Muttodi: ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ದರ್ಶನ ನೀಡಿದ ಹುಲಿರಾಯ
ಕಾಡಿನ ಮಧ್ಯೆ ಪ್ರವಾಸಿಗರಿಗೆ ಹುಲಿ ಕಾಣಸಿಗುವುದೇ ಅಪರೂಪ. ಅಂತಹದರಲ್ಲಿ ಇಂದು ಕೆಲ ಪ್ರವಾಸಿಗರು ತುಂಬಾ ಸಮೀಪದಿಂದ ಹುಲಿರಾಯದ ದರ್ಶನ ಮಾಡಿ ಖುಷ್ ಆಗಿದ್ದಾರೆ. ಹುಲಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಕ್ಕಮಗಳೂರು: ಮುತ್ತೋಡಿ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ವ್ಯಾಘ್ರನ ದರ್ಶನವಾಗಿದೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅಭಯಾರಣ್ಯದಲ್ಲಿ ಸಫಾರಿ ವಾಹನದಲ್ಲಿ ತೆರಳುತ್ತಿದ್ದಾಗ ನಡುರಸ್ತೆಯಲ್ಲೇ ಹುಲಿ ದರ್ಶನವಾಗಿದೆ. ಹುಲಿ ನೋಡಿ ಪ್ರವಾಸಿಗರು ಖುಷ್ ಆಗಿದ್ದು ಫೋಟೋ ಕ್ಲಿಕ್ಕಿಸಿ, ವೀಡಿಯೋ ಮಾಡಿದ್ದಾರೆ. ಕಾಡಿನ ಮಧ್ಯೆ ಪ್ರವಾಸಿಗರಿಗೆ ಹುಲಿ ಕಾಣಸಿಗುವುದೇ ಅಪರೂಪ. ಅಂತಹದರಲ್ಲಿ ಇಂದು ಕೆಲ ಪ್ರವಾಸಿಗರು ತುಂಬಾ ಸಮೀಪದಿಂದ ಹುಲಿರಾಯದ ದರ್ಶನ ಮಾಡಿ ಖುಷ್ ಆಗಿದ್ದಾರೆ. ಹುಲಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Latest Videos