ಚಿತ್ರದುರ್ಗ: ಸ್ಲಂ ಬೋರ್ಡ್ ಇಂಜಿನಿಯರ್ ನೇಣಿಗೆ ಶರಣು; ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಭೇಟಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 23, 2023 | 3:47 PM

ಚಿತ್ರದುರ್ಗ ಜಿಲ್ಲೆಯ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸ್ಲಂ ಬೋರ್ಡ್ ಇಂಜಿನಿಯರ್ ವೀರೇಶ್ ಬಾಬು ಅವರು ಚಳ್ಳಕೆರೆ ಪಟ್ಟಣದ ತ್ಯಾಗರಾಜ ನಗರದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಇವರ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದು ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ: ಸ್ಲಂ ಬೋರ್ಡ್ ಇಂಜಿನಿಯರ್ ನೇಣಿಗೆ ಶರಣು; ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಭೇಟಿ
ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್​
Follow us on

ಚಿತ್ರದುರ್ಗ, ಆ.23: ಸ್ಲಂ ಬೋರ್ಡ್ ಇಂಜಿನಿಯರ್ (Slum Board Engineer) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ತ್ಯಾಗರಾಜ ನಗರದ ಮನೆಯಲ್ಲಿ ನಡೆದಿದೆ. ದಾವಣಗೆರೆ ವಿಭಾಗದ ಸ್ಲಂ ಬೋರ್ಡ್ ಇಂಜಿನೀಯರ್ ಆಗಿದ್ದ ವೀರೇಶ್ ಬಾಬು(55) ಮೃತ ರ್ದುದೈವಿ. ಇನ್ನು ವೀರೇಶ್ ಬಾಬು ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ವೀರೇಶ್ ಬಾಬು ಅವರಿಗೆ ಹಕ್ಕು ಪತ್ರ ವಿತರಣೆ ಬಗ್ಗೆ ಆಕ್ಷೇಪ ಹಾಗೂ ಒತ್ತಡಗಳಿದ್ದವು ಎಂದು ಕುಟುಂಬಸ್ಥರು ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು,(ಆ.23): ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ ಆದೇಶ ನೀಡಿದೆ. ಅಪರಾಧಿಯು ಮಗುವಿಗೆ ಪರಿಚಿತನಾಗಿದ್ದು, ಮಗು ಆಟವಾಡುತ್ತಿದ್ದಾಗ ಕರೆದೊಯ್ದು ಅತ್ಯಾಚಾರವೆಸಗಿದ್ದ. ಬಳಿಕ ಸೈಜ್ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ ವಿಚಾರಣೆ ನಡೆಸಿ, ಇದೀಗ ಆತನಿಗೆ ಜೀವಾವಧಿ ಶಿಕ್ಷೆ ನೀಡಿದೆ.

ಇದನ್ನೂ ಓದಿ:ಬೆಡ್​​ ರೂಮ್​ನಲ್ಲಿ ಯುವಕನ ಜೊತೆ ಹೆಂಡ್ತಿ ಕಂಡು ಹೌಹಾರಿದ ಪತಿ, ಡೆತ್​ನೋಟ್ ನಲ್ಲಿ ಭಾವುಕ ನುಡಿ ಬರೆದಿಟ್ಟು ಬಿಬಿಎಂಪಿ ನೌಕರ ಆತ್ಮಹತ್ಯೆ

ದ್ವಿಚಕ್ರ ವಾಹನ ಕದ್ದು ಕಳ್ಳತನಕ್ಕೆ ಬಳಸುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ರಸ್ತೆಬದಿ ಮತ್ತು ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿ ರಾಬರಿಗೆ ಬಳಸುತಿದ್ದ ಮೂವರು ಅರೋಪಿಗಳನ್ನು ಬೆಂಗಳೂರಿನ ಆರ್​.ಟಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೈಯದ್ ಅಲಿ, ಮುಬಾರಕ್ ಖಾನ್, ನಿರಂಜನ್ ಬಂಧಿತ ಅರೋಪಿಗಳು. ಪ್ರತಿಯೊಬ್ಬ ಅರೋಪಿ ವಿರುದ್ದ ಹಲವಾರು ಕೇಸ್​ಗಳಿವೆ. ಸೈಯದ್ ಅಲಿ ಅಲಿಯಾಸ್ ಕಾಲು ವಿರುದ್ದ ನಗರದ ವಿವಿಧ ಠಾಣೆಯಲ್ಲಿ ಒಟ್ಟು 12 ಕೇಸ್, ಮುಬಾರಕ್ ಅಲಿಯಾಸ್ ಮುಬ್ಬು ವಿರುದ್ದ ನಗರದ ಹಲವು ಠಾಣೆಯಲ್ಲಿ ನಾಲ್ಕು ಪ್ರಕರಣಗಳು ಮತ್ತು ನಿರಂಜನ ವಿರುದ್ದ ಒಂದು ಪ್ರಕರಣ ಇದೆ. ಇನ್ನು ಇವರು ಕದ್ದ ಬೈಕ್​ನಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ 4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದರು. ಸದ್ಯ ಅರೋಪಿಗಳ ಬಂಧನದಿಂದ ಹನ್ನೊಂದು ಬೈಕ್ ಮತ್ತು ನಾಲ್ಕು ಲಕ್ಷದ ಚಿನ್ನದ ಆಭರಣಗಳು ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ