ಚಿಕ್ಕಮಗಳೂರು: ಅರಣ್ಯ ಸೂಕ್ಷ್ಮ ಪ್ರದೇಶಕ್ಕೂ ಕಾಲಿಟ್ಟ ರಿಯಲ್​ ಎಸ್ಟೇಟ್ ದಂಧೆಕೋರರು!

| Updated By: ವಿವೇಕ ಬಿರಾದಾರ

Updated on: Jan 08, 2024 | 8:52 AM

ಕಾಫಿನಾಡು ಚಿಕ್ಕಮಗಳೂರಿನ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶಗಳಿಗೂ ರಿಯಲ್​ ಎಸ್ಟೇಟ್ ಕಾಲಿಟ್ಟಿದೆ. ರಾಜ್ಯದ ಪ್ರತಿಷ್ಠಿತ ರಿಯಲ್​ ಎಸ್ಟೇಟ್​ ಕಂಪನಿಗಳು ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಕಾಡಾನೆಗಳು ಓಡಾಡುವ ಸೂಕ್ಷ್ಮ ಪ್ರದೇಶಗಳಲ್ಲಿ ಲೇಔಟ್ ನಿರ್ಮಾಣ ಮಾಡಲು ಮುಂದಾಗಿವೆ.

ಚಿಕ್ಕಮಗಳೂರು: ಅರಣ್ಯ ಸೂಕ್ಷ್ಮ ಪ್ರದೇಶಕ್ಕೂ ಕಾಲಿಟ್ಟ ರಿಯಲ್​ ಎಸ್ಟೇಟ್ ದಂಧೆಕೋರರು!
ಲೇಔಟ್​ ನಕಾಶೆ
Follow us on

ಚಿಕ್ಕಮಗಳೂರು, ಜನವರಿ 08: ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಲೇಔಟ್​, ವಿಲ್ಲಾಗಳನ್ನು ನಿರ್ಮಿಸುತ್ತಿದ್ದ ರಿಯಲ್​ ಎಸ್ಟೇಟ್ (Real estate)​ ಕಂಪನಿಗಳು ಈಗ ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶಗಳಿಗೂ ಕಾಲಿಟ್ಟಿವೆ. ರಾಜ್ಯದ ಪ್ರತಿಷ್ಠಿತ ರಿಯಲ್​ ಎಸ್ಟೇಟ್​ ಕಂಪನಿಗಳು ಭದ್ರಾ ಹುಲಿ ಸಂರಕ್ಷಿತ ಪ್ರದೇಶ (Bhadra tiger reserve forest), ಕಾಡಾನೆಗಳು ಓಡಾಡುವ ಸೂಕ್ಷ್ಮ ಪ್ರದೇಶಗಳಲ್ಲಿ ಲೇಔಟ್ ನಿರ್ಮಾಣ ಮಾಡಲು ಮುಂದಾಗಿವೆ.

ಚಿಕ್ಕಮಗಳೂರು ತಾಲೂಕಿನ ಜಾಗರ ಹೋಬಳಿಯ ಹುಲುವತ್ತಿ ಮತ್ತು ಗೊಣಕಲ್ ಗ್ರಾಮಗಳಲ್ಲಿ 242 ಎಕರೆ ಜಗಾವನ್ನು ತುಂಡು ಭೂಮಿಯಾಗಿ ವಿಭಜಿಸಿ ಲೇಔಟ್​ ನಿರ್ಮಿಸಲು ಆರು ಕಂಪನಿಗಳು ತಯಾರಾಗಿವೆ. ಈ ಲೇಔಟ್​ಗಳನ್ನು ಹೊರ ರಾಜ್ಯದವರಿಗೆ ಮಾರಾಟ ಮಾಡಲು ಪ್ಲಾನ್ ಮಾಡಿಕೊಂಡಿವೆ. ಕಾಫಿ ಪ್ಲಾಂಟೇಶನ್ ಮಾಡುತ್ತೇವೆ ಎಂದು ಕದ್ದು ಮುಚ್ಚಿ ರಿಯಲ್ ಎಸ್ಟೇಟ್ ದಂಧೆ ನಡೆಸಿವೆ.

ಇದನ್ನೂ ಓದಿ: ಚಿಕ್ಕಮಗಳೂರು: ಅರ್ಜಿ ಸಲ್ಲಿಸದೆಯೂ, ಅಕ್ರಮವಾಗಿ ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಂಡ ಭೂಗಳ್ಳರು ಬಯಲಿಗೆ ಬಿದ್ದರು!

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶ ಇಲ್ಲ. ಮತ್ತು ಸುಪ್ರೀಂಕೋರ್ಟ್​ ಆದೇಶದ ಪ್ರಕಾರ ಯಾವುದೇ ರಕ್ಷಿತ ಪ್ರದೇಶದ ಗಡಿಯಿಂದ 10 ಕಿಮೀ ವ್ಯಾಪ್ತಿಯು ಪರಿಸರ ಸೂಕ್ಷ್ಮ ಪ್ರದೇಶ. ಆದರೆ ಕಂಪನಿಗಳು ವನ್ಯಜೀವಿ ಕಾಯ್ದೆ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು​ ಗಾಳಿಗೆ ತೂರಿ ರಿಯಲ್ ಎಸ್ಟೇಟ್ ನಿರ್ಮಿಸಲು ಕಂಪನಿಗಳು ಮುಂದಾಗಿವೆ.

ಆರು ಕಂಪನಿಗಳಿಗೆ ನೋಟಿಸ್​

ಇನ್ನು ರಿಯಲ್ ಎಸ್ಟೇಟ್​ಗೆ ಅನುಮತಿ ನೀಡದಂತೆ ಜಿಲ್ಲಾಡಳಿತಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ. ಈ ಬಳಿಕ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಭೂ ಪರಿವರ್ತನೆ ಮಾಡಿದ ಅಧಿಕಾರಿಗಳಿಗೆ ಏಳು ಅಧಿಕಾರಿಗಳಿಗೆ ಮಾಹಿತಿ ಕೇಳಿ‌ ನೋಟಿಸ್ ಜಾರಿ ಮಾಡಿದ್ದಾರೆ. ಹಾಗೇ ಲೇಔಟ್​ ನಿರ್ಮಿಸಲು ಮುಂದಾಗಿದ್ದ ಜೆಎಫ್ ಕಾಫಿ ಬೈದಿ ಸ್ಟ್ರೀಮ್ ಎಲ್ ಎಲ್‌ಪಿ ವ್ಯವಸ್ಥಾಪಕ ಪಾಲುದಾರ ಆದಿತ್ಯ, ಎಂ ಎಸ್ ಜಯರಾಮ್, ಐಬಿಸಿ ಎಸ್ಟೇಟ್​ನಿಂದ ಜಿಪಿಎ ಪಡೆದಿರುವ ವಿ ಬಾರೆಟೊ, ಅಭಿಷೇಕ್ ಜಿಂದಾಲ್, ಮಹೇಂದ್ರ ಎಸ್ ಕೆ ಅವರಿಗೆ ನೋಟಿಸ್​ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ