ಚಿತ್ರದುರ್ಗದಲ್ಲಿ ನ್ಯಾಯಬೆಲೆ ಅಂಗಡಿ ಮಹಿಳೆಗೆ ಬ್ಲ್ಯಾಕ್ಮೇಲ್ ಪ್ರಕರಣ! ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅರೆಸ್ಟ್
ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಮಹಿಳೆಯೊಬ್ಬರಿಗೆ ಬ್ಲ್ಯಾಕ್ಮೇಲ್ ಮಾಡಿರುವ ಆರೋಪ ಕೇಳಿಬಂದಿತ್ತು. ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆಯ ನ್ಯಾಯಬೆಲೆ ಅಂಗಡಿ ಮಹಿಳೆ ರಂಗಮ್ಮಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು.
ಚಿತ್ರದುರ್ಗ: ನ್ಯಾಯಬೆಲೆ ಅಂಗಡಿ ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡಿದ ಪ್ರಕರಕ್ಕೆ ಸಂಬಂಧಿಸಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅವಿನಾಶ್ ಬಂಧನಕ್ಕೊಳಗಾಗಿದ್ದಾರೆ. ಬಡಾವಣೆ ಠಾಣೆ ಪೊಲೀಸರು ಆರೋಪಿ ಅವಿನಾಶ್ನ ಬಂಧಿಸಿದ್ದು, ಭೀಮ್ ಆರ್ಮಿ ಉಪಾಧ್ಯಕ್ಷ ಪ್ರದೀಪ್ ಪರಾರಿಯಾಗಿದ್ದಾರೆ. ನ್ಯಾಯಬೆಲೆ ಅಂಗಡಿ ಮಹಿಳೆಗೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂಬ ದೂರಿನನ್ವಯ ಅರೆಸ್ಟ್ ಮಾಡಲಾಗಿದೆ.
ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಮಹಿಳೆಯೊಬ್ಬರಿಗೆ ಬ್ಲ್ಯಾಕ್ಮೇಲ್ ಮಾಡಿರುವ ಆರೋಪ ಕೇಳಿಬಂದಿತ್ತು. ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆಯ ನ್ಯಾಯಬೆಲೆ ಅಂಗಡಿ ಮಹಿಳೆ ರಂಗಮ್ಮಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಮಹಿಳೆ ಗ್ರಾಹಕರಿಂದ ತಲಾ 10 ರೂಪಾಯಿ ಪಡೆದ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
10 ರೂಪಾಯಿ ಹಣ ಪಡೆದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ ಆರೋಪಿ 50 ಸಾವಿರಕ್ಕೆ ಬೇಡಿಕೆ ಇಟ್ಟು, 15,000 ರೂ. ಹಣ ಪಡೆದಿದ್ದಾರೆ. ಅವಿನಾಶ್ ಮತ್ತು ಪ್ರದೀಪ್ ವಿರುದ್ಧ ರಂಗಮ್ಮ ಬಡಾವಣೆ ಠಾಣೆಗೆ ದೂರು ನೀಡಿದ್ದರು. ಸದ್ಯ ಆರೋಪಿ ಅವಿನಾಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅವಿನಾಶ್ ಹೇಳಿದ್ದೇನು? ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ಅವಿನಾಶ್ ಪ್ರತಿಕ್ರಿಯೆ ನೀಡಿ ಭೀಮ್ ಆರ್ಮಿ ಹಾಗೂ ನನ್ನ ವಿರುದ್ಧದ ಆರೋಪ ಸುಳ್ಳು. ನ್ಯಾಯ ಬೆಲೆ ಅಂಗಡಿಯ ರಂಗಮ್ಮ ಹಣ ಪಡೆದದ್ದು ಒಪ್ಪಿಕೊಂಡಿದ್ದಾರೆ. ಚೀಲ ನೀಡಲು 10ರೂ. ಪಡೆದಿದ್ದಾಗಿ ಹೇಳಿದ್ದು ಭ್ರಷ್ಟಾಚಾರ ಒಪ್ಪಿಕೊಂಡಿದ್ದಾರೆ. ನಮ್ಮ ವಿರುದ್ಧ ಷಡ್ಯಂತ್ರ ಮಾಡಿ ನಕಲಿ ಫೇಸ್ಬುಕ್ ಖಾತೆ ಮೂಲಕ ಫೇಕ್ ವಿಡಿಯೋ ವೈರಲ್ ಮಾಡಿದ್ದಾರೆ. ಅಪಪ್ರಚಾರ ಮಾಡಿದವರ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವೆ. ಪೊಲೀಸ್ ತನಿಖೆ ಮೂಲಕ ಸತ್ಯಾಂಶ ಹೊರ ಬರಲಿ ಅಂತ ಹೇಳಿದ್ದರು.
ಇದನ್ನೂ ಓದಿ
ಕೊರೊನಾ ಕಡಿಮೆಯಾಗುತ್ತಿದ್ದಂತೆ ಮಧುಮೇಹಿಗಳ ಸಂಖ್ಯೆ ಹೆಚ್ಚಳ; 27,990 ಜನರಲ್ಲಿ ಮಧುಮೇಹ ಪತ್ತೆ