
ಚಿತ್ರದುರ್ಗ, ಸೆಪ್ಟೆಂಬರ್ 03: ಭವಿಷ್ಯ ಹೇಳುವ ನೆಪದಲ್ಲಿ ರೈತನ ಉಂಗುರ (ring) ಕದ್ದ ಮಧ್ಯಪ್ರದೇಶ ಮೂಲದ ಐವರು ಸಾಧು ವೇಷಧಾರಿಗಳನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ನಡೆದಿದೆ. ಕಮಲನಾಥ್, ಸಂತೋಷ್ ನಾಥ್, ಚೈನ್ ನಾಥ್ ಚೌಹಾಣ್, ಶ್ರವಣ್ ಜೋಗಿ, ಚಾಲಕ ಟೋನಿಯಾ ಬಂಧಿತರು.
ರಾಷ್ಟ್ರೀಯ ಹೆದ್ದಾರಿ 50ರ ಬಳಿ ರೈತ ರವಿಕುಮಾರ್ ನಿಂತಿದ್ದರು. ಕಾರಿನಲ್ಲಿ ಕೂರಿಸಿ ಭವಿಷ್ಯ ಹೇಳುವ ನೆಪದಲ್ಲಿ ರವಿಕುಮಾರ್ ಕೈಯಲ್ಲಿದ್ದ ಉಂಗುರ ಕಸಿದು ಬಾಯಲ್ಲಿ ಹಾಕಿಕೊಂಡಿದ್ದರು. ನಂತರ ರೈತ ರವಿಕುಮಾರ್ನನ್ನು ಕಾರಿನಿಂದ ಇಳಿಸಿ ಐವರು ಪರಾರಿ ಆಗಿದ್ದರು.
ಇದನ್ನೂ ಓದಿ: ಸಿಬಿಐ ನಿವೃತ್ತ ಎಸ್ಪಿಯ 97ಲಕ್ಷ ರೂ. ಸಮೇತ ಬಾಡಿಗೆ ಕಾರು ಚಾಲಕ ಪರಾರಿ: ಕೆಲವೇ ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂಧನ
ತುರುವನೂರು ಠಾಣೆ ಪೊಲೀಸರಿಗೆ ರವಿಕುಮಾರ್ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿ ಸಾಧು ವೇಷದಲ್ಲಿರುವ ನಾಲ್ವರು ಸೇರಿದಂತೆ ಓರ್ವ ಚಾಲಕನನ್ನು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಲಿದ್ದಾರೆ.
ಮನೆಯಲ್ಲಿ ಮಾಲಿಕರು ಇದ್ದರೂ ಹಣ ಚಿನ್ನಾಭರಣಗಳ ಕಳ್ಳತನ ಮಾಡಿರುವಂತಹ ಘಟನೆ ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ. ಉತ್ತಮ್ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಪಿಸ್ಟಲ್ ಹಿಡಿದು ಚಿನ್ನದಂಗಡಿಗೆ ನುಗ್ಗಿದ ಕಳ್ಳರು ಮಾಲೀಕ ಕಿರುಚಿದೊಡೆ ಕಾಲಿಗೆ ಬುದ್ಧಿ ಹೇಳಿದರು!
ದಂಪತಿ ಮನೆಯ ಮೇಲಿನ ರೂಮ್ನಲ್ಲಿದ್ದರು. ಉತ್ತಮ್ ತಾಯಿ ಬಾಗಿಲು ಮುಚ್ಚದೆ ಸ್ನಾನದ ಮನೆಗೆ ಹೋಗಿದ್ದರು. ಒಳ ಬಂದ ಕಳ್ಳ, ಮನೆಯ ಬಿರುವಿನಲ್ಲಿದ್ದ 85 ಸಾವಿರ ರೂ. ನಗದು ಸೇರಿ 25 ಗ್ರಾಂ ಚಿನ್ನಾಭರಣ ಕದ್ದು ಎಸ್ಕೆಪ್ ಆಗಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.