ಶಾಲೆ ಆರಂಭಿಸಿದರೆ ಮಕ್ಕಳೇ Super Spreaders.. ಹಾಗಾದ್ರೆ ತಜ್ಞರ ಪ್ರಕಾರ ಶಾಲೆ ರಿಓಪನ್ ಯಾವಾಗ ಗೊತ್ತಾ?

|

Updated on: Oct 05, 2020 | 9:01 AM

ಬೆಂಗಳೂರು: ಶಾಲಾ‌ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭಿಸುವುದಕ್ಕೆ ರಾಜ್ಯ ಸರ್ಕಾರಗಳು ಗಂಭೀತವಾಗಿ ಚಿಂತನೆ ನಡೆಸಿವೆ. ಆದರೆ ಶಾಲಾಮಕ್ಕಳೇ ಸೂಪರ್‌ ಸ್ಪ್ರೆಡರ್ ಆಗಿಬಿಟ್ಟರೆ ಎಂಬ ಆತಂಕ ಮನೆಮಾಡಿದೆ. ಮಕ್ಕಳಿಂದ ಮನೆ ಮನೆಗೂ ಕೊರೊನಾ ಹಬ್ಬುವ ಆತಂಕ ಪೋಷಕರಲ್ಲಿ ಹೆಚ್ಚಾಗಿದೆ. ರಾಜ್ಯದಲ್ಲಿಯಂತೂ ಕೊರೊನಾ‌ ಕಂಟ್ರೋಲ್​ಗೆ ಬಾರದ ಕಾರಣ ಕೊರೊನಾ ಟಾಸ್ಕ್ ಪೋರ್ಸ್ ಸದಸ್ಯರಿಂದ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿದ್ದು, ಈ ಪಾಸಿಟಿವ್ ರೇಟ್ ನಲ್ಲಿ‌ ಶಾಲೆ‌‌ ಆರಂಭ ಬೇಡವೇ ಬೇಡ ಎಂದಿದ್ದಾರೆ. […]

ಶಾಲೆ ಆರಂಭಿಸಿದರೆ ಮಕ್ಕಳೇ Super Spreaders.. ಹಾಗಾದ್ರೆ ತಜ್ಞರ ಪ್ರಕಾರ ಶಾಲೆ ರಿಓಪನ್ ಯಾವಾಗ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಶಾಲಾ‌ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭಿಸುವುದಕ್ಕೆ ರಾಜ್ಯ ಸರ್ಕಾರಗಳು ಗಂಭೀತವಾಗಿ ಚಿಂತನೆ ನಡೆಸಿವೆ. ಆದರೆ ಶಾಲಾಮಕ್ಕಳೇ ಸೂಪರ್‌ ಸ್ಪ್ರೆಡರ್ ಆಗಿಬಿಟ್ಟರೆ ಎಂಬ ಆತಂಕ ಮನೆಮಾಡಿದೆ. ಮಕ್ಕಳಿಂದ ಮನೆ ಮನೆಗೂ ಕೊರೊನಾ ಹಬ್ಬುವ ಆತಂಕ ಪೋಷಕರಲ್ಲಿ ಹೆಚ್ಚಾಗಿದೆ.

ರಾಜ್ಯದಲ್ಲಿಯಂತೂ ಕೊರೊನಾ‌ ಕಂಟ್ರೋಲ್​ಗೆ ಬಾರದ ಕಾರಣ ಕೊರೊನಾ ಟಾಸ್ಕ್ ಪೋರ್ಸ್ ಸದಸ್ಯರಿಂದ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿದ್ದು, ಈ ಪಾಸಿಟಿವ್ ರೇಟ್ ನಲ್ಲಿ‌ ಶಾಲೆ‌‌ ಆರಂಭ ಬೇಡವೇ ಬೇಡ ಎಂದಿದ್ದಾರೆ. ಕರ್ನಾಟಕದಲ್ಲಿ ಸದ್ಯ ಕೊರೊನಾ ಪಾಸಿಟಿವ್ ರೇಟ್ ಶೇ. 12.18 ರಷ್ಟಿದೆ. ಶೇ.5ಕ್ಕೆ ಬಂದರೆ ಮಾತ್ರ ಸೋಂಕು ಕಂಟ್ರೋಲ್ ಗೆ ಬರ್ತಿದೆ ಅಂತಾ ಅರ್ಥ. ಆದ್ರೆ ಡೆಡ್ಲಿ ವೈರಸ್ ಪ್ರತಿನಿತ್ಯ ಅಟ್ಟಹಾಸ ಮೆರೆಯುತ್ತಲೇ ಇದೆ. ಪಾಸಿಟಿವ್ ರೇಟ್ ಕಡಿಮೆ ಆಗೋವರೆಗೂ ಶಾಲೆ ಆರಂಭ ಬೇಡ ಎಂಬುದು ತಜ್ಞರ ಅಭಿಮತ.

ಮಕ್ಕಳು ಶಾಲಾ ಕಾಲೇಜಿಗೆ ಹೋಗದೆ ಮನೆಯಲ್ಲಿದ್ದರೂ ಬಿಡ್ತೀಲ್ಲಾ ಕೊರೊನಾ. 20 ವರ್ಷದೊಳಗಿನ ಸುಮಾರು 60 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದೆ. ಈ ಪೈಕಿ 60ಕ್ಕೂ ಹೆಚ್ಚು ‌ಮಕ್ಕಳು ಕೊರೊನಾಗೆ ಬಲಿಯಾಗಿದ್ದಾರೆ ಎಂಬುದು ಆತಂಕದ ವಿಚಾರ. ಹಲವು ಶಿಕ್ಷಕರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಶಾಲೆ ಆರಂಭಿಸಿದರೆ ಮಕ್ಕಳೇ ಸೂಪರ್‌ ಸ್ಪ್ರೆಡರ್ ಆಗಿಬಿಟ್ಟರೆ‌.. ಮನೆ ಮನೆಗೂ ಕೊರೊನಾ ಹಬ್ಬಿದರೆ..ಮುಂದೇನು? ಎಂಬುದು ಈ ಕ್ಷಣದ ಆತಂಕ.

ಪ್ರಪಂಚದ ಇತರೆಡೆ ನೋಡುವುದಾದರೆ.. ಈಗಾಗ್ಲೇ ಶಾಲೆ ತೆರೆದಿದ್ದ ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ. ಅಮೆರಿಕದಲ್ಲಿ 5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ಇದೆ. ತೆಲಂಗಾ​ಣದಲ್ಲಿ ಶಾಲೆ ಆರಂಭಿಸಿದ ಕೆಲವೇ ದಿನಗಳಲ್ಲಿ 30ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ಬಡಿದಿದೆ. ರಾಜ್ಯದ್ಯಂತ ಶಾಲಾ ಕಾಲೇಜುಗಳಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲ ಮನೆಯಿಂದ ಹೊರ ಬಂದರೇ ಸೋಂಕು ಮತ್ತಷ್ಟು ವೇಗ ಪಡೆಯುತ್ತೆ ಎಂಬ ವಾದ ತಳ್ಳಿಹಾಕಲಾಗದು.

ನವೆಂಬರ್ ಅತ್ಯಂತದಲ್ಲಿ ಶಾಲೆ ರಿಓಪನ್ ಬಗ್ಗೆ ಯೋಚಿಸಿ ಅಂತಿದ್ದಾರೆ ತಜ್ಞರು
ಮಹಾಮಾರಿ ಸೋಂಕು, ಕಂಟ್ರೋಲ್ ಗೆ ಬರೋ ಮೊದಲೇ ಶಾಲಾ ಕಾಲೇಜು ಆರಂಭಿಸಿದರೆ ಅಪಾಯ ಕಟ್ಟಿಟ್ಟಬುತ್ತಿ. ರಾಜ್ಯದಲ್ಲಿ ಎರಡನೇ ಅಲೆ ಬರುವ ಸಾಧ್ಯತೆಯೂ ಇದೆ ಎಂಬುದು ತಜ್ಞರು ಸರ್ಕಾರಕ್ಕೆ ರವಾನೆಯಾಗಿರುವ ಸ್ಪಷ್ಟ ಎಚ್ಚರಿಕೆಯ ಗಂಟೆಯಾಗಿದೆ. ಇನ್ನು ತಜ್ಞರ ಪ್ರಕಾರ ನವೆಂಬರ್ ಅಂತ್ಯದಲ್ಲಿ ಶಾಲೆ ಓಪನ್ ಬಗ್ಗೆ ಯೋಚಿಸೊದು‌ ಸೂಕ್ತ ಎನ್ನಲಾಗಿದೆ.