ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ, ಬಾಲ್ಯವಿವಾಹ ಧಿಕ್ಕರಿಸಿ ಪ್ರೇಮಿಯ ಕೈಹಿಡಿದ ಯುವತಿ

ಬಾಗಲಕೋಟೆ: ಆ ಬಾಲಕಿ ದೂರದ ತುಮಕೂರು ಜಿಲ್ಲೆಯವಳು. ಇನ್ನು ಯುವಕ ಇದೇ ಬಾಗಲಕೋಟೆ ನಗರದವನು. ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ಮಧ್ಯೆ ಬಾಲಕಿಗೆ ಬಾಲ್ಯ ವಿವಾಹ ನಿಕ್ಕಿಯಾಗಿದೆ. ಇದರಿಂದ ಬಾಲಕಿಗೆ ನೆಲ ಕುಸಿದಂತಾಗಿ ಸೀದಾ ಬಾಗಲಕೋಟೆಗೆ ಬಂದು ಯುವಕನ ಕೈಹಿಡಿದಿದ್ದಾಳೆ. ಅದರೊಂದಿಗೆ ಬಾಲ್ಯ ವಿವಾಹವನ್ನು ಧಿಕ್ಕರಿಸಿದ್ದಾಳೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಐಶ್ವರ್ಯಾ ಬಾಗಲಕೋಟೆಯ ಆಕಾಶ್‌ನನ್ನು ಮದುವೆಯಾಗಿದ್ದಾಳೆ. ಮನೆಯವರು ತನಗೆ ಬಾಲ್ಯ ವಿವಾಹ ನಿಗದಿಪಡಿಸಿದ್ದರೂ, ತನಗೆ 18 ವರ್ಷ ತುಂಬುವುದನ್ನೇ ಕಾದಿದ್ದ ಐಶ್ವರ್ಯಾ ಇದೀಗ ಆಕಾಶ್ […]

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ, ಬಾಲ್ಯವಿವಾಹ ಧಿಕ್ಕರಿಸಿ ಪ್ರೇಮಿಯ ಕೈಹಿಡಿದ ಯುವತಿ
Follow us
ಸಾಧು ಶ್ರೀನಾಥ್​
|

Updated on:Oct 07, 2020 | 11:36 AM

ಬಾಗಲಕೋಟೆ: ಆ ಬಾಲಕಿ ದೂರದ ತುಮಕೂರು ಜಿಲ್ಲೆಯವಳು. ಇನ್ನು ಯುವಕ ಇದೇ ಬಾಗಲಕೋಟೆ ನಗರದವನು. ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ಮಧ್ಯೆ ಬಾಲಕಿಗೆ ಬಾಲ್ಯ ವಿವಾಹ ನಿಕ್ಕಿಯಾಗಿದೆ. ಇದರಿಂದ ಬಾಲಕಿಗೆ ನೆಲ ಕುಸಿದಂತಾಗಿ ಸೀದಾ ಬಾಗಲಕೋಟೆಗೆ ಬಂದು ಯುವಕನ ಕೈಹಿಡಿದಿದ್ದಾಳೆ. ಅದರೊಂದಿಗೆ ಬಾಲ್ಯ ವಿವಾಹವನ್ನು ಧಿಕ್ಕರಿಸಿದ್ದಾಳೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಐಶ್ವರ್ಯಾ ಬಾಗಲಕೋಟೆಯ ಆಕಾಶ್‌ನನ್ನು ಮದುವೆಯಾಗಿದ್ದಾಳೆ. ಮನೆಯವರು ತನಗೆ ಬಾಲ್ಯ ವಿವಾಹ ನಿಗದಿಪಡಿಸಿದ್ದರೂ, ತನಗೆ 18 ವರ್ಷ ತುಂಬುವುದನ್ನೇ ಕಾದಿದ್ದ ಐಶ್ವರ್ಯಾ ಇದೀಗ ಆಕಾಶ್ ಜೊತೆ ಕಾನೂನುರೀತ್ಯ ಮದುವೆಯಾಗಿದ್ದಾಳೆ.

ಎಸ್ಪಿ ಕಚೇರಿ ಮುಂಭಾಗ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯಾ ತಂದೆ-ಸಹೋದರ ಇನ್ನು ವಿಷಯ ತಿಳಿದ ಐಶ್ವರ್ಯಾ ತಂದೆ, ಮನೆಬಿಟ್ಟು ಬಂದ ಮಗಳನ್ನು ಕರೆದೊಯ್ಯಲು ಬಾಗಲಕೋಟೆಗೆ ಓಡೋಡಿ ಬಂದಿದ್ದಾರೆ. ಮಗಳನ್ನು ವಿವಾಹವಾಗಿರುವ ಪ್ರಿಯಕರ ಆಕಾಶ್​ನ ಕೈಕಾಲು ಹಿಡಿದು ಮಗಳ ಕಳುಹಿಸಿಕೊಡು ಎಂದು ಕಣ್ಣೀರು ಹಾಕಿದ್ದಾರೆ ತಂದೆ ದೇವರಾಜ್. ತಂದೆ ದೇವರಾಜ್ ಜೊತೆಗೆ ಐಶ್ವರ್ಯಾ ಸಹೋದರ ಸಹ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿ ಮುಂಭಾಗ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ ಬಾಗಲಕೋಟೆಯ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಐಶ್ವರ್ಯಾ-ಆಕಾಶ್ ಜೋಡಿ ಮದುವೆಯಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಚಿತ್ರದುರ್ಗದ ಕೋಟೆಯಲ್ಲಿ ಭೇಟಿಯಾದಾಗ ಇವರಿಬ್ಬರಲ್ಲಿ ಪ್ರೀತಿ ಅರಳಿತ್ತು. ಪೋನ್ ನಲ್ಲಿ ಆಕಾಶ್-ಐಶ್ವರ್ಯಾ ನಿರಂತರ ಸಂಪರ್ಕ ಜಾರಿಯಲ್ಲಿತ್ತು. ಆಗಾಗ ಬಾಲಕಿ ಐಶ್ವರ್ಯಾ ಇದ್ದಲ್ಲಿಗೆ ಹೋಗಿ ಭೇಟಿ ಸಹ ಮಾಡುತ್ತಿದ್ದ ಆಕಾಶ್.

ಈ ಮಧ್ಯೆ.. 17 ವರ್ಷವಿದ್ದಾಗಲೇ ಬಾಲಕಿ ಐಶ್ವರ್ಯಾಳನ್ನು ಬಾಲ್ಯ ವಿವಾಹ ಮಾಡಿಕೊಡಲಾಗಿತ್ತು. ಬಾಲ್ಯ ವಿವಾಹ ಒಪ್ಪದ ಐಶ್ವರ್ಯಾ, ಸೀದಾ ಬಾಗಲಕೋಟೆಗೆ ಬಂದು ತನ್ನ ಇನಿಯನ ಜೊತೆ ಎರಡು ದಿನದ ಹಿಂದೆ ವಿವಾಹವಾಗಿದ್ದಾಳೆ.

ಕುಟುಂಬದಿಂದ ಜೀವ ಬೆದರಿಕೆ ಇದೆ: ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿರುವ ಕಾರಣ ‘ನಮಗೆ ಕುಟುಂಬದವರಿಂದ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ’ ಎಂದು ಪ್ರೇಮಿಗಳು ಎಸ್ ಪಿ ಮೊರೆ ಹೋಗಿದ್ದಾರೆ. ಆಕಾಶ್ ಹಾಗೂ ಐಶ್ವರ್ಯಾ ಬೇರೆ ಬೇರೆ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.

Published On - 11:33 am, Wed, 7 October 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ