ಚಿಕ್ಕಮಗಳೂರಿನಲ್ಲಿ ಇಂದಿನಿಂದ ಸರ್ಕಾರಿ ಭೂಮಿ, ಅರಣ್ಯ ಭೂಮಿಗಳ ಸರ್ವೆ ಕಾರ್ಯ ಆರಂಭ
ರಾಜ್ಯವೇ ಬೆಚ್ಚಿ ಬೆಳಿಸುವಂತೆ ಭೂ ಅಕ್ರಮಕ್ಕೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ. ದಕ್ಷಿಣ ಕರ್ನಾಟಕದ ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಅಗ್ರಸ್ಥಾನದಲ್ಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಅರಣ್ಯ ಭೂಮಿ ಹಾಗೂ ಸರ್ಕಾರಿ ಜಮೀನು ಸರ್ವೆಗೆ 15 ಭೂಮಾಪಕರ ತಂಡ ರಚನೆ ಮಾಡಿದ್ದು, ಇಂದಿನಿಂದ ಸರ್ಚೆ ಕಾರ್ಯ ಆರಂಭವಾಗಲಿದೆ.
ಚಿಕ್ಕಮಗಳೂರು, ಡಿ.18: ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಭೂ ಅಕ್ರಮಕ್ಕೆ ಸಾಕ್ಷಿಯಾಗಿರುವ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಇಂದಿನಿಂದ ಸರ್ಕಾರಿ ಭೂಮಿ, ಅರಣ್ಯ ಭೂಮಿಗಳ ಸರ್ವೆ ಕಾರ್ಯ ಆರಂಭವಾಗಲಿದೆ. ಸರ್ಕಾರಿ ಭೂಮಿಗಳ ಅಕ್ರಮ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಜಮೀನುಗಳ ಸರ್ವೆ ನಡೆಸಲು 15 ಭೂಮಾಪಕರ ತಂಡ ರಚನೆ ಮಾಡಿ ಆದೇಶಿಸಿತ್ತು.
ಅದರಂತೆ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇಂದಿನಿಂದ ವಿಶೇಷ ತಂಡ ಸರ್ವೆ ಕಾರ್ಯ ನಡೆಸಲಿದೆ. ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ, ಸರ್ಕಾರಿ ಭೂಮಿ ಕಬಳಿಕೆ ಮಾಡಲಾಗಿರುವುದರಿಂದ ಜಿಲ್ಲೆಯಲ್ಲಿ ಅರಣ್ಯ ಮತ್ತು ಸರ್ಕಾರಿ ಭೂಮಿ ಕೊರತೆಯಾಗಿದೆ.
ಜಿಲ್ಲೆಯಲ್ಲಿ ಒಂದು ಅಲ್ಲ ಎರಡೂ ಅಲ್ಲ, ಸಾವಿರಾರು ಎಕರೆ ಭೂಮಿ ಭೂಗಳ್ಳರ ಪಾಲಾಗಿದೆ. ಅತಿ ದೊಡ್ಡ ಭೂ ಅಕ್ರಮದ ತನಿಖೆಗಿಳಿದ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದ 750 ಎಕರೆ ಜಮೀನನ್ನು ಈಗಾಗಲೇ ರದ್ದು ಮಾಡಿದ್ದಾರೆ. ಕೇವಲ ಇನ್ನೂ 245 ಪ್ರಕರಣಗಳ ವಿಚಾರಣಗಳ ಪೈಕಿ ಈ ಪರಿಯ ಅಕ್ರಮ ಜಮೀನು ದೊರೆತಿದ್ದು, ನಿಜಕ್ಕೂ ಆಶ್ಚರ್ಯ ಮೂಡಿಸಿದೆ. 2019ರಿಂದ 2021ರವರೆಗೆ ನಡೆದಿರುವ ಕಡತಗಳ ವಿಚಾರಣೆ ನಡೆಸಿದ ಅಧಿಕಾರಿಗಳು ಈ ಪರಿಯ ಒತ್ತುವರಿ ನೋಡಿ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: ಕಲಬುರಗಿ ಬಹಮನಿ ಸುಲ್ತಾನರ ಕೋಟೆ ಒತ್ತುವರಿ ತೆರವಿಗೆ ಚಾಟಿ ಬೀಸಿದ ಹೈಕೋರ್ಟ್, ಏನಿದು ಬೆಳವಣಿಗೆ?
ಜಿಲ್ಲೆಯಾದ್ಯಂತ ಎರಡು ಲಕ್ಷ ಎಕರೆಗೂ ಹೆಚ್ಚು ಸರಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಜಿಲ್ಲಾ ನೋಡಲ್ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಈ ಹಿಂದೆ ಹೇಳಿದ್ದರು. ಸಾಗುವಳಿ ಮಾಡಲು ಗೋಮಾಳ ಜಮೀನು ಮಂಜೂರು ಮಾಡಲು ಯಾವುದೇ ಅಧಿಕಾರಿಗಳಿಗೆ ಅಧಿಕಾರವಿಲ್ಲ. ಮಂಜೂರು ಮಾಡಿದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 2002ಕ್ಕಿಂತ ಮೊದಲು ಯಾರಾದರೂ ಗೋಮಾಳದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದರೆ ಅದನ್ನು ಮಂಜೂರು ಮಾಡಬಹುದು. ಆದರೆ, ಖಾಸಗಿಯವರಿಗೆ ಗೋಮಾಳ ಭೂಮಿ ಮಂಜೂರು ಮಾಡುವಂತಿಲ್ಲ ಎಂದು ಎಚ್ಚರಿಸಿದ್ದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಕಟಾರಿಯಾ ಅವರು, ನಿಯಮಾವಳಿ ಉಲ್ಲಂಘಿಸಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ 48 ಪ್ರಕರಣಗಳಿದ್ದು, ಒಂಬತ್ತು ತಹಶೀಲ್ದಾರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಜೈಲಿಗೆ ಹಾಕಲಾಗುವುದು ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ