ಚಿಕ್ಕಮಗಳೂರು, (ಮೇ 24): ಫೇಸ್ಬುಕ್ನಲ್ಲಿ ಪಾಕಿಸ್ತಾನ ಪರ ಪೋಸ್ಟ್ ಮಾಡಿದ್ದ ಚಿಕ್ಕಮಗಳೂರಿನ ಕೊಪ್ಪದ ಅಸ್ಗರ್ ಎಂಬಾತನಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಅಸ್ಗರ್ ಕೊಪ್ಪಗೆ ಜೂನ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಎನ್.ಆರ್.ಪುರ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ, ಬಜರಂಗದಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಹಾಕಿದ್ದ. ಅಲ್ಲದೇ ಪಾಕಿಸ್ತಾನ ಪರ ಪೋಸ್ಟರ್ ಹಾಕಿದ್ದ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಮುಖಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡು ಅಸ್ಗರ್ನನ್ನು ಬಂಧಿಸಿದ್ದರು.
ಫೇಸ್ ಬುಕ್ ನಲ್ಲಿ ಪೋಸ್ಟ್: ಪಾಕಿಸ್ತಾನ ಜಿಂದಾಬಾದ್ , ಮೋದಿ , ಕೊಪ್ಪ ಭಜರಂಗದಳದ ವಿರುದ್ಧ ಸಹಾ ಅವಹೇಳನಕಾರಿ ಆಗಿ ಆಸ್ಗರ್ ಕೊಪ್ಪ ಎಂಬ ಫೇಸ್ಬುಕ್ ಅಕೌಂಟ್ನಲ್ಲಿ ಪೋಸ್ಟ್ ಹಾಕಿದ್ದು, ಈ ಸಂಬಂಧ ಭಾರೀ ವಿರೋಧ ವ್ಯಕ್ತವಾಗಿತ್ತು. ಬಳಿಕ ಆಸ್ಗರ್ ಫೇಸ್ಬುಕ್ ಆಕೌಂಟನ್ನೇ ಡಿಲೀಟ್ ಮಾಡಿದ್ದ. ಆದರೂ ಸಹ ಆಸ್ಗರ್ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಪಡಿಸಿದ್ದವು. ಬೆನ್ನಲ್ಲೇ ಆರೋಪಿ ಆಸ್ಗರ್ ವಿರುದ್ಧ ಕೊಪ್ಪ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಸಿಕೊಂಡು ಬಂಧಿಸಿ ಇಂದು (ಮೇ 24) ಎನ್ಆರ್ ಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಫೇಸ್ಬುಕ್ನಲ್ಲಿ ಪಾಕಿಸ್ತಾನ ಪರ ಪೋಸ್ಟ್, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಪೊಲೀಸರು
ವಿಚಾರಣೆ ನಡೆಸಿದ ಎನ್ ಆರ್ ಪುರ ಕೋರ್ಟ್ ಆರೋಪಿಗೆ ಜೂನ್ 6ರವರೆಗೆ ನ್ಯಾಯಾಂಗ ವಿಧಿಸಿ ಆದೇಶ ನೀಡಿದೆ. ಇನ್ನು ಕೊಪ್ಪ ಭಜರಂಗದಳದ ವಿರುದ್ಧ ಪೋಸ್ಟ್ ಹಾಕಿದ್ದ ಆಸ್ಗರ್ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಯನ್ನು ಸಾರ್ವಜನಿಕರಿಗೆ ಒಪ್ಪಿಸುವಂತೆ ಒತ್ತಾಯ ಸಹಾ ಕೇಳಿ ಬಂದಿತ್ತು.
Published On - 7:14 pm, Fri, 24 May 24