Running Tether: ಒಳಗಣ್ಣಿಂದ ಪ್ರಧಾನಿ ಮೋದಿಯನ್ನ ‘ನೋಡಿದ’ ಮಲೆನಾಡಿನ ಅಂಧಗಾತಿ ರಕ್ಷಿತಾ, ಮೋದಿಗೆ ವಿಶೇಷ ಗಿಫ್ಟ್ ನೀಡಿ ಸಂತಸಪಟ್ಟಿದ್ದಾಳೆ! ಏನದು ’ನೋಡಿ‘

| Updated By: ಸಾಧು ಶ್ರೀನಾಥ್​

Updated on: Nov 03, 2023 | 3:41 PM

ರನ್ನಿಂಗ್​ ಟೆಥರ್​: ಚೀನಾದಲ್ಲಿ ಪ್ಯಾರಾ ಒಲಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದಿರುವ ಕಾಫಿನಾಡಿನ ಅಂಧ ಅಥ್ಲೀಟ್ ರಕ್ಷಿತಾ ರಾಜು ಮೂಡಿಗೆರೆ ತಾಲೂಕಿನ ಕಾಡಂಚಿನ ಕುಗ್ರಾಮ ಗುಡ್ನಳ್ಳಿಯವಳು. ಚಿಕ್ಕಂದಿನಲ್ಲೇ ಹೆತ್ತವರನ್ನ ಕಳೆದುಕೊಂಡವಳು ಮಾತು ಬಾರದ ಅಜ್ಜಿಯ ಜೊತೆ ಬೆಳೆದಳು. ಈಕೆ ಪ್ರಧಾನಿ ಮೋದಿಗೆ ದೇಶದಲ್ಲೇ ಸಿಗದ ಅಪರೂಪದ ಗಿಫ್ಟ್ ನೀಡಿ ತನ್ನ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾಳೆ. ಇದೇ ವೇಳೆ ರಕ್ಷಿತಾಗೆ ರಾಜ್ಯ ಸರ್ಕಾರದ ನೆರವು ಬೇಕಿದೆ. ಏನದು?

Running Tether: ಒಳಗಣ್ಣಿಂದ ಪ್ರಧಾನಿ ಮೋದಿಯನ್ನ ‘ನೋಡಿದ’ ಮಲೆನಾಡಿನ ಅಂಧಗಾತಿ ರಕ್ಷಿತಾ, ಮೋದಿಗೆ ವಿಶೇಷ ಗಿಫ್ಟ್ ನೀಡಿ ಸಂತಸಪಟ್ಟಿದ್ದಾಳೆ! ಏನದು ’ನೋಡಿ‘
ಅಂಧಗಾತಿ ರಕ್ಷಿತಾಳಿಂದ ಜೊತೆಯಾಗಿ ಓಡಲು ಸಹಕರಿಸುವ ರನ್ನಿಂಗ್​ ಟೆಥರ್ ಗಿಫ್ಟ್ ಪಡೆದ ಮೋದಿ:
Follow us on

ಆಕೆ ಅಂಧ ಓಟಗಾರ್ತಿ. ಮಲೆನಾಡ ಕಾಡಂಚಿನ ಕುಗ್ರಾಮದವಳು. ಅಂಗವಿಕಲತೆಯನ್ನ (visually impaired) ಮೆಟ್ಟಿ ನಿಂತು ದೇಶ-ರಾಜ್ಯಕ್ಕೆ ಕೀರ್ತಿ ತಂದ ಛಲದಂಕಮಲ್ಲೆ. ಪ್ರಧಾನಿ ಮೋದಿ ಹೇಗಿದ್ದಾರೆ ಅಂತಾನೂ ಗೊತ್ತಿಲ್ಲ. ಹೆಸರಲ್ಲೇ ತನ್ನ ಒಳಗಣ್ಣಿನಿಂದ ಅವರನ್ನ ನೋಡಿರೋ ಮೋದಿ ಅಭಿಮಾನಿ. ಮೋದಿಯನ್ನೇ ನೋಡದ ಆಕೆ ಮೋದಿಗೆ ಗಿಫ್ಟ್ ನೀಡಿ ಸಂತಸಪಟ್ಟಿದ್ದಾಳೆ. ಪ್ರಧಾನಿ ಮೋದಿ ಕೂಡ ಆಕೆಯ ಉಡುಗೊರೆಗೆ ಮಾರುಹೋಗಿದ್ದಾರೆ. ಬೆಸ್ಟ್ ಆಫ್ ಲಕ್ ಫಾರ್ ಯುವರ್ ಫ್ಯೂಚರ್ ಅಂತ ಶುಭ ಹಾರೈಸಿದ್ದಾರೆ. ಹಾಗಾದ್ರೆ, ಆ ಅಂಧ ಯುವತಿಗೆ ಮೋದಿ ಕೊಟ್ಟ ಗಿಫ್ಟ್ ಏನು ಗೊತ್ತಾ…. ಈ ಸ್ಟೋರಿ ನೋಡಿ. ಚೀನಾದಲ್ಲಿ ನಡೆದ ಪ್ಯಾರಾ ಏಷಿಯಾ ಒಲಂಪಿಕ್‍ನಲ್ಲಿ (Women’s 1500m-T11 at the Asian Para Games) ಚಿನ್ನದ ಪದಕ ಗೆದ್ದು ಗೆಲುವಿನ ನಾಗಾಲೋಟದಲ್ಲಿರೋ ಕಾಫಿನಾಡಿನ ಅಂಧ ಅಥ್ಲಿಟ್ ರಕ್ಷಿತಾ ರಾಜು ಪ್ರಧಾನಿ ಮೋದಿಗೆ ದೇಶದಲ್ಲೇ ಸಿಗದ ಗಿಫ್ಟ್ ನೀಡಿ ಮತ್ತೊಂದು ಸಂತೋಷದಲ್ಲಿದ್ದಾಳೆ. ರಕ್ಷಿತಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಾಡಂಚಿನ ಕುಗ್ರಾಮ ಗುಡ್ನಳ್ಳಿಯವಳು. ಚಿಕ್ಕಂದಿನಲ್ಲೇ ಹೆತ್ತವರನ್ನ ಕಳೆದುಕೊಂಡಿದ್ದ ರಕ್ಷಿತಾ ರಾಜು ಮಾತು ಬಾರದ ಅಜ್ಜಿ ಜೊತೆ ಬೆಳೆದು ಚಿಕ್ಕಮಗಳೂರಿನ (chikkamagalu) ಅಂಧ ಮಕ್ಕಳ ಶಾಲೆಯಲ್ಲಿ ಓದಿ ಕ್ರೀಡಾಸಕ್ತಿ ಬೆಳೆಸಿಕೊಂಡು ಇಂದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದಾಳೆ.

ಕಳೆದ ತಿಂಗಳು ಚೀನಾದ ಹಾಗೌಂಜ್‍ನಲ್ಲಿ ನಡೆದ ಪ್ಯಾರಾ ಏಷ್ಯಾ ಒಲಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾಳೆ. ಚೀನಾದಿಂದ ಬಂದ ಬಳಿಕ ಕೇಂದ್ರ ಸರ್ಕಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಧಾನಿ ಮೋದಿಗೆ ರನ್ನಿಂಗ್​ ಟೆಥರ್ (Running Tether) ಗಿಫ್ಟ್ ನೀಡಿದ್ದಾಳೆ. ರಕ್ಷಿತಾ ರಾಜು ಇದನ್ನು ಚೀನಾದಿಂದ ತಂದು ಪ್ರಧಾನಿ ಮೋದಿಗೆ ಕೊಟ್ಟಿದ್ದಾರೆ. 2018-23ರಲ್ಲಿ ತಾನು ಎರಡು ಚಿನ್ನದ ಪದಕ ಗೆದ್ದಿರುವುದರ ಕುರುಹಾಗಿ ಪ್ರಧಾನಿ ಮೋದಿಗೆ ರನ್ನಿಂಗ್​ ಟೆಥರ್ ಗಿಫ್ಟ್ ನೀಡಿದ್ದಾಳೆ. ಪ್ರಧಾನಿ ಮೋದಿ ಕೂಡ ಆಕೆಯ ಉಡುಗೊರೆಗೆ ಸಂತಸಪಟ್ಟಿದ್ದಾರೆ.

ಅಂಧಗಾತಿ ರಕ್ಷಿತಾಳಿಂದ ಜೊತೆಯಾಗಿ ಓಡಲು ಸಹಕರಿಸುವ ರನ್ನಿಂಗ್​ ಟೆಥರ್ ಗಿಫ್ಟ್ ಪಡೆದ ಮೋದಿ:

ರನ್ನಿಂಗ್​ ಟೆಥರ್ ಅಂದರೆ ಅಂಧ ಓಟಗಾರರೊಂದಿಗೆ ಜೊತೆಜೊತೆಯಾಗಿ ಓಡುವ ಜೊತೆ ಓಟಗಾರರಿಗೆ ಅದು ಸಹಾಯ ಮಾಡುತ್ತೆ. ಅದು ನಿರ್ದಿಷ್ಟವಾಗಿ ಹೀಗೆಯೇ ಇರಬೇಕೆಂಬ ನಿಯಮವಿದೆ. ಅದನ್ನ ಅಂತರಾಷ್ಟ್ರೀಯ ಪ್ಯಾರಾ ಒಲಂಪಿಕ್ ಸಮಿತಿ ಸರ್ಟಿಫೈ ಮಾಡಿರುತ್ತೆ. ಅಂಧರ ಜೊತೆ ಓಡುವವರು ತಮ್ಮ ಕೈಗೆ ಹಾಕಿಕೊಳ್ಳುತ್ತಾರೆ. ಸ್ಪರ್ಧಿ ಓಡುವುದಕ್ಕೆ ಸಮನಾಗಿ ಸಹ ಓಟಗಾರ ಕೂಡ ಓಡಬೇಕು. ಸ್ಪರ್ಧಿಯನ್ನು ಅವರು ಮುಟ್ಟುವಂತಿಲ್ಲ. ಎಳೆದುಕೊಂಡು ಓಡುವಂತಿಲ್ಲ. ಅಂಧರಿಗಿಂತ ಇವರೇ ಮೊದಲು ಓಡುವಂತಿಲ್ಲ. ಹೀಗೆ ಹತ್ತಾರು ನಿಯಮಗಳ ಮಧ್ಯೆ ಅಂಧ ಓಟಗಾರರು ಹಾಗೂ ಜೊತೆ ಓಟಗಾರರ ಮಧ್ಯೆ ಸಮಯೋಚಿತವಾಗಿ ಓಡಲು ಈ ರನ್ನಿಂಗ್​ ಟೆಥರ್ ಸಹಾಯ ಮಾಡುತ್ತೆ. ಇಂತಹಾ ವಿಶೇಷ ರನ್ನಿಂಗ್​ ಟೆಥರ್ ಸಾಧನವನ್ನು ಮೋದಿಗೆ ರಕ್ಷಿತಾ ಉಡುಗೊರೆಯಾಗಿ ನೀಡಿದ್ದಾಳೆ.

ರನ್ನಿಂಗ್​ ಟೆಥರ್​ ಅಂದರೆ Running Tether is a long band with handles at both ends – made of strong cotton. It enables visually impaired people to run safely alongside a sighted guide or Guide Runner. Both runners can slide the hoops over their wrists, or grip them. ಇಲ್ಲಿ ಹೆಚ್ಚಿನ ಮಾಹಿತಿ ನೀಡುವುದಾದರೆ… ಇದೇ ಅಂಧ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತರಗಳನ್ನು ಬರೆಯುವಾಗ ಒಬ್ಬ ಸಹಾಯಕರನ್ನು ನೇಮಿಸಿಕೊಳ್ಳುತ್ತಾರೆ. ಆ ಸಹಾಯಕ ವ್ಯಕ್ತಿಯು ಪರೀಕ್ಷಾ ಮೇಲ್ವಿಚಾರಕರ ಸಮ್ಮುಖದಲ್ಲಿ ಅಂಧ ವಿದ್ಯಾರ್ಥಿ ಹೇಳಿದ್ದನ್ನಷ್ಟೇ ಬರೆಯುತ್ತಾರೆ.

ರಾಜ್ಯ ಸರ್ಕಾರ ಅಂಧಗಾತಿ ರಕ್ಷಿತಾಗೆ ನೆರವಾಗಬೇಕಿದೆ

ಇನ್ನು, ಕುಗ್ರಾಮದಲ್ಲಿ ಹುಟ್ಟಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರೋ ರಕ್ಷಿತಾ ಮನೆಗೆ ಹೋಗೋದಕ್ಕೆ ದಾರಿ ಇಲ್ಲ. ಕಾಫಿ ತೋಟದ ಕಾಲು ದಾರಿಯಲ್ಲಿ ಅವರ ಮನೆಗೆ ಹೋಗಬೇಕು. ಹಾಗಾಗಿ, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ತಮ್ಮ ಮನೆಗೆ ಹೋಗಲು ದಾರಿ ಬಿಡಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಟ್ಟಾರೆ, ಕುಗ್ರಾಮದಲ್ಲಿ ಹುಟ್ಟಿ ಮಾತು ಬಾರದ ಅಜ್ಜಿ ಜೊತೆ ಬೆಳೆದು ಅಂಧ ಮಕ್ಕಳ ಶಾಲೆಯಲ್ಲಿ ಓದಿ ಕ್ರೀಡಾಸಕ್ತಿ ಬೆಳೆಸಿಕೊಂಡು ಮತ್ತೊಬ್ಬರ ಸಹಾಯದಿಂದ ಓಡಿ ದೇಶಕ್ಕೆ ಕೀರ್ತಿ ತಂದ ಈ ಯುವತಿಗೆ ಸರ್ಕಾರ ಸೂಕ್ತ ಬಹುಮಾನ ನೀಡಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ, ಮನೆಗೆ ಹೋಗೋದಕ್ಕೆ ದಾರಿ ಇಲ್ಲ ಅಂತ ರಕ್ಷಿತಾ ಊರಿಗೆ ಬರೋದು ಕೂಡ ಕಡಿಮೆ. ಹಾಗಾಗಿ, ಸರ್ಕಾರ ಆಕೆ ಮನೆಗೆ ಹೋಗೋದಕ್ಕೆ ಕೂಡಲೇ ದಾರಿ ನಿರ್ಮಿಸಿಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Fri, 3 November 23