ಹುಬ್ಬಳ್ಳಿ: 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳ ಮೃತದೇಹ ಪಕ್ಕದ ಮನೆಯ ನೀರಿನ ಟ್ಯಾಂಕ್ನಲ್ಲಿ ಪತ್ತೆಯಾಗಿರುವ ಘಟನೆ ಭರತನಗರದಲ್ಲಿ ನಡೆದಿದೆ. ಸದ್ಯ, ಆ ಮನೆಯ ನಿವಾಸಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ 5 ವರ್ಷದ ಶ್ರೇಯಾ ಎಂಬ ಬಾಲಕಿಯ ಮೃತದೇಹ ಇಂದು ಪತ್ತೆಯಾಗಿದೆ. ಮಗಳು ಕಾಣೆಯಾಗಿದ್ದಾಳೆ ಎಂದು ನಾಲ್ಕು ದಿನಗಳ ಹಿಂದೆ ಆಕೆ ತಂದೆ ಹನುಮಂತಪ್ಪ ಗಾಳಪ್ಪನವರ್ ಠಾಣೆಗೆ ದೂರು ನೀಡಿದ್ದರು. ಆದರೆ ಇಂದು ನೆರೆ ಮನೆಯ ನೀರಿನ ಟ್ಯಾಂಕ್ನಲ್ಲಿ ಶ್ರೇಯಾ ಶವವಾಗಿ ಪತ್ತೆಯಾಗಿದ್ದು ತೀವ್ರ ಅನುಮಾನಕ್ಕೆ ಎಡೆಮಾಡಿದೆ.
ಅಂದ ಹಾಗೆ, ಈ ಮನೆ ಕೂಡ ಹನುಮಂತಪ್ಪಗೇ ಸೇರಿದ್ದಾಗಿದ್ದು ನಿವಾಸವನ್ನು ಬಾಡಿಗೆಗೆ ಕೊಟ್ಟಿದ್ದರು. ಹೀಗಾಗಿ, ಬಾಡಿಗೆ ಮನೆಯಲ್ಲಿ ಇದ್ದವರನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೈಸ್ ರಸ್ತೆಯಲ್ಲಿ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೆ ಯತ್ನಿಸ್ತಿದ್ದ ಖದೀಮ ಲಾಕ್
Published On - 4:26 pm, Sat, 9 January 21