15ಲಕ್ಷ ರೂ. ಬಗ್ಗೆ ಮೋದಿ ಹೇಳಿಕೆ ನೀಡಿದ್ದರೆ ಸಾಕ್ಷಿ ಕೊಡಿ ಕ್ಷಮೆ ಕೇಳುತ್ತೇನೆ ಎಂದ ಕೇಂದ್ರ ಸಚಿವ‌ ನಾರಾಯಣಸ್ವಾಮಿ

|

Updated on: Jun 02, 2023 | 1:53 PM

‘15ಲಕ್ಷ ರೂ. ಬಗ್ಗೆ ಮೋದಿ ಹೇಳಿಕೆ ನೀಡಿದ್ದರೆ ಸಾಕ್ಷಿ ಕೊಡಿ ಕ್ಷಮೆ ಕೇಳುತ್ತೇನೆ ಎಂದು ಕೇಂದ್ರ ಸಚಿವ‌ ನಾರಾಯಣಸ್ವಾಮಿ (A Narayanaswamy) ಹೇಳಿದರು. ನಗರದಲ್ಲಿ ಮಾದ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಜನರನ್ನು ಬಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ನಡೆದಿದೆ ಎಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ಟೀಕಿಸಿದ್ದಾರೆ.

15ಲಕ್ಷ ರೂ. ಬಗ್ಗೆ ಮೋದಿ ಹೇಳಿಕೆ ನೀಡಿದ್ದರೆ ಸಾಕ್ಷಿ ಕೊಡಿ ಕ್ಷಮೆ ಕೇಳುತ್ತೇನೆ ಎಂದ ಕೇಂದ್ರ ಸಚಿವ‌ ನಾರಾಯಣಸ್ವಾಮಿ
ಎ.ನಾರಾಯಣಸ್ವಾಮಿ
Follow us on

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್(Congress)​ ಗ್ಯಾರಂಟಿ ಕುರಿತು ಪರ ವಿರೋಧಿ ಚರ್ಚೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ 15 ಲಕ್ಷ ರೂ. ಹಾಗೂ ಗ್ಯಾರಂಟಿ ವಿಚಾರವಾಗಿ ವಾಕ್​ಸಮರ ಶುರುವಾಗಿದೆ. ಇದರ ಬೆನ್ನಲ್ಲೆ ಇದೀಗ ‘15ಲಕ್ಷ ರೂ. ಬಗ್ಗೆ ಮೋದಿ ಹೇಳಿಕೆ ನೀಡಿದ್ದರೆ ಸಾಕ್ಷಿ ಕೊಡಿ ಕ್ಷಮೆ ಕೇಳುತ್ತೇನೆ ಎಂದು ಕೇಂದ್ರ ಸಚಿವ‌ ನಾರಾಯಣಸ್ವಾಮಿ (A Narayanaswamy) ಹೇಳಿದರು. ನಗರದಲ್ಲಿ ಮಾದ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಜನರನ್ನು ಬಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ನಡೆದಿದೆ ಎಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ಟೀಕಿಸಿದ್ದಾರೆ. ‘ಜನರನ್ನು ಬಿಕ್ಷಾಟನೆ ಸರದಿಗೆ ನಿಲ್ಲಿಸಿ ಕಾಂಗ್ರೆಸ್ ಅಧಿಕಾರ ಪಡೆಯುವ ಷಡ್ಯಂತ್ರ ಮಾಡಿತ್ತು. ಸ್ವತಂತ್ರ್ಯ ಹೋರಾಟಗಾರರ ಕನಸು ನುಚ್ಚುನೂರು ಮಾಡಿ, ಕಾಂಗ್ರೆಸ್ ಸಿದ್ಧಾಂತ ಗಾಳಿಗೆ ತೂರಿ ಮತದಾರರಿಗೆ ಆಮಿಷವೊಡ್ಡಿ ಅಧಿಕಾರ ಚುಕ್ಕಾಣಿ ಹಿಡಿದುಕೊಂಡಿದ್ದಾರೆ. ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದೆ. ಸಿದ್ಧಾಂತದಿಂದ ಗೆದ್ದಿದ್ದೀವಿ ಎಂದು ಹೇಳುವ ಎದೆಗಾರಿಕೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದಿದ್ದಾರೆ.

ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಗೆಲುವು ಸಾಧಿಸಿದೆ

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಕಾರ್ಡ್ ಮೂಲಕ ಗೆಲುವು ಸಾಧಿಸಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕಳೆದ 15ದಿನಗಳಿಂದ ಗ್ಯಾರಂಟಿ ಕಾರ್ಡ್​ಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು. ಇದೇ ವೇಳೆ ಬಿಜೆಪಿಯಿಂದ ಪ್ರತಿ ವ್ಯಕ್ತಿಯ ಅಕೌಂಟಿಗೆ 15ಲಕ್ಷ ನೀಡುವ ಭರವಸೆ ವಿಚಾರ ‘ಸಿದ್ಧರಾಮಯ್ಯ, ಡಿಕೆಶಿ’ಗ್ಯಾರಂಟಿ ಹೇಳಿಕೆಗಳು ಎಲ್ಲರ ಬಳಿ ಇವೆ. 15ಲಕ್ಷದ ಬಗ್ಗೆ ಮೋದಿ ಹೇಳಿಕೆ ನೀಡಿದ್ದರೆ ನನಗೆ ಕೊಡಿ, ಕ್ಷಮೆ ಕೇಳುತ್ತೇನೆ. ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆಂದು ಸವಾಲು ಹಾಕಿದ್ದಾರೆ. ಗ್ಯಾರಂಟಿ ಕಾರ್ಡ್​ ವಿಚಾರ ಐದು ವರ್ಷದಲ್ಲಿ ಎಂಬ ಚಿಂತನೆ ನಡೆಯುತ್ತಿದೆ. ರಾಜ್ಯದ ಸಚಿವರಿಗೆ ಪ್ರಕೃತಿ ವಿಕೋಪದ ಬಗ್ಗೆ ಗಮನಹರಿಸಲು ಸಮಯವಿಲ್ಲ ಎಂದು ಟೀಕಿಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ