ಹಳೇ ದ್ವೇಷ; ಪಾರ್ಟಿಗೆ ಕರೆದು ಚಿಕ್ಕಬಳ್ಳಾಪುರದಲ್ಲಿ ಯುವಕನ ಕೊಲೆ

| Updated By: sandhya thejappa

Updated on: Jun 08, 2021 | 8:38 AM

ವಿವಾಹಿತ ಅಪ್ರಾಪ್ತೆ ಮಗಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಗಳ ಪ್ರಿಯಕರನ ಕೊಲೆಗೆ ಆಕೆಯ ತಂದೆ ಯತ್ನಿಸಿದ್ದಾನೆ. ಕಲ್ಲಿನಾಯ್ಕನಹಳ್ಳಿ ಗ್ರಾಮದ ಗಂಗಾಧರಪ್ಪ, ಪಕ್ಕದ ಬಸವಾಪುರ ಗ್ರಾಮದ ಫೀರ್ ಖಾನ್ (32) ಎಂಬುವವನ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹಳೇ ದ್ವೇಷ; ಪಾರ್ಟಿಗೆ ಕರೆದು ಚಿಕ್ಕಬಳ್ಳಾಪುರದಲ್ಲಿ ಯುವಕನ ಕೊಲೆ
ಕೊಲೆಯಾದ ಯುವಕ
Follow us on

ಚಿಕ್ಕಬಳ್ಳಾಪುರ: ಹಳೆ ದ್ವೇಷದ ಹಿನ್ನೆಲೆ ಪಾರ್ಟಿಗೆ ಕರೆದು ಯುವಕನ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಹೊರವಲಯ ಮುಷ್ಟೂರು ಕೆರೆ ಬಳಿ ನಡೆದಿದೆ. 26 ವರ್ಷದ ವೆಂಕಟೇಶ್ ಕೊಲೆಯಾದ ಯುವಕ. ಮಂಜುನಾಥ್, ಪ್ರವೀಣ್, ಇಸೂಪ್ ಎಂಬುವವರು ವೆಂಕಟೇಶ್​ನನ್ನು ಕೊಲೆ ಮಾಡಿ ಬಾಗೇಪಲ್ಲಿಯಲ್ಲಿ ಅಡಗಿಕೊಂಡಿದ್ದರು. ಆದರೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಗೆ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಕೊಲೆ ಪ್ರಕರಣ ಕುರಿತು ಪರಿಶೀಲನೆ ನಡೆಸಿದ್ದಾರೆ.

ಅನೈತಿಕ ಸಂಬಂಧ ಆರೋಪ; ಕೊಲೆಗೆ ಯತ್ನ
ವಿವಾಹಿತ ಅಪ್ರಾಪ್ತೆ ಮಗಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಗಳ ಪ್ರಿಯಕರನ ಕೊಲೆಗೆ ಆಕೆಯ ತಂದೆ ಯತ್ನಿಸಿದ್ದಾನೆ. ಕಲ್ಲಿನಾಯ್ಕನಹಳ್ಳಿ ಗ್ರಾಮದ ಗಂಗಾಧರಪ್ಪ, ಪಕ್ಕದ ಬಸವಾಪುರ ಗ್ರಾಮದ ಫೀರ್ ಖಾನ್ (32) ಎಂಬುವವನ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಗಂಗಾಧರಪ್ಪ ಕೃತ್ಯಕ್ಕೆ ಬಳಸಿದ್ದ ಮೊಬೈಲ್​ನನ್ನು ಒಲೆಗೆ ಹಾಕಿ ಸುಟ್ಟು ಹಾಕಿದ್ದಾನೆ. ಸದ್ಯ ಆರೋಪಿಯನ್ನು ಮಂಚೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಅಪ್ರಾಪ್ತೆ, ಆಕೆಯ ತಾಯಿ ಮತ್ತು ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಾಯಾಳು ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಯತ್ನಿಸಿದ ಗಂಗಾಧರಪ್ಪ

ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯತಿ ನೀರುಗಂಟಿ ಮಣಿಮುತ್ತು (34) ಶಿವಪುರ ಬಳಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಈ ಪ್ರಕರಣ ಕೊಡ್ಲಿಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಅಗ್ನಿಶಾಮಕ ದಳಕ್ಕೆ ಮುಳುಗು ತಜ್ಞರು ಸಾತ್ ನೀಡುತ್ತಿದ್ದಾರೆ.

ಇದನ್ನೂ ಓದಿ

ಹಳೇ ದ್ವೇಷ, ಅಧಿಕಾರದ ಮದ.. ಅಪಘಾತ ಮಾಡಿಸಿ ವ್ಯಕ್ತಿ ಕೊಲೆ ಮಾಡಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ?

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಪ್ರಕರಣ; ಟಿವಿ9 ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ಕೆ.ಸುಧಾಕರ್

(Chikkballapur three people have murdered a young man at party)