ಬೃಂದಾವನದಲ್ಲಿ ಗೌಡ ಸಂಪ್ರದಾಯದಂತೆ ಇಂದು ಮಧ್ಯಾಹ್ನ ಚಿರು ಸಮಾಧಿ

|

Updated on: Jun 08, 2020 | 2:16 PM

ಬೆಂಗಳೂರು: ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ(39) ಚಂದನವನವನ್ನ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ನಿನ್ನೆ ಈ ವಿಷಯ ತಿಳಿಯುತ್ತಿದ್ದಂತೆ ಮನೆಯ ಹಿರಿಯರಂತಿರುವ ಅರ್ಜುನ್ ಸರ್ಜಾ ತಮಿಳುನಾಡಿನ ವೇಲೂರಿನಿಂದ ಓಡೋಡಿ ಬಂದಿದ್ದಾರೆ. ಚಿರು ಮೃತ ದೇಹದ ಬಳಿ ಕೂತು ಬಿಕ್ಕಿ ಬಿಕ್ಕಿ ಅಂತಿದ್ದಾರೆ. ರಾತ್ರಿ ಮನೆ ಮಂದಿಯೆಲ್ಲ ಕೂತು ಅಂತ್ಯಕ್ರಿಯೆ ನಡೆಸುವ ಕುರಿತು ಮಾತನಾಡಿದ್ದಾರೆ. ನಂತರ ಗೌಡ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದ್ದಾರೆ. ಇಂದು ಕನಕಪುರ ರಸ್ತೆಯ ನೆಲಗುಳಿ ಬಳಿಯಿರೋ ಧ್ರುವಾ ಸರ್ಜಾ ಫಾರ್ಮ್​ಹೌಸ್​ಗೆ ಚಿರು […]

ಬೃಂದಾವನದಲ್ಲಿ ಗೌಡ ಸಂಪ್ರದಾಯದಂತೆ ಇಂದು ಮಧ್ಯಾಹ್ನ ಚಿರು ಸಮಾಧಿ
Follow us on

ಬೆಂಗಳೂರು: ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ(39) ಚಂದನವನವನ್ನ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ನಿನ್ನೆ ಈ ವಿಷಯ ತಿಳಿಯುತ್ತಿದ್ದಂತೆ ಮನೆಯ ಹಿರಿಯರಂತಿರುವ ಅರ್ಜುನ್ ಸರ್ಜಾ ತಮಿಳುನಾಡಿನ ವೇಲೂರಿನಿಂದ ಓಡೋಡಿ ಬಂದಿದ್ದಾರೆ. ಚಿರು ಮೃತ ದೇಹದ ಬಳಿ ಕೂತು ಬಿಕ್ಕಿ ಬಿಕ್ಕಿ ಅಂತಿದ್ದಾರೆ. ರಾತ್ರಿ ಮನೆ ಮಂದಿಯೆಲ್ಲ ಕೂತು ಅಂತ್ಯಕ್ರಿಯೆ ನಡೆಸುವ ಕುರಿತು ಮಾತನಾಡಿದ್ದಾರೆ. ನಂತರ ಗೌಡ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದ್ದಾರೆ.

ಇಂದು ಕನಕಪುರ ರಸ್ತೆಯ ನೆಲಗುಳಿ ಬಳಿಯಿರೋ ಧ್ರುವಾ ಸರ್ಜಾ ಫಾರ್ಮ್​ಹೌಸ್​ಗೆ ಚಿರು ಪಾರ್ಥಿವ ಶರೀರ ಕೊಂಡೊಯ್ಯಲಿದ್ದಾರೆ. ಸಹೋದರ ಚಿರಂಜೀವಿ ಸರ್ಜಾ ತನ್ನ ಜತೆ ಇರಬೇಕೆಂದು ಧ್ರುವ ಸರ್ಜಾ ಬೇಡಿಕೆಯಂತೆ ನಟ ಧ್ರುವ ಸರ್ಜಾ ಫಾರ್ಮ್​ಹೌಸ್​ನಲ್ಲೇ ಚಿರು ಅಂತ್ಯಕ್ರಿಯೆ ನಡೆಯಲಿದೆ. ಧ್ರುವಾ ಸರ್ಜಾ ಬೇಡಿಕೆಗೆ ಕುಟುಂಬ ಕೂಡ ಸಮ್ಮತಿ ಸೂಚಿಸಿದ್ದು ಇಂದು ಮಧ್ಯಾಹ್ನ 2ರಿಂದ 3 ಗಂಟೆ ವೇಳೆಗೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

ಅಂತ್ಯಕ್ರಿಯೆ ಸ್ಥಳದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್
ನೆಲಗುಳಿ ಗ್ರಾಮದ ಬಳಿಯ ಫಾರ್ಮ್ ಹೌಸ್​ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗೆ ಒಬ್ಬರು ಸಿಪಿಐ, ಐವರು ಪಿಎಸ್​ಐ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Published On - 9:16 am, Mon, 8 June 20