ನಕ್ಸಲ್ ನಿಗ್ರಹ ಪಡೆಯನ್ನ ಹಿಂಪಡೆಯುವ ಮಾತೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 22, 2022 | 3:19 PM

ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ. ಎಲ್ಲರಿಗೂ ಒಂದೇ ಕಾನೂನು, ಈ ನೆಲದ ಕಾನೂನನ್ನ ಎಲ್ಲರೂ ಗೌರವಿಸಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು.

ನಕ್ಸಲ್ ನಿಗ್ರಹ ಪಡೆಯನ್ನ ಹಿಂಪಡೆಯುವ ಮಾತೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಚಿಕ್ಕಮಗಳೂರು: 100% ನಿಗ್ರಹವಾಗೋವರೆಗೂ ನಕ್ಸಲ್ ನಿಗ್ರಹ (Naxal suppression) ಪಡೆಯನ್ನ ಹಿಂಪಡೆಯುವ ಮಾತೇ ಇಲ್ಲ ಎಂದು ನಗರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಒಂದು ಬಾರಿ ಪರಿಚಯಿಸಿದ್ದೇವೆ, ಕಾದು ನೋಡುತ್ತೇವೆ. ಇತ್ತೀಚೆಗೆ ಹಲವು ನಕ್ಸಲರ ಬಂಧನವಾಗಿದೆ. ಬೇರೆ ರಾಜ್ಯದವರು ಕ್ರಮಕೈಗೊಂಡಾಗ ಇಲ್ಲಿಗೆ ಬರ್ತಾರೆ. ಇಲ್ಲಿ ಕ್ರಮ ಕೈಗೊಂಡಾಗ ಅಲ್ಲಿಗೆ ಹೋಗುತ್ತಾರೆ. ಎ.ಎನ್.ಎಫ್. ಸಿಬ್ಬಂದಿಗಳು ಅಲ್ಲೇ ಇರಲಿ, ಈ ಬಗ್ಗೆ ಚರ್ಚೆಯೂ ಆಗಿದೆ. ಸದ್ಯಕ್ಕೆ ಇಲ್ಲಿ ನಕ್ಸಲ್ ಚಟುವಟಿಕೆ ಏನೂ ಇಲ್ಲ. ಎಲ್ಲರನ್ನೂ ಅರೆಸ್ಟ್ ಮಾಡಿದ್ದೇವೆ. ಅವರು ಮಾಹಿತಿ ನೀಡಿದವರನ್ನೂ ಬಂಧಿಸಿದ್ದೇವೆ. ನಕ್ಸಲ್ ಬೆಂಬಲಿಗರ ಮೇಲೂ ಕಣ್ಣಿಟ್ಟಿದ್ದೇವೆ. ಹೆಚ್ಚು-ಕಮ್ಮಿಯಾದರೆ ಅವರ ಮೇಲೂ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿ

ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ. ಎಲ್ಲರಿಗೂ ಒಂದೇ ಕಾನೂನು, ಈ ನೆಲದ ಕಾನೂನನ್ನ ಎಲ್ಲರೂ ಗೌರವಿಸಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು. ತಪ್ಪಿದ್ದಾಗ ಇಡಿ ಕರೆದು ವಿಚಾರಣೆ ಮಾಡಿದಾಗ ಪ್ರತಿಭಟನೆ ಮಾಡುತ್ತಾರ. ಅವರಿಗೆ ಈ ದೇಶದ ಕಾನೂನಿನ ಬಗ್ಗೆ ಗೌರವವಿಲ್ಲ. ಕಾಂಗ್ರೆಸ್ ದೇಶದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಜನ ತುಚ್ಛವಾಗಿ ನೋಡುತ್ತಾರೆ ಎಂದರು.

ಇದನ್ನೂ ಓದಿ: ಗ್ರಾಮ ಪಂಚಾಯತಿಗೆ ನುಗ್ಗಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಆರೋಪ; ಕಾಂಗ್ರೆಸ್ ಮುಖಂಡ ಅರೆಸ್ಟ್, ಡಾ. ಕೆ.ಸುಧಾಕರ್ ವಿರುದ್ಧ ಆಕ್ರೋಶ

ಮಹಾರಾಷ್ಟ್ರ ಅತೃಪ್ತ ಶಾಸಕರು ರೇಸಾರ್ಟ್ ಹೋಗಿರೋ ಹಿನ್ನೆಲೆ ಮಾತನಾಡಿದ್ದು, 2019 ಬಿಜೆಪಿ-ಶಿವಸೇನೆ ಒಟ್ಟಿಗೆ ಜನರ ಬಳಿ ಹೋಗಿದ್ದರು ಜನ ತೀರ್ಪು ನೀಡಿದರು. ಉದ್ಧವ ಠಾಕ್ರೆ ಉದ್ದಟತನ ಮಾಡಿ 8 ಪಕ್ಷ ಸೇರಿಸಿಕೊಂಡು ಸಿಎಂ ಆಗಿದ್ದರು. ಎಲ್ಲರಿಗೂ ಗೊತ್ತಿತ್ತು ಇದು ಬಹಳ ದಿನ ನಡೆಯಲ್ಲ, ಈ ಸರ್ಕಾರಕ್ಕೆ ಆಯಸ್ಸು ಕಡಿಮೆ ಅಂತ. ಇಂದು ಅದರಂತೆಯೇ ಎಲ್ಲಾ ನಡೆಯುತ್ತಿದೆ, ಇದು ಮೊದಲೇ ಗೊತ್ತಿತ್ತು ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.