ಶಕ್ತಿ ಯೋಜನೆ: ಅದರಿಂದ ನಷ್ಟೇವೇನೂ ಇಲ್ಲ; ಬದಲಿಗೆ ನಾವೂ ಗರ್ಭಿಣಿಯರಿಗೆ ಉಚಿತ ಸೇವೆ ಕೊಡ್ತೀವಿ ಅಂತಿದ್ದಾರೆ ಚಿತ್ರದುರ್ಗದ ಆಟೋ ಚಾಲಕರು
Chitradurga auto drivers: ಚಿತ್ರದುರ್ಗದಲ್ಲಿ ಸ್ನೇಹಜೀವಿ ಆಟೋ ಚಾಲಕರ ಸಂಘವು ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ ಕಲ್ಪಿಸುವ ಸಂಕಲ್ಪ ಮಾಡಿದೆ. ಬಾಣಂತಿಯರಿಗೆ, ಅನಾರೋಗ್ಯ ಪೀಡಿತರಿಗೆ ಮತ್ತು ಅಪಘಾತಗಳ ಸಂದರ್ಭದಲ್ಲೂ ಸಹ ಆಟೋ ಚಾಲಕರು ಸೇವಾ ಕಾರ್ಯ ಕೈಗೊಳ್ಳುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
Karnataka Shakti Scheme: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಪರಿಣಾಮ ಖಾಸಗಿ ವಾಹನಗಳ ಆದಾಯಕ್ಕೆ ಕತ್ತರಿ ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದ್ರೆ, ಇದೇ ವೇಳೆ ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಆಟೋ ಚಾಲಕರು (Chitradurga auto drivers) ಗರ್ಭಿಣಿಯರಿಗೆ ಉಚಿತ ಸೇವೆ ಕಲ್ಪಿಸಲು ಸಂಕಲ್ಪ ಮಾಡಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಗರ್ಭಿಣಿಯರಿಗೆ (pregnant) ಉಚಿತ ಆಟೋ ಸರ್ವೀಸ್ ಗೆ ಆಟೋವಾಲಾಗಳ ಸಂಕಲ್ಪ. ಗರ್ಭಿಣಿಯರಿಗೆ ಉಚಿತ ಪ್ರಯಾಣ ಕಲ್ಪಿಸಿದ ಆಟೋಗಳಿಗೆ ಜಿಲ್ಲಾಧಿಕಾರಿ ಚಾಲನೆ. ಆಟೋ ಚಾಲಕರಿಗೆ ಸಸಿ ನೀಡಿ ಶಹಬ್ಬಾಸ್ ಗಿರಿ ಸೂಚಿಸಿದ ಡಿಸಿ ದಿವ್ಯಪ್ರಭು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಡಿಸಿ ಕಚೇರಿ ಬಳಿ.
ಹೌದು, ಕೋಟೆನಾಡಿನಲ್ಲಿ ಸ್ನೇಹಜೀವಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘವು ಗರ್ಭಿಣಿಯರಿಗೆ ಉಚಿತ ಸೇವೆ ಕಲ್ಪಿಸುವ ಸಂಕಲ್ಪ ಮಾಡಿದೆ. ನೂರಕ್ಕೂ ಹೆಚ್ಚು ಆಟೋ ಚಾಲಕರು ಆಟೋ ಮೇಲೆ ಈ ಬಗ್ಗೆ ಬರಹ ಬರೆಸಿದ್ದು ಸೇವೆಗೆ ಸಂಕಲ್ಪ ಮಾಡಿದ್ದಾರೆ ಎಂದು ಆಟೋ ಚಾಲಕರಾದ ವೀರೇಶ ಮಾಹಿತಿ ನೀಡಿದ್ದಾರೆ.
ಇನ್ನು ನಗರದ ಒನಕೆ ಓಬವ್ವ ವೃತ್ತದ ಬಳಿಯ ಜಿಲ್ಲಾಧಿಕಾರಿ ಕಚೇರಿ ಬಳಿ ನೂರಕ್ಕೂ ಹೆಚ್ಚು ಆಟೋಗಳು ಜಮಾಯಿಸಿದ್ದವು. ಡಿಸಿ ದಿವ್ಯಪ್ರಭು ಅವರು ಖುಷಿಯಿಂದಲೇ ಆಟೋಗಳ ಉಚಿತ ಸೇವೆಗೆ ಚಾಲನೆ ನೀಡಿದರು. ಆಟೋ ಚಾಲಕರ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಇದೇ ರೀತಿ ಸೇವಾ ಕಾರ್ಯ ಮುಂದುವರೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಸ್ನೇಹಜೀವಿ ಆಟೋ ಚಾಲಕರ ಸಂಘ ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ ಕಲ್ಪಿಸುವ ಸಂಕಲ್ಪ ಮಾಡಿದೆ. ಅಂತೆಯೇ ಈಗಾಗಲೇ ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ ಆರಂಭಿಸಿದೆ. ಬಾಣಂತಿಯರಿಗೆ, ಅನಾರೋಗ್ಯ ಪೀಡಿತರಿಗೆ ಮತ್ತು ಅಪಘಾತಗಳ ಸಂದರ್ಭದಲ್ಲೂ ಸಹ ಆಟೋ ಚಾಲಕರು ಸೇವಾ ಕಾರ್ಯ ಕೈಗೊಳ್ಳುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Sat, 22 July 23