AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ಬಹಮನಿ ಸುಲ್ತಾನರ ಕೋಟೆ ಒತ್ತುವರಿ ತೆರವಿಗೆ ಚಾಟಿ ಬೀಸಿದ ಹೈಕೋರ್ಟ್, ಏನಿದು ಬೆಳವಣಿಗೆ?

ಕಲಬುರಗಿ ಜಿಲ್ಲಾಡಳಿತ/ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಬಹಮನಿ ಕೋಟೆ ಸಂಪೂರ್ಣ ಒತ್ತುವರಿಯಾಗಿದ್ದು ದುರಂತವೇ ಸರಿ. ಇನ್ನಾದರೂ ಹೈಕೋರ್ಟ್ ಆದೇಶದ ಪ್ರಕಾರ ಜಿಲ್ಲಾಡಳಿತ ಕೋಟೆಯೊಳಗಿನ ಒತ್ತುವರಿದಾರರನ್ನ ಹೊರಗೆ ದಬ್ಬುತ್ತಾ ಕಾದು ನೋಡಬೇಕು.

ಕಲಬುರಗಿ ಬಹಮನಿ ಸುಲ್ತಾನರ ಕೋಟೆ ಒತ್ತುವರಿ ತೆರವಿಗೆ ಚಾಟಿ ಬೀಸಿದ ಹೈಕೋರ್ಟ್, ಏನಿದು ಬೆಳವಣಿಗೆ?
ಬಹಮನಿ ಸುಲ್ತಾನರು ಕೋಟೆ ಒತ್ತುವರಿ ತೆರವಿಗೆ ಚಾಟಿ ಬೀಸಿದ ಹೈಕೋರ್ಟ್
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Dec 14, 2023 | 5:03 PM

Share

ಅದು ಬಹಮನಿ ಸುಲ್ತಾನರು ಆಳ್ವಿಕೆ ನಡೆಸಿದಂತಹ ಐತಿಹಾಸಿಕ ಕೋಟೆ. ಅದನ್ನ ಸಂರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರವಲ್ಲದೇ ನಾಗರಿಕರ ಮೇಲೂ ಇರುತ್ತೆ.. ಆದರೆ ಅಲ್ಲಿ ಮಾತ್ರ ಕೆಲ ಜನರು ಅಕ್ರಮವಾಗಿ ಮನೆಗಳನ್ನ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಒತ್ತುವರಿ ಮಾಡಿಕೊಂಡವರನ್ನ ತೆರವುಗೊಳಿಸಲು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡಿದ್ರು ವರ್ಕೌಟ್ ಆಗಿರಲಿಲ್ಲ. ಸದ್ಯ ನ್ಯಾಯಲವೇ ( Karnataka High Court) ಜಿಲ್ಲಾಡಳಿತಕ್ಕೆ ಒತ್ತುವರಿ ತೆರವು ಮಾಡೋಕೆ ಕೊನೆಯ ಚಾನ್ಸ್ ನೀಡಿದೆ. ಹೌದು ಕಲಬುರಗಿ ಕೋಟೆ – ಇದೊಂದು ಐತಿಹಾಸಿಕ ಹಾಗೂ ಪಾರಂಪರಿಕ ಕೋಟೆ (Bahmani Sultan fort in Kalaburagi). 1347 ರಲ್ಲಿ ಬಹಮನಿ ಸುಲ್ತಾನರು ಬಿಜಾಪುರದಿಂದ ತಮ್ಮ ಸಾಮ್ರಾಜ್ಯವನ್ನ ಕಲಬುರಗಿಗೆ ವಿಸ್ತರಿಸಿದ್ದರು. ಆದರೆ ಕಲಬುರಗಿಯಲ್ಲಿ ಬಹಮನಿ ರಾಜರ ಆಳ್ವಿಕೆಯ ನಂತರ ಈ ಕೋಟೆಯಲ್ಲಿ ಕಳೆದ 60/70 ವರ್ಷಗಳಿಂದ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನೂರಾರು ಜನ ವಾಸ ಮಾಡುತ್ತಿದ್ದಾರೆ.

ಹಿಗೇ ಒತ್ತುವರಿ ಮಾಡಿಕೊಂಡು ಕೋಟೆಯೊಳಗೆ 62 ಮನೆಗಳನ್ನ ನಿರ್ಮಿಸಿಕೊಂಡರೆ, ಕೋಟೆ ಸುತ್ತಮುತ್ತ 114 ಕಟ್ಟಡಗಳನ್ನ ನಿರ್ಮಾಣ ಮಾಡಲಾಗಿದೆ‌‌. ಹಾಗಾಗಿ ಒತ್ತುವರಿ ಮಾಡಿಕೊಂಡ ಮನೆಗಳು ಹಾಗೂ ಕಟ್ಟಡಗಳನ್ನ ತೆರವುಗೊಳಿಸಲು ಕಲಬುರಗಿ ಜಿಲ್ಲಾಡಳಿತ ದೃಢ ಮನಸ್ಸು ಮಾಡಿರಲಿಲ್ಲ. ಈ ಬಗ್ಗೆ ನ್ಯಾಯಾಲಯ ಸಹ ಪಾರಂಪರಿಕ ಕೋಟೆ ಒತ್ತುವರಿ ಮಾಡಿಕೊಂಡವರನ್ನ ತೆರವು ಮಾಡಬೇಕು ಅಂತಾ ಸೂಚಿಸಿತ್ತು. ಅಷ್ಟಾದ್ರು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಕಲಬುರಗಿ ಬಹಮನಿ ಕೋಟೆಯೊಳಗಿನ ಮನೆಗಳನ್ನ ತೆರವುಗೊಳಿಸಲು ಕಲಬುರಗಿ ಹೈಕೋರ್ಟ್ ಪೀಠ ಕೊನೆ ಅವಕಾಶ ನೀಡಿದೆ.

ಕಲಬುರಗಿ ಬಹಮನಿ ಕೋಟೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನ ಮತ್ತು ಕಟ್ಟಡಗಳನ್ನ ತೆರವು ಮಾಡುವಂತೆ 2018 ರಲ್ಲೆ ಹಿಂದೂಪರ ಸಂಘಟನೆಗಳು ಹಾಗೂ ಸ್ಥಳೀಯರು ಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು. ಹೀಗಾಗಿ ಕಾಲಮಿತಿಯೊಳಗೆ ಒತ್ತುವರಿ ತೆರವುಗೊಳಿಸಬೇಕೆಂದು 2019 ರಲ್ಲಿ ಅಂದಿನ ನ್ಯಾಯಮೂರ್ತಿಗಳು ಆದೇಶಿಸಿದ್ದರು.

ಇತ್ತ ಜಿಲ್ಲಾಡಳಿತ ಮಾತ್ರ ಕೋಟೆಯೊಳಗಿನ ಒತ್ತುವರಿ ಮಾಡಿಕೊಂಡವರನ್ನ ತೆರವು ಮತ್ತು ಪುನರ್ವಸತಿ ಕಲ್ಪಿಸಲು ಸಮಯ ಕೋರುತ್ತ ಕಾಲಹರಣ ಮಾಡುತ್ತಲೆ ಬಂದಿತ್ತು. ಇದರ ಮಧ್ಯೆ ವೋಟ್ ಬ್ಯಾಂಕ್‌ಗಾಗಿ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಕೋಟೆಯೊಳಗೆ ಅಕ್ರಮವಾಗಿ ಮನೆಗಳನ್ನ ನಿರ್ಮಿಸಿಕೊಂಡವರಿಗೆ ವಿದ್ಯುತ್, ಕುಡಿಯುವ ನೀರಿನ ನಳ ಸಂಪರ್ಕ, ಜೊತೆಗೆ ರಸ್ತೆ ಮತ್ತು ಚರಂಡಿ ಸೌಲಭ್ಯಗಳನ್ನ ಸಹ ಕಲ್ಪಿಸಲಾಗಿದೆ.

Also Read: ಬೆಂಗಳೂರು -ಕೇವಲ ಮೂರೇ ತಿಂಗಳಲ್ಲಿ 1134 ಕಡೆ ಸರ್ಕಾರಿ ಭೂಮಿ ಒತ್ತುವರಿ

ಇದೀಗ ಕಲಬುರಗಿ ಹೈಕೋರ್ಟ್ ಪೀಠ, ಕೋಟೆಯೊಳಗಿನ ಮನೆಗಳನ್ನ ಮತ್ತು ಸುತ್ತಮುತ್ತಲಿನ ಕಟ್ಟಡಗಳನ್ನ 2024 ರ ಜನವರಿ 11 ರೊಳಗೆ ವಿಚಾರಣೆ ಬರುವುದಕ್ಕಿಂತ ಮೊದಲೆ ತೆರವುಗೊಳಿಸುವಂತೆ ಹೇಳಿದೆ. ತೆರವು ಮಾಡೋ ಅನಿವಾರ್ಯತೆ ಜಿಲ್ಲಾಡಳಿತಕ್ಕೆ ಎದುರಾಗಿದೆ. ಹೈಕೋರ್ಟ್ ಸೂಚನೆಯಂತೆ ಜಿಲ್ಲಾಡಳಿತ ಕೂಡಲೇ ಒತ್ತುವರಿ ತೆರವು ಕಾರ್ಯ ಆರಂಭಿಸಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

ಅದೆನೇ ಇರಲಿ ಪ್ರಾಚೀನ ಸ್ಮಾರಕಗಳು, ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958 ರ ಪ್ರಕಾರ ಪ್ರಾಚೀನ ಸ್ಮಾರಕಗಳೆಂದು ಅಧಿಸೂಚನೆ ಸ್ಥಳಗಳಲ್ಲಿ ವ್ಯಕ್ತಿ ಅಥವಾ ಮಾಲೀಕರು ಸ್ವಾಧೀನ ಮಾಡಿಕೊಳ್ಳುವಂತಿಲ್ಲ. ಆದರೆ ಕಲಬುರಗಿ ಜಿಲ್ಲಾಡಳಿತ/ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಬಹಮನಿ ಕೋಟೆ ಸಂಪೂರ್ಣ ಒತ್ತುವರಿಯಾಗಿದ್ದು ಮಾತ್ರ ದುರಂತವೇ ಸರಿ.. ಇನ್ನಾದರೂ ಹೈಕೋರ್ಟ್ ಆದೇಶದ ಪ್ರಕಾರ ಜಿಲ್ಲಾಡಳಿತ ಕೋಟೆಯೊಳಗಿನ ಒತ್ತುವರಿದಾರರನ್ನ ಹೊರಗೆ ದಬ್ಬುತ್ತಾ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ