ಉತ್ತರಾಖಂಡದಲ್ಲಿ ಭಾರಿ ಮಳೆ, ಗುಡ್ಡ ಕುಸಿತ: ಕೇದಾರ್ ಬಳಿ ಸಿಲುಕಿದ ಚಿತ್ರದುರ್ಗದ ಮೂವರು ಮಹಿಳೆಯರು

| Updated By: ಆಯೇಷಾ ಬಾನು

Updated on: Aug 15, 2023 | 12:50 PM

ಕಳೆದ ಒಂದು ವಾರದ ಹಿಂದೆ ನಲವತ್ತು ಜನರ ತಂಡದ ಜೊತೆಗೆ ಚಿತ್ರದುರ್ಗದ ಮೂವರು ಮಹಿಳೆಯರು ಕೂಡ ಪ್ರವಾಸ ತೆರಳಿದ್ದರು. ಆದ್ರೆ ಕೇದಾರ ಬಳಿ ವಿಪರೀತ ಮಳೆ ಹಾಗೂ ಗುಡ್ಡ ಕುಸಿತ ಹಿನ್ನೆಲೆ ಕೇದಾರದಿಂದ 30ಕಿ.ಮೀ ದೂರದಲ್ಲಿ ಅನೇಕರು ಸಿಲುಕಿದ್ದಾರೆ.

ಉತ್ತರಾಖಂಡದಲ್ಲಿ ಭಾರಿ ಮಳೆ, ಗುಡ್ಡ ಕುಸಿತ: ಕೇದಾರ್ ಬಳಿ ಸಿಲುಕಿದ ಚಿತ್ರದುರ್ಗದ ಮೂವರು ಮಹಿಳೆಯರು
ಕೇದಾರ್ ಬಳಿ ಸಿಲುಕಿದ ಕನ್ನಡಿಗರು.
Follow us on

ಚಿತ್ರದುರ್ಗ, ಆ.15: ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಕೇದಾರನಾಥನ(Kedarnath) ದರ್ಶನಕ್ಕಾಗಿ ಉತ್ತರಾಖಂಡ್‌ಗೆ(Uttarakhand) ತೆರಳಿದ್ದ ಚಿತ್ರದುರ್ಗ ಮೂಲದ ಮೂವರು ಮಹಿಳೆಯರು ಸೇರಿದಂತೆ 40 ಕನ್ನಡಿಗರು ಕೇದಾರ ಬಳಿ ಸಿಲುಕಿದ್ದಾರೆ. ಕಳೆದ ಒಂದು ವಾರದ ಹಿಂದೆ ನಲವತ್ತು ಜನರ ತಂಡದ ಜೊತೆಗೆ ಚಿತ್ರದುರ್ಗದ ಮೂವರು ಮಹಿಳೆಯರು ಕೂಡ ಪ್ರವಾಸ ತೆರಳಿದ್ದರು. ಆದ್ರೆ ಕೇದಾರ ಬಳಿ ವಿಪರೀತ ಮಳೆ ಹಾಗೂ ಗುಡ್ಡ ಕುಸಿತ ಹಿನ್ನೆಲೆ ಕೇದಾರದಿಂದ 30ಕಿ.ಮೀ ದೂರದಲ್ಲಿ ಅನೇಕರು ಸಿಲುಕಿದ್ದಾರೆ.

ಇನ್ನು ಸಿಲುಕಿಕೊಂಡವರಲ್ಲಿ ಚಿತ್ರದರ್ಗದ ಬಿಜೆಪಿ ಮುಖಂಡರಾದ ರತ್ನಮ್ಮ, ಅಂಬಿಕಾ, ಗೀತಾ ಮತ್ತು ಇತರರಿದ್ದು ಕೇದಾರನಾಥ ತಲುಪಲು ಆಗುತ್ತಿಲ್ಲ, ವಾಪಸ್ ಬರಲಾಗದ ಸ್ಥಿತಿ ಇದ್ದು ಶೀಘ್ರ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ. ಕೇದಾರ ಬಳಿ ಒಟ್ಟು 40 ಜನ ಸಿಲುಕಿಕೊಂಡಿದ್ದಾರೆ. ಚಿತ್ರದುರ್ಗದ 3 ಮಹಿಳೆಯರು, ಶಿವಮೊಗ್ಗ 4, ಭದ್ರವತಿಯಿಂದ 7 ಜನ ಹಾಗೂ ಬೆಂಗಳೂರಿನ 26 ಮಂದಿ ಸಿಲುಕಿದ್ದಾರೆ. ಜಾಗವನ್ನು ರೋಡ್ ಜೋನ್ ಅಂತ ಘೋಷಣೆ ಮಾಡಲಾಗಿದೆ.

ಇನ್ನು ಈ ಬಗ್ಗೆ ಚಿತ್ರದುರ್ಗದಲ್ಲಿ ಯೋಜನೆ & ಸಾಂಖಿಕ ಸಚಿವ ಡಿ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಚಿತ್ರದುರ್ಗದ ಕೆಲವರು ಕೇದಾರ ಬಳಿ ಸಿಲುಕಿದ್ದಾರೆ. ಈ ಬಗ್ಗೆ ಗೃಹ ಸಚಿವರ ಜೊತೆ ನಾನು ಮಾತನಾಡಿದ್ದೇನೆ. ಸುರಕ್ಷಿತವಾಗಿ ವಾಪಸ್ ಕರೆ ತರಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು. ಇನ್ನು ಇದೇ ವೇಳೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಕ್ಷೇಪಾರ್ಹ ಹೇಳಿಕೆ ವಿಡಿಯೋ ವೈರಲ್ ವಿಚಾರ ಸಂಬಂಧ ಮಾತನಾಡಿದ ಅವರು, ಅದೊಂದು ಹಳೇ ಗಾದೆ ಮಾತು. ನಾನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ, ಗಾದೆ ಮಾತು ಎಂದು ಹೇಳುವೆ. ಸಚಿವರ ಹೇಳಿಕೆ ಬಗ್ಗೆ ಗೊತ್ತಿಲ್ಲ, ವಿಚಾರಿಸಿ ಪ್ರತಿಕ್ರಿಯಿಸುವೆ ಎಂದರು.

ಇದನ್ನು ಓದಿ: ರಾಜ್ಯದ ಆಸಕ್ತ ಯಾತ್ರಾರ್ಥಿಗಳಿಗಾಗಿ ಸಹಾಯಧನದಲ್ಲಿ ಕಾಶಿ ಯಾತ್ರೆ ಪ್ರವಾಸ; ರಾಜ್ಯ ಸರ್ಕಾರ ಆದೇಶ

ಉತ್ತರ ಭಾರತದ ಹಲವೆಡೆ ಸಾಲು, ಸಾಲು ಭೂಕುಸಿತಗಳು ಸಂಭವಿಸುತ್ತಿವೆ. ಕಳೆದ ಒಂದು ತಿಂಗಳ ಹಿಂದಷ್ಟೇ ಭಾರೀ ಮಳೆಯಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯದ ಜನರು ಮಳೆಗೆ ಕಂಗಾಲಾಗಿದ್ದರು. ಆದ್ರೆ ಈಗ ಸಾಲು, ಸಾಲು ಭೂಕುಸಿತದ ದುರಂತ ಸ್ಥಳೀಯರು ಹಾಗೂ ಪವಿತ್ರ ಕ್ಷೇತ್ರಗಳಿಗೆ ಭೇಟಿ ಕೊಟ್ಟ ಪ್ರವಾಸಿಗರ ಜೀವಕ್ಕೆ ಆಪತ್ತು ತಂದಿವೆ.

ರುದ್ರಪ್ರಯಾಗ್‌ ಜಿಲ್ಲೆಯ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯಲ್ಲಿ ಸಂಚರಿಸುವಾಗ ಕಾರಿನ ಮೇಲೆ ಬಂಡೆ ಕಲ್ಲುಗಳು ಬಿದ್ದು ಐವರು ಯಾತ್ರಾರ್ಥಿಗಳು ಮೃತಪಟ್ಟ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಕೇದಾರನಾಥನ ದರ್ಶನಕ್ಕೆ ಹೊರಟಿದ್ದ ಐವರು ಯಾತ್ರಾರ್ಥಿಗಳು ಪ್ರಾಣಬಿಟ್ಟಿದ್ದಾರೆ. ಇದರ ನಡುವೆ ಈಗ ಕೇದಾರ ಬಳಿ ಕರ್ನಾಟಕದ 40 ಜನ ಸಿಲುಕಿಕೊಂಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:23 am, Tue, 15 August 23