ಚಿತ್ರದುರ್ಗ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮ ಬಳಿಯ ಕೆರೆಯಲ್ಲಿ ನಡೆದಿದೆ. ಒಟ್ಟು ಐವರು ಈಜಲು ಹೋಗಿದ್ದು ಮೂವರು ನೀರುಪಾಲಾಗಿ ಇಬ್ಬರು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ನಂದನಹೊಸೂರು ಗ್ರಾಮದ ನಿವಾಸಿ ಗಿರೀಶ್(18), ಹೊರಕೆರೆದೇವರಪುರ ಗ್ರಾಮದ ಸಂಜಯ್(18), ಕಣಿವೆ ಜೋಗಿಹಳ್ಳಿ ಗ್ರಾಮದ ಮನು(19) ಮೃತರು. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐವರು ಯುವಕರು ಪಿಯುಸಿ ಪರೀಕ್ಷೆಯನ್ನು ಮುಗಿಸಿ ಊರಿಗೆ ಬಂದಿದ್ದರು. ರಜೆ ಇದ್ದ ಕಾರಣ ಸ್ನೇಹಿತರೆಲ್ಲ ಸೇರಿಕೊಂಡು ಗುಂಡಿ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಕೆರೆಯ ಆಳ ತಿಳಿಯದೆ ಈಜಾಡಲು ಇಳಿದಿದ್ದು ಮುಳುಗಿದ್ದಾರೆ. ದಡ ಸೇರಲು ಸಾಧ್ಯವಾಗದೇ ಐವರಲ್ಲಿ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದು, ವಿಷಯ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನ ನೆರಳಲ್ಲೇ ಇರೋ ನ್ಯೂ ತರಗು ಪೇಟೆ ಎಂಬ ಏರಿಯಾದಲ್ಲಿ ಕೊಲೆಯಾಗಿದೆ. ನ್ಯೂ ತರಗು ಪೇಟೆ ಗೋಡೌನ್‌ಗಳಿಂದ ತುಂಬಿರೋ ಪ್ರದೇಶ. ಬೆಂಗಳೂರಿನ ಹಲವು ಮಾರ್ಕೆಟ್‌ಗಳಿಗೆ ಇಲ್ಲಿನ ಗೋಡೌನ್‌ಗಳಿಂದಲೇ ಐಟಂಗಳು ರವಾನೆಯಾಗುತ್ತವೆ. ಜನರ ಜತೆ ನೇರವಾಗಿ ಇಲ್ಲಿ ವಹಿವಾಟು ಇರೋದಿಲ್ಲ. ಇದೇ ಕಾರಣಕ್ಕೆ ಇಲ್ಲಿ ಜನರ ಓಡಾಟ ಅಷ್ಟಕಷ್ಟೇ. ಇಂಥಾ ಸ್ಪಾಟ್‌ನಲ್ಲಿ ರಕ್ತ ಹರಿದಿತ್ತು. ರಮೇಶ್ ಅನ್ನೋ ನೇಪಾಳ ಮೂಲಕ ಯುವಕನ ಹೆಣ ಬಿದ್ದಿತ್ತು. ತರಗು ಪೇಟೆಯ ಶಾಪ್‌ವೊಂದರಲ್ಲಿ ಕೆಲಸ ಮಾಡ್ತಿದ್ದ ರಮೇಶ್‌ನನ್ನ, ಯಾವುದೋ ಐಟಂ ತರಿಸಲು ಮಾಲೀಕರು ಹೊರಗೆ ಕಳಿಸಿದ್ರು. ಹೀಗಾಗಿ ರಮೇಶ್ ತನ್ನ ಸ್ನೇಹಿತ ಇಂದ್ರೇಶ್ ಜತೆ ಸೇರಿಕೊಂಡು ಜೆಸಿ ನಗರಕ್ಕೆ ಹೋಗಿದ್ದ. ಹೀಗೆ ಅಲ್ಲಿಂದ ವಾಪಸ್ ಆಗುವಾಗ ಕೆ.ಆರ್. ಮಾರ್ಕೆಟ್ ಬಳಿ ಬಾರ್‌ವೊಂದರಲ್ಲಿ ಎಣ್ಣೆ ಬಿಡ್ಕೊಂಡಿದ್ರು.
ಹೀಗೆ ಬಾರ್‌ನಿಂದ ಇಬ್ರು ಹೊರಬಂದಿದ್ದಾರೆ. ಈ ವೇಳೆ ತರಗು ಪೇಟೆ ಕಡೆ ನಡೆದುಕೊಂಡು ಹೋಗುವಾಗ ದಾರಿ ಮಧ್ಯೆ ನಿಂತಿದ್ದವರನ್ನ ಇವ್ರು ದಿಟ್ಟಿಸಿ ನೋಡಿದ್ರಂತೆ ಅಷ್ಟೇ. ಯಾಕೇ ಗುರಾಯಿಸುತ್ತೀಯಾ ಅಂತಾ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಆಗ ಎಚ್ಚೆತ್ತ ಇಂದ್ರೇಸ್ ಅಲ್ಲಿಂದ ಎಸ್ಕೇಪ್ ಆಗಿದ್ರೆ, ರಮೇಶ್‌ಗೆ ಎತ್ತಾ ಹೋಗ್ಬೇಕು ಅಂತಾ ತಿಳಿದಿಲ್ಲ. ಅಲ್ಲೇ ಶಟರ್ ಎಳೆದಿದ್ದ ಶಾಪ್‌ಬಳಿ ನಿಂತಿದ್ದ.ಆಗ ಕ್ರಿಮಿಗಳು ರಮೇಶ್ ಕತ್ತಿಗೆ ಚಾಕು ಹಾಕಿ ಎಸ್ಕೇಪ್ ಆಗಿದ್ರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:33 am, Wed, 29 March 23