ಕಂತೆ ಹೊಲ-ಗದ್ದೆ ಮಯವಾಗಿದೆ! ಕೇಳೋರು ಇಲ್ಲ
ಮೂಡಿಗೆರೆ: ಕೆಳಹೊಲದಗದ್ದೆ ಗ್ರಾಮದ ರಸ್ತೆಗಳು ಹೆಸರಿಗೆ ತಕ್ಕಂತೆ ಹೊಲ ಗದ್ದೆಮಯವಾಗಿದೆ! ಕೇಳೋರು ಇಲ್ಲ
Follow us on

ಚಿಕ್ಕಮಗಳೂರು: ಹೊಂಡ, ಕೆಸರುಮಯ ರಸ್ತೆಯಲ್ಲಿ ನಿತ್ಯ ಜನರ ಪರದಾಟ. ಇದು ಚಿಕ್ಕಮಗಳೂರು ತಾಲ್ಲೂಕಿನ ಕೆಳಹೊಲದಗದ್ದೆ ಗ್ರಾಮಸ್ಥರ ಗೋಳಾಟ. ಆನ್ ಲೈನ್ ಶಿಕ್ಷಣಕ್ಕೂ ನೆಟ್​ವರ್ಕ್ ಹುಡುಕಿಕೊಂಡು ಗುಂಡಿ ಬಿದ್ದ ರಸ್ತೆಯಲ್ಲೇ ವಿದ್ಯಾರ್ಥಿಗಳ ಓಡಾಟ ನಡೆದಿದೆ. ಮಕ್ಕಳು, ವೃದ್ಧರನ್ನ ಆಸ್ಪತ್ರೆಗೆ ಕರೆದೊಯ್ಯಲು ಹದೆಗೆಟ್ಟ ರಸ್ತೆಯನ್ನೇ ಬಳಸಬೇಕಾದ ಅನಿವಾರ್ಯತೆ ಇಲ್ಲಿದೆ. ಇದು ಮೂಡಿಗೆರೆ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಕೆಳಹೊಲದಗದ್ದೆ ಗ್ರಾಮ ಕತೆ ವ್ಯಥೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ (mudigere) ಕ್ಷೇತ್ರದ ಕೆಳಹೊಲದಗದ್ದೆ (kelaholadagadde village) ಗ್ರಾಮ ರಸ್ತೆ ಕೆಸರು ಗದ್ದೆಯಂತಾಗಿದೆ (paddy fields). ಇಂತಹ ದುರವಸ್ಥೆಯ ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಕೇಳುತ್ತಲೇ ಇದ್ದಾರೆ. ಆದರೆ ಅದನ್ನು ಸಂಬಂಧಪಟ್ಟವರು ಮಾತ್ರ ಕಿವಿಗೆ ಹಾಕಿಕೊಂಡಿಲ್ಲ. ಈ ಬಗ್ಗೆ ಇನ್ನಾದರೂ ಗಮನ ಹರಿಸಿ, ಸಂಬಂಧಪಟ್ಟವರು ಕಾರ್ಯಗತರಾಗಲಿ ಎಂದು ಟಿವಿ9ಗೆ ಪತ್ರ ಬರೆದು ಕೆಳಹೊಲದಗದ್ದೆ ಗ್ರಾಮಸ್ಥರು ಆಶಿಸಿದ್ದಾರೆ.

ಈ ಬಗ್ಗೆ ಇನ್ನಾದರೂ ಗಮನ ಹರಿಸಿ, ಸಂಬಂಧಪಟ್ಟವರು ಕಾರ್ಯಗತರಾಗಲಿ ಎಂದು ಟಿವಿ9ಗೆ ಪತ್ರ ಬರೆದು ಕೆಳಹೊಲದಗದ್ದೆ ಗ್ರಾಮಸ್ಥರು ಆಶಿಸಿದ್ದಾರೆ.

ಅಂದಹಾಗೆ ತಮ್ಮ ಕ್ಷೇತ್ರವನ್ನು ನೆರೆಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂಬ ಬೇಡಿಕೆ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಧಾನಸೌಧದ ಎದುರು ಏಕಾಂಗಿ ಹೋರಾಟ ನಡೆಸಿದ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರ ಮೂಡಿಗೆರೆ ಕ್ಷೇತ್ರದ ವ್ಯಾಪ್ತಿಗೆ ಈ ಗ್ರಾಮ ಬರುತ್ತದೆ.

MP Kumaraswamy: ವಿಧಾನಸೌಧ ಎದುರು ಧರಣಿ ಕುಳಿತ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ! ಡಿಮ್ಯಾಂಡ್​​ ಏನು?

(mudigere haragadde village roads are like paddy fields nobody to take care)

Published On - 11:09 am, Thu, 19 August 21