ಹಣ ಹಂಚುವಂತೆ ಸಭೆಯಲ್ಲಿ ಚರ್ಚೆ; ಚಿತ್ರದುರ್ಗ ಬಿಜೆಪಿ ಮುಖಂಡನ ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Apr 03, 2024 | 8:52 AM

ಚಿತ್ರದುರ್ಗ‌ ಜಿಲ್ಲೆ ಮೊಳಕಾಲ್ಮೂರು ಪಟ್ಟಣದಲ್ಲಿನ ಬಿಜೆಪಿ‌ ಕಚೇರಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಹಣ ಹಂಚಿಕೆ ಬಗ್ಗೆ ನಡೆದ ಚರ್ಚೆಯ ವಿಡಿಯೋ ವೈರಲ್ ಆಗಿದೆ. ಚುನಾವಣೆಯಲ್ಲಿ ವಿಪಕ್ಷಕ್ಕಿಂತ ನೂರು ರೂ. ಹೆಚ್ಚು ಹಂಚಬೇಕೆಂದು ಬಿಜೆಪಿ ಮುಖಂಡ ಬಹಿರಂಗವಾಗಿ ನೀಡಿದ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

ಚಿತ್ರದುರ್ಗ, ಏಪ್ರಿಲ್.03: ಲೋಕಸಭಾ ಚುನಾವಣೆಗೆ (Lok Sabha Election) ಅಖಾಡ ಸಿದ್ದವಾಗಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಆದರೆ ಚಿತ್ರದುರ್ಗ ಲೋಕಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಹಣದ ಹೊಳೆ ಹರಿಸಲು ಮುಖಂಡರು ಸಜ್ಜಾಗಿದ್ದಾರೆ. ಚಿತ್ರದುರ್ಗ‌ ಜಿಲ್ಲೆ ಮೊಳಕಾಲ್ಮೂರು ಪಟ್ಟಣದಲ್ಲಿನ ಬಿಜೆಪಿ‌ ಕಚೇರಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಹಣ ಹಂಚಿಕೆ ಬಗ್ಗೆ ನಡೆದ ಚರ್ಚೆಯ ವಿಡಿಯೋ ವೈರಲ್ ಆಗಿದೆ. ಚುನಾವಣೆಯಲ್ಲಿ ವಿಪಕ್ಷಕ್ಕಿಂತ ನೂರು ರೂ. ಹೆಚ್ಚು ಹಂಚಬೇಕೆಂದು ಬಿಜೆಪಿ ಮುಖಂಡ ಬಹಿರಂಗವಾಗಿ ನೀಡಿದ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

ಮೊಳಕಾಲ್ಮೂರು ಎಸ್ಟಿ ಮೋರ್ಚಾ ಅಧ್ಯಕ್ಷ ಜಿರಳ್ಳಿ ತಿಪ್ಪೇಸ್ವಾಮಿ ಅವರು ಮತದಾರರಿಗೆ ಹಣ ಹಂಚಿ ಎಂದು ಹೇಳಿರುವ ವಿಡಿಯೋ ಹೊರ ಬಿದ್ದಿದೆ. ಬಿಜೆಪಿ ಕಚೇರಿಯಲ್ಲಿ ನಡೆದ ನಾಮಪತ್ರ ಸಲ್ಲಿಕೆ, ಚುನಾವಣ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷ ಅಭ್ಯರ್ಥಿಗಿಂತ ನೂರು ರೂ.‌ಹೆಚ್ಚು ಹಣ ಹಂಚಬೇಕು. ವಿಪಕ್ಷ ಏನೂ ಕೊಡದಿದ್ದರೂ ನಾವು ನೂರು ರೂ. ಕೊಡಿಸೋಣ. ನಮ್ಮ ತಾಲೂಕಿನಲ್ಲಿ ದುಡ್ಡು ಬಿಟ್ಟರೆ ಬೇರೆ ಮಾನದಂಡವಿಲ್ಲ. ಮಂಡಲ ಅಧ್ಯಕ್ಷರು ಮುನ್ಸೂಚನೆ ಕೊಟ್ಟರೆ ಹಣದ ವ್ಯವಸ್ಥೆ ಮಾಡಿಸುವ. 500 ರೂ. ಇಂದ 600ರೂ. ವ್ಯವಸ್ಥೆ ಮಾಡುತ್ತಿದ್ದೆ ಎಂದು ಅಜ್ಜರು ಹೇಳಿದ್ದಾರೆ. 500 ರೂಪಾಯಿಗೆ ಗೆಲ್ತೀರಿ ಬಿಡಿ ಎಂದು ಮಂಡಲ‌ ಅಧ್ಯಕ್ಷ ಹೇಳಿದ್ದಾರೆಂದಿರುವ ವಿಡಿಯೋ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ