3ಡಿ ಲೇಸರ್ ಶೋ ಮೂಲಕ ಇತಿಹಾಸ ಅನಾವರಣ; ಆಧುನಿಕ ಸ್ಪರ್ಶದೊಂದಿಗೆ ಕಂಗೊಳಿಸುತಿದೆ ಏಳು ಸುತ್ತಿನ ಕೋಟೆಯ ವೈಭವ

| Updated By: ಆಯೇಷಾ ಬಾನು

Updated on: Feb 08, 2022 | 1:12 PM

ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ಲೇಸರ್ ಎಫೆಕ್ಟ್‌ ಬಳಸಿ ಮದಕರಿ ನಾಯಕ, ಒನಕೆ ಓಬವ್ವರನ್ನು ಮರು ಸೃಷ್ಟಿ ಮಾಡಲಾಗಿದೆ. ವಿದ್ಯುತ್ ದೀಪಗಳಿಂದ ಕಲ್ಲಿನ ಕೋಟೆ ಝಗಮಗಿಸುತ್ತಿದೆ. ಇದರ ಮಧ್ಯೆ ಲೇಸರ್ ಚಿತ್ರದ ಮೂಲಕ ತೆರೆ ಮೇಲೆ ದುರ್ಗದ ಇತಿಹಾಸ ರಾರಾಜಿಸುತ್ತಿದೆ.

3ಡಿ ಲೇಸರ್ ಶೋ ಮೂಲಕ ಇತಿಹಾಸ ಅನಾವರಣ; ಆಧುನಿಕ ಸ್ಪರ್ಶದೊಂದಿಗೆ ಕಂಗೊಳಿಸುತಿದೆ ಏಳು ಸುತ್ತಿನ ಕೋಟೆಯ ವೈಭವ
ಚಿತ್ರದುರ್ಗದ ಕಲ್ಲಿನ ಕೋಟೆ
Follow us on

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗವೆಂದು ಪ್ರಖ್ಯಾತಿ ಪಡೆಯಲು ಕಾರಣವಾದ ಏಳುಸುತ್ತಿನ ಕೋಟೆಯ(Chitradurga Fort) ಅಭಿವೃದ್ಧಿಗೆ ಅಂತೂ ಇಂತೂ ಮುಹೂರ್ತ ಕೂಡಿ ಬಂದಿದೆ. ದುರ್ಗದ ಹುಲಿ ಮದಕರಿ ನಾಯಕ(Madakari Nayaka) ಆಳ್ವಿಕೆ ಮಾಡಿದ ದುರ್ಗದ ಕೋಟೆಗೆ ವಿದ್ಯುತ್ ಅಲಂಕಾರ, ಲೇಸರ ವ್ಯವಸ್ಥೆ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಾಲ ಸನ್ನಿಹಿತವಾಗಿದೆ. ಚಿತ್ರದುರ್ಗದ ಕೋಟೆಯಲ್ಲೀಗ ಹೊಸ ಯುಗ ಅನಾವರಣಗೊಂಡಿದೆ.

ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ಲೇಸರ್ ಎಫೆಕ್ಟ್‌ ಬಳಸಿ ಮದಕರಿ ನಾಯಕ, ಒನಕೆ ಓಬವ್ವರನ್ನು ಮರು ಸೃಷ್ಟಿ ಮಾಡಲಾಗಿದೆ. ವಿದ್ಯುತ್ ದೀಪಗಳಿಂದ ಕಲ್ಲಿನ ಕೋಟೆ ಝಗಮಗಿಸುತ್ತಿದೆ. ಇದರ ಮಧ್ಯೆ ಲೇಸರ್ ಚಿತ್ರದ ಮೂಲಕ ತೆರೆ ಮೇಲೆ ದುರ್ಗದ ಇತಿಹಾಸ ರಾರಾಜಿಸುತ್ತಿದೆ. ಒಂದೆರಡು ತಿಂಗಳಲ್ಲಿ ಈ ಪ್ಲ್ಯಾನ್ ಅಂತಿಮಗೊಳ್ಳಲಿದ್ದು, ದುರ್ಗದ ಕೋಟೆ ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲಿದೆ. ಅಂದಹಾಗೆ ಇಂತಹವೊಂದು ಐತಿಹಾಸಿಕ ಸ್ಥಳ ಸುಮಾರು ವರ್ಷಗಳಿಂದ ಅಭಿವೃದ್ಧಿಯಾಗದೇ ನೆನೆಗುದಿಗೆ ಬಿದ್ದಿತ್ತು. ಇಲ್ಲಿ ಕುಡಿಯಲು ನೀರಿಲ್ಲ. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಪ್ರವಾಸಿಗರನ್ನ ಸೆಳೆಯೋ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿತ್ತು. ಇದನ್ನ ತಿಳಿದ ಕೇಂದ್ರ ಸರ್ಕಾರ ಚಿತ್ರದುರ್ಗದ ಕೋಟೆಗೆ ಆಧುನಿಕ ಸ್ಪರ್ಶ ನೀಡಲು ನಿರ್ಧರಿಸಿತ್ತು. ಅಂದರಂತೆ ಚಿತ್ರುದುರ್ಗದ ಸಂಸದ ಹಾಗೂ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಕೋಟೆ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಸುಮಾರು 25-30 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟೆಗೆ ಆಧುನಿಕ ಸ್ಪರ್ಶ ನೀಡಲಾಗ್ತಿದೆ.

ಲೇಸರ್ ಎಫೆಕ್ಟ್‌ ಬಳಸಿ ಮದಕರಿ ನಾಯಕ, ಒನಕೆ ಓಬವ್ವರನ್ನು ಮರು ಸೃಷ್ಟಿ

ಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ನೇತೃತ್ವದ ಟೀಂ 3ಡಿ ಹಾಲೋಗ್ರಾಮದ ಲೇಸರ್ ಶೋ, ಲೈಟ್ ಅಂಡ್ ಸೌಂಡ್ ಶೋವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದೆ. ಸದ್ಯಕ್ಕೆ ಲೇಸರ್ ಎಫೆಕ್ಟ್‌ನಲ್ಲಿ ಮದಕರಿ ನಾಯಕ, ಒನಕೆ ಓಬವ್ವ, ದುರ್ಗದ ಇತಿಹಾಸ ಪರಿಚಯವಾಗಿದ್ದು, ಒಂದೆರಡು ತಿಂಗಳಲ್ಲಿ ಈ ಪ್ಲ್ಯಾನ್ ಅಂತಿಮಗೊಳ್ಳಲಿದ್ದು, ದುರ್ಗದ ಕೋಟೆ ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲಿದೆ. ಒಟ್ನಲ್ಲಿ ಕೋಟೆನಾಡು ಚಿತ್ರದುರ್ಗದ ಏಳುಸುತ್ತಿನ ಕೋಟೆ ಇನ್ನು ಮುಂದೆ ಆಧುನಿಕ ಸ್ಪರ್ಶ ಪಡೆಯಲಿದೆ. ಈ ಮೂಲಕ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಮತ್ತಷ್ಟು ಹೊಸದಾಗಿ ಕಣ್ಮನ ಸೆಳೆಯಲಿದೆ.

ವರದಿ: ಬಸವರಾಜ ಮುದನೂರ್, Tv9 ಚಿತ್ರದುರ್ಗ

ಚಿತ್ರದುರ್ಗದ ಕಲ್ಲಿನ ಕೋಟೆ

ಚಿತ್ರದುರ್ಗದ ಕಲ್ಲಿನ ಕೋಟೆ

ಇದನ್ನೂ ಓದಿ: ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ, ಬಾಲ್ಯವಿವಾಹ ಧಿಕ್ಕರಿಸಿ ಪ್ರೇಮಿಯ ಕೈಹಿಡಿದ ಯುವತಿ

Published On - 1:03 pm, Tue, 8 February 22