ಚಿತ್ರದುರ್ಗ ಬಸವ ಪುತ್ಥಳಿ ನಿರ್ಮಾಣ ಹಣ ದುರುಪಯೋಗ: ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

| Updated By: ವಿವೇಕ ಬಿರಾದಾರ

Updated on: Dec 13, 2023 | 8:28 AM

ಪೋಕ್ಸೋ ಪ್ರಕರಣದಲ್ಲಿ ಸಿಲುಕಿ ಜಾಮೀನ ಮೇಲೆ ಹೊರಬಂದಿರುವ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬಸವ ಪುತ್ಥಳಿ ನಿರ್ಮಾಣದ ಹಣ ದುರುಪಯೋಗ ಮಾಡಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿಮಿತಿ ರಚಿಸಿದ್ದಾರೆ.

ಚಿತ್ರದುರ್ಗ ಬಸವ ಪುತ್ಥಳಿ ನಿರ್ಮಾಣ ಹಣ ದುರುಪಯೋಗ: ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ
ಮುರುಘಾಮಠ
Follow us on

ಚಿತ್ರದುರ್ಗ, ಡಿಸೆಂಬರ್​​ 13: ಬಸವ ಪುತ್ಥಳಿ (Basava Statue) ನಿರ್ಮಾಣದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿ ದಿವ್ಯಪ್ರಭು ನಾಲ್ವರು ಅಧಿಕಾರಿಗಳು ಒಳಗೊಂಡ ಸಮಿತಿ‌ ರಚಿಸಿ ಆದೇಶ ಹೊರಡಿಸಿದ್ದಾರೆ. 15 ದಿನದೊಳಗೆ ತನಿಖಾ ವರದಿ ನೀಡುವಂತೆ ಸಮಿತಿಗೆ ಸೂಚಿಸಿದ್ದಾರೆ.

ಮಠದ ಹಿಂಭಾಗ 28 ಕೋಟಿ 20 ಲಕ್ಷ ವೆಚ್ಚದಲ್ಲಿ ಬಸವ ಪುತ್ಥಳಿ ನಿರ್ಮಾಣ ಮಾಡಲು ಮುರುಘಾಮಠ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರದಿಂದ ಈವರೆಗೆ 35ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 24 ಕೋಟಿ 50ಲಕ್ಷ ರೂ. ಈವರೆಗೆ ಹಣ ಖರ್ಚಾಗಿದೆ ಎಂದು ಮಠ ಲೆಕ್ಕ ತೋರಿಸಿದೆ. ಟೆಂಡರ್ ಕರೆಯದೆ 4 ಕೋಟಿ ಮೌಲ್ಯದ ಕಬ್ಬಿಣ, ಸಿಮೆಂಟ್ ಖರೀದಿಸಿದ್ದಾರೆ ಹಾಗೂ ಪ್ರತಿಮೆ ನಿರ್ಮಾಣಕ್ಕೆ ನಿಯಮ ಮೀರಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮುರುಘಾಶ್ರೀ ಕೈಗೆ ಮರಳಿದ ಮುರುಘಾಮಠದ ಅಧಿಕಾರ

ಹೀಗಾಗಿ ಮಾಜಿ ಸಚಿವ ಹೆಚ್.ಏಕಾಂತಯ್ಯ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಮೂಲಕ ಮುರುಘಾಶ್ರೀಗೆ‌ ಮತ್ತೊಂದು ಸಂಕಷ್ಟ ಎದುರಾಗಲಿದೆಯಾ? ಎಂಬ ಪ್ರಶ್ನೆ ಉದ್ಭವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ