ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯಿಂದ ಪ್ರವಾಹ ಪರಿಹಾರ ಹಣ ದುರ್ಬಳಕೆ; ಗ್ರಾಮ ಪಂಚಾಯತಿ ಸದಸ್ಯನಿಂದ ಗಂಭೀರ ಆರೋಪ

ಈ ಕುರಿತು ದಾಖಲೆಗಳನ್ನ ಲೋಕಾಯುಕ್ತಕ್ಕೆ ನೀಡಿ, ದೂರು ಸಲ್ಲಿಸುತ್ತೇನೆ ಅಂತಾ ಸಚಿನ್ ತಮ್ಮ ಫೇಸ್ಬುಕ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು. ಪರಿಹಾರ ಕಾಮಗಾರಿಗಳು ಆಗದ ಬಗ್ಗೆ ಪ್ರಶ್ನೆ ಮಾಡಿದಾಗ ಶಾಸಕರಿಗೆ ಕಮಿಷನ್ ಕೊಡಬೇಕು ಅಂತಾ ಇಂಜಿನಿಯರ್​ಗಳು, ಶಾಸಕರ ಆಪ್ತರು ನನಗೆ ಹೇಳಿದ್ದಾರೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯಿಂದ ಪ್ರವಾಹ ಪರಿಹಾರ ಹಣ ದುರ್ಬಳಕೆ; ಗ್ರಾಮ ಪಂಚಾಯತಿ ಸದಸ್ಯನಿಂದ ಗಂಭೀರ ಆರೋಪ
ಗ್ರಾಮ ಪಂಚಾಯತಿ ಸದಸ್ಯ ಸಚಿನ್

ಚಿಕ್ಕಮಗಳೂರು: ನನಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಕೊಲೆ ಬೆದರಿಕೆ ಹಾಕಿದ್ದಾರೆ ಅಂತಾ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯತಿ ಸದಸ್ಯ ಸಚಿನ್ ಗಂಭೀರ ಆರೋಪ ಮಾಡಿದ್ದಾರೆ. 2019ರಲ್ಲಿ ಪ್ರವಾಹದಿಂದ ಮೂಡಿಗೆರೆ ತಾಲೂಕಿನ ಬಾಳೂರು, ಕಳಸ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಪ್ರವಾಹದಿಂದ ಹಾನಿಗೀಡಾದ ರಸ್ತೆ, ಸೇತುವೆ, ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳ ದುರಸ್ತಿ ಮಾಡಲು ನೂರು ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ. ಆದರೆ ಮಂಜುರಾದ ಹಣವನ್ನ ಶಾಸಕರು, ಇಂಜಿನಿಯರ್ಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತಾ ಸಚಿನ್ ಫೇಸ್ಬುಕ್ ಪೋಸ್ಟ್​ನಲ್ಲಿ ಆರೋಪಿಸಿದ್ದರು.

ಈ ಕುರಿತು ದಾಖಲೆಗಳನ್ನ ಲೋಕಾಯುಕ್ತಕ್ಕೆ ನೀಡಿ, ದೂರು ಸಲ್ಲಿಸುತ್ತೇನೆ ಅಂತಾ ಸಚಿನ್ ತಮ್ಮ ಫೇಸ್ಬುಕ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು. ಪರಿಹಾರ ಕಾಮಗಾರಿಗಳು ಆಗದ ಬಗ್ಗೆ ಪ್ರಶ್ನೆ ಮಾಡಿದಾಗ ಶಾಸಕರಿಗೆ ಕಮಿಷನ್ ಕೊಡಬೇಕು ಅಂತಾ ಇಂಜಿನಿಯರ್​ಗಳು, ಶಾಸಕರ ಆಪ್ತರು ನನಗೆ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ದಾಖಲೆ ಕೂಡ ನನ್ನಲಿದೆ ಅಂತಾ ಸಚಿನ್ ಹೇಳಿದ್ದಾರೆ.

ತಾನು ಪೋಸ್ಟ್ ಹಾಕಿದ ಬಳಿಕ ತನ್ನನ್ನ ಮೂಡಿಗೆರೆ ಐಬಿಗೆ ಬರಲು ಹೇಳಿ, ಒತ್ತಾಯ ಪೂರ್ವಕವಾಗಿ ಫೇಸ್ಬುಕ್ ಪೋಸ್ಟ್ ಡಿಲೀಟ್ ಮಾಡಿಸಿದರು. ಅಲ್ಲದೇ ಬಾಳೂರು ಪೊಲೀಸರಿಗೆ ಹೇಳಿಸಿ, ನನಗೆ ವಾರ್ನಿಂಗ್ ಕೊಡಿಸುತ್ತಿದ್ದಾರೆ. ಶಾಸಕರು ಪ್ರವಾಹದ ಪರಿಹಾರದ ಅನುದಾನವನ್ನ ದುರ್ಬಳಕೆ ಮಾಡಿಕೊಂಡಿರುವುದು ಸತ್ಯ. ಹಾಗಾಗಿಯೇ ವಾಮಮಾರ್ಗದ ಮೂಲಕ ನನಗೆ ಧಮ್ಕಿ ಹಾಕಲು ಬರುತ್ತಿದ್ದಾರೆ. ಎಲ್ಲಾ ದಾಖಲೆ ನನ್ನ ಬಳಿಯಿದ್ದು, ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಅಂತಾ ನಿಡುವಾಳೆ ಗ್ರಾಮ ಪಂಚಾಯತಿ ಸದಸ್ಯ ಸಚಿನ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ

ಆಟೋ ಚಾಲಕ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾನೆ.. ಚಿಕಿತ್ಸೆಗೆ ನೆರವಾಗಿ: ನಟ ವಿನೋದ್‌ ರಾಜ್ ಮನವಿ

Garuda Purana: ಗರುಡ ಪುರಾಣದಲ್ಲಿ ಹೇಳಿರುವ ಈ 5 ಸಂಗತಿಗಳನ್ನು ಅಳವಡಿಸಿಕೊಂಡರೆ ಬದುಕು ಬದಲಿಸಬಹುದು

(Gram Panchayat Member accused of defrauding MLA MP Krishnamurthy)