Karnataka Rain: ಕಾಫಿನಾಡು ಚಿಕ್ಕಮಗಳೂರಲ್ಲಿ ಜಲಸ್ಪೋಟ; ಒಂದು ಎಕರೆ ಕಾಫಿ ಮತ್ತು ಅಡಿಕೆ ತೋಟ ನಾಶ

| Updated By: ವಿವೇಕ ಬಿರಾದಾರ

Updated on: Jul 11, 2022 | 4:04 PM

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ತಾಲೂಕಿನ ಅರೇನೂರು ಗ್ರಾಮದಲ್ಲಿ  ಏಕಾಏಕಿ ಮಳೆಯಾಗಿ ಒಂದು ಎಕರೆ ಕಾಫಿತೋಟ ಮತ್ತು ಅಡಿಕೆ ತೋಟ ಕೊಚ್ಚಿಕೊಂಡು ಹೋಗಿದೆ.

Karnataka Rain: ಕಾಫಿನಾಡು ಚಿಕ್ಕಮಗಳೂರಲ್ಲಿ ಜಲಸ್ಪೋಟ; ಒಂದು ಎಕರೆ ಕಾಫಿ ಮತ್ತು ಅಡಿಕೆ ತೋಟ ನಾಶ
ಚಿಕ್ಕಮಗಳೂರು ಕೊಚ್ಚಿ ಹೋದ ಕಾಫಿ ತೋಟ
Follow us on

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು (Chikkamagaluru) ತಾಲೂಕಿನ ಅರೇನೂರು ಗ್ರಾಮದಲ್ಲಿ  ಏಕಾಏಕಿ ಮಳೆಯಾಗಿ ಒಂದು ಎಕರೆ ಕಾಫಿತೋಟ (Coffee Estate) ಮತ್ತು ಅಡಿಕೆ ತೋಟ (Nut Plantation) ಕೊಚ್ಚಿಕೊಂಡು ಹೋಗಿದೆ.  ರಾಮು-ವಸಂತಿ ದಂಪತಿಗೆ ಸೇರಿದ ಕಾಫಿ ತೋಟ ಸಂಪೂರ್ಣ ನಾಶವಾಗಿದ್ದು,  ಬೃಹತ್ ಬಂಡೆಗಳು, ದೊಡ್ಡ ದೊಡ್ಡ ಮರಗಳು, ಮನೆ ಬಳಿಯೇ ಬಂದು ನಿಂತಿವೆ. ಜಲ ಸ್ಫೋಟದ ಹೊಡೆತಕ್ಕೆ ಬಡ ಕುಟುಂಬ ನಲುಗಿ ಹೋಗಿದೆ.

ತೋಟ ಕಳೆದುಕೊಂಡ ಮಹಿಳೆ ಮಾತನಾಡಿ ಕಷ್ಟಪಟ್ಟು ಕೂಲಿ ನಾಲಿ ಮಾಡಿ ಬೆಳೆಸಿದ ಕಾಫಿ ತೋಟ ಕ್ಷಣ ಮಾತ್ರದಲ್ಲಿ ನಾಶವಾಗಿದೆ. 30 ವರ್ಷಗಳ ಹಿಂದೆ ತಲೆ ಮೇಲೆ ಮಣ್ಣು ಹೊತ್ತು ತಂದು ತೋಟ ಮಾಡಿದ್ದೆ. ಇದೀಗ ಎಲ್ಲವೂ ಮಳೆಯಿಂದ ಕೊಚ್ಚಿಕೊಂಡು ಹೋಗಿದೆ ಎಂದು ಮಹಿಳೆ ಕಣ್ಣೀರಾಕಿದ್ದಾರೆ.

ಟಿವಿ9 ಜೊತೆ ರೈತ ಧರ್ಮೇಗೌಡ ಮಾತನಾಡಿ ಸ್ಪೋಟಗೊಳ್ಳುವ ವೇಳೆ ಇಡೀ ಊರೇ ಬೆಚ್ಚಿ ಬೀಳುವ ಹಾಗೆ ಶಬ್ದ ಕೇಳಿಸಿತು. ತೋಟಕ್ಕೆ ಬಂದು ನೋಡಿದರೆ ಪ್ರವಾಹದ ರೀತಿಯಲ್ಲಿ ತೋಟದಲ್ಲಿ ನೀರು ಹರಿಯುತ್ತಿತ್ತು. ನನ್ನ ಜೀವಮಾನದಲ್ಲೇ ಈ ರೀತಿಯ ಘಟನೆಯನ್ನು ಕಂಡಿಲ್ಲ ಎಂದು  ಹೇಳಿದರು.

ಘಟನಾ ಸ್ಥಳಕ್ಕೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಭೇಟಿ ನೀಡಿ ಪರೀಶಿಲಿಸಿದ್ದಾರೆ. ಅರೇನೂರು ಗ್ರಾಮ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಈ ಬಾರಿ ಮಳೆಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಸಂತ್ರಸ್ತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಸತತ ಮಳೆಗೆ ಜಿಲ್ಲೆಯ ಹೊರವಲಯದ ನಲ್ಲೂರು ನಲ್ಲೂರು ಕೆರೆ  ಕೋಡಿ ಬಿದ್ದಿದೆ. ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲೇ ಕೆರೆ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದಿದ್ದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

 

Published On - 4:04 pm, Mon, 11 July 22