AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MP Kumaraswamy: ವಿಧಾನಸೌಧ ಎದುರು ಧರಣಿ ಕುಳಿತ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ! ಡಿಮ್ಯಾಂಡ್​​ ಏನು?

ನಮ್ಮದೇ ಸರ್ಕಾರ ಈ ರೀತಿ ತಾರತಮ್ಯ ಮಾಡಬಾರದು. ನಮ್ಮದು ಆದಷ್ಟು ಬೇಗ ಜನರಲ್ ಕ್ಷೇತ್ರ ಆಗಲಿ ಅನಿಸುತ್ತಿದೆ. ಸಚಿವ ಆರ್.ಅಶೋಕ್ ಈ ರೀತಿ ಮಾಡಿದ್ದಾರೆ ಅನಿಸುತ್ತಿಲ್ಲ. ಎಲ್ಲ ಉಸ್ತುವಾರಿ ಸಚಿವರು ಭೇಟಿ ನೀಡ್ತಾರೆ, ಏನೂ ಮಾಡಲ್ಲ. ಇವರಿಗೆ ಮಾತಲ್ಲಿ ಹೇಳಿದ್ರೆ ಅರ್ಥ ಆಗಲ್ಲ, ಹೀಗಾಗಿ ಧರಣಿ ಕುಳಿತಿರುವೆ ಎಂದು ವಿಧಾನಸೌಧದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

MP Kumaraswamy: ವಿಧಾನಸೌಧ ಎದುರು ಧರಣಿ ಕುಳಿತ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ! ಡಿಮ್ಯಾಂಡ್​​ ಏನು?
ವಿಧಾನಸೌಧ ಮೆಟ್ಟಿಲಿನ ಮೇಲೆ ಧರಣಿ ಕುಳಿತ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ!
TV9 Web
| Updated By: ಸಾಧು ಶ್ರೀನಾಥ್​|

Updated on:Aug 12, 2021 | 12:27 PM

Share

ಬೆಂಗಳೂರು: ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲೇ ಯಾಕೋ ಬೆಲೆ ಸಿಗ್ತಿಲ್ಲ. ಮೀಸಲು (ರಿಸರ್ವ್) ಕ್ಷೇತ್ರವೆಂಬ ಕಾರಣಕ್ಕೋ ಏನೋ ಕಡೆಗಣಿಸ್ತಿದ್ದಾರೆ ಎಂದು ವಿಧಾನಸೌಧದ ಎದುರು ಮೆಟ್ಟಿಲಿನ ಮೇಲೆ ಧರಣಿ ಕುಳಿತಿರುವ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ನೊಂದುಕೊಂಡು ಹೇಳಿದ್ದಾರೆ.

ನಮ್ಮದೇ ಸರ್ಕಾರ ಈ ರೀತಿ ತಾರತಮ್ಯ ಮಾಡಬಾರದು. ನಮ್ಮದು ಆದಷ್ಟು ಬೇಗ ಜನರಲ್ ಕ್ಷೇತ್ರ ಆಗಲಿ ಅನಿಸುತ್ತಿದೆ. ಸಚಿವ ಆರ್.ಅಶೋಕ್ ಈ ರೀತಿ ಮಾಡಿದ್ದಾರೆ ಅನಿಸುತ್ತಿಲ್ಲ. ಎಲ್ಲ ಉಸ್ತುವಾರಿ ಸಚಿವರು ಭೇಟಿ ನೀಡ್ತಾರೆ, ಏನೂ ಮಾಡಲ್ಲ. ಇವರಿಗೆ ಮಾತಲ್ಲಿ ಹೇಳಿದ್ರೆ ಅರ್ಥ ಆಗಲ್ಲ, ಹೀಗಾಗಿ ಧರಣಿ ಕುಳಿತಿರುವೆ ಎಂದು ವಿಧಾನಸೌಧದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ನಾವೇನು ಲೂಟಿ ಹೊಡೆಯೋಕೆ ಬರ್ತೀವಾ, ಸಚಿವ ಅಶೋಕ್​ಗೇ ಇಲ್ಲಿಗೆ ಬರೋಕ್ಕೆ ಹೇಳು: ಗುಡುಗಿದ ಶಾಸಕ ಕುಮಾರಸ್ವಾಮಿ ವಿಧಾನೌಧ ಮೆಟ್ಟಿಲಿನ ಮೇಲೆ ಧರಣಿ ನಡೆಸುವುದನ್ನು ನಿಲ್ಲಿಸುವಂತೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಸ್ವಪಕ್ಷದವರೇ ಆದ ಸಚಿವ ಆರ್ ಅಶೋಕ್  ಮೊದಲು ಮನವೊಲಿಸಲು ಪ್ರಯತ್ನಪಟ್ಟರು. ಕಂದಾಯ ಸಚಿವ ಅಶೋಕ್ ಪಿಎಸ್ ಪ್ರಶಾಂತ್ ರಿಂದ ಫೋನ್ ಮೂಲಕ ಧರಣಿನಿರತ ಶಾಸಕ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಲು ಯತ್ನಿಸಿದರು.

ಆದರೆ ಇದರಿಂದ ಸಿಟ್ಟಿಗೆದ್ದ  ಶಾಸಕ ಕುಮಾರಸ್ವಾಮಿ ಕರೆ ಸ್ವಿಕರಿಸಲು ನಿರಾಕರಿಸಿದರು. ಹೇಳಿದ ಒಂದು ಕೆಲಸವನ್ನೂ ಮಾಡಿಕೊಡಲ್ಲ,  ನಾವೇನು ಲೂಟಿ ಹೊಡೆಯೋಕೆ ಬರ್ತೀವಾ? ಸಚಿವರೇ ಸ್ಥಳಕ್ಕೆ ಬರಲಿ ಎಂದು ಆಕ್ರೋಶಗೊಂಡರು. ಎಂಪಿ ಕುಮಾರಸ್ವಾಮಿ ಸಿಟ್ಟಿಗೆ ಬೆದರಿ ಆರ್ ಅಶೋಕ್ ಪಿಎಸ್ ಪ್ರಶಾಂತ್ ವಾಪಸ್ಸಾದರು.  ಆದರೆ ಆ ಪ್ರಯತ್ನ ವಿಫಲವಾದ ಬೆನ್ನಲ್ಲೇ ಮಾಜಿ ಶಾಸಕ ಡಿ ಎನ್ ಜೀವರಾಜ್ ಸ್ಥಳಕ್ಕಾಗಮಿಸಿ, ಪ್ರತಿಭಟನಾನಿರತ ಶಾಸಕ‌ ಕುಮಾರಸ್ವಾಮಿ ಮನವೊಲಿಸುವ ಪ್ರಯತ್ನ ಮುಂದುವರಿಸಿದರು.

ಸ್ಥಳಕ್ಕೆ ದೌಡಾಯಿಸಿದ ಸಚಿವ ಅಶೋಕ್, ಕಣ್ಣೀರು ಹಾಕಿದ ಶಾಸಕ ಎಂಪಿ ಕುಮಾರಸ್ವಾಮಿ:

ಈ ಮಧ್ಯೆ, ಅಶೋಕ ಆಪ್ತ ಕಾರ್ಯದರ್ಶಿ ಮೂಲಕ ಸಂಧಾನ ಯತ್ನ ವಿಫಲವಾದ ಬಳಿಕ ಖುದ್ದು ಸಚಿವ ಆರ್ ಅಶೋಕ್ ಅವರೇ ಶಾಸಕ ಕುಮಾರಸ್ವಾಮಿ ಧರಣಿ ಕುಳಿತಿದ್ದ ಸ್ಥಳಕ್ಕೆ ದೌಡಾಯಿಸಿದರು. ಸಚಿವರ ಮುಂದೆ ಎಂಪಿ ಕುಮಾರಸ್ವಾಮಿ ಕಣ್ಣೀರು ಹಾಕಿದರು. ಮನವೊಲಿಕೆಗೆ ಗಾಂಧಿ ಪ್ರತಿಮೆ ಬಳಿಯೇ ಬಂದ ಆರ್ ಅಶೋಕ್ ಅವರನ್ನು ಕಾಣುತ್ತಿದ್ದಂತೆ ಎಂಪಿ ಕುಮಾರಸ್ವಾಮಿ ಕಣ್ಣೀರುಗೆರೆದರು.

ನಾನು ಹಿರಿಯ ಶಾಸಕ, ನನಗೇ ಹಿಗೆ ಮಾಡೋದು ಸರಿಯಾ? ಎಷ್ಟು ಬೇಜಾರಾಗಲ್ಲ ನಮಗೆ ಹೇಳಿ. ಮಂತ್ರಿ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿಲ್ವಾ? ನಾನು ಪಕ್ಷಕ್ಕೆ ಲಾಯಲ್ ಆಗಿಲ್ವಾ? ಯಾವತ್ತಾದ್ರೂ ಬ್ಲ್ಯಾಕ್ ಮೇಲ್ ಮಾಡಿದ್ದೀನಾ? ನೀವೆಲ್ಲ ಹೇಳಿದ್ದು ಕೇಳಿಕೊಂಡು ಇಲ್ಲವಾ ನಾನು? ನನ್ನ ಮಾತಿಗೆ ತೂಕ ಇಲ್ಲ ಅಂದ್ರೆ ಹೇಗೆ? ಎಂದು ಅಳುತ್ತಲೇ ಆರ್ ಅಶೋಕ್ ಮುಂದೆ ಎಂಪಿ ಕುಮಾರಸ್ವಾಮಿ ತಮ್ಮ  ಅಳಲು ತೋಡಿಕೊಂಡರು.  ಎಂಪಿ ಕುಮಾರಸ್ವಾಮಿ ಅವರನ್ನು ಸಮಾಧಾನಪಡಿಸಲು ಸಚಿವ ಆರ್ ಅಶೋಕ್ ತಕ್ಷಣ ಅವರನ್ನು ತಮ್ಮ ಕಚೇರಿಗೆ ಕರೆದೊಯ್ದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯಿಂದ ಪ್ರವಾಹ ಪರಿಹಾರ ಹಣ ದುರ್ಬಳಕೆ; ಗ್ರಾಮ ಪಂಚಾಯತಿ ಸದಸ್ಯನಿಂದ ಗಂಭೀರ ಆರೋಪ (mudigere bjp mla mp kumaraswamy sits dharana on the stairs of vidhana soudha)

Published On - 12:08 pm, Thu, 12 August 21

ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು ನೋಡಿ
ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು ನೋಡಿ
VIDEO: ಮ್ಯಾಕ್ಸ್​ವೆಲ್ ಮ್ಯಾಜಿಕ್... ಎಂತಹ ಅದ್ಭುತ ಕ್ಯಾಚ್
VIDEO: ಮ್ಯಾಕ್ಸ್​ವೆಲ್ ಮ್ಯಾಜಿಕ್... ಎಂತಹ ಅದ್ಭುತ ಕ್ಯಾಚ್