ಚಿತ್ರದುರ್ಗದಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಆರೋಪ! ಹೆಂಡತಿ, ಮಾವನ ವಿರುದ್ಧ ದೂರು ದಾಖಲು

| Updated By: sandhya thejappa

Updated on: Jan 22, 2022 | 8:34 AM

ಹೊಸದುರ್ಗದ ಜಂಗಮ ನಗರ ನಿವಾಸಿ ಸರಳಾ ಜತೆ 2020ರ ಜುಲೈ 6ರಂದು ಮಾರಪ್ಪ ವಿವಾಹವಾಗಿತ್ತು. ಸರಳಾ ತಂದೆ ವಸಂತಕುಮಾರ್ ಮತ್ತು ಇತರರು ಸೇರಿ ಮತಾಂತರ ಮಾಡಿ ಕ್ರಿಶ್ಚಿಯನ್ ಪದ್ಧತಿಯಂತೆ ವಿವಾಹ ಮಾಡಿದ್ದಾರೆ.

ಚಿತ್ರದುರ್ಗದಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಆರೋಪ! ಹೆಂಡತಿ, ಮಾವನ ವಿರುದ್ಧ ದೂರು ದಾಖಲು
ಹೆಂಡತಿ, ಮಾವನ ವಿರುದ್ಧ ಮಾರಪ್ಪ ಎಂಬುವವರು ದೂರು ನೀಡುತ್ತಿದ್ದಾರೆ
Follow us on

ಚಿತ್ರದುರ್ಗ: ಆಮಿಷವೊಡ್ಡಿ ಬಲವಂತವಾಗಿ ಮತಾಂತರ (Conversion) ಮಾಡಿರುವ ಆರೋಪ ಕೇಳಿಬಂದಿದ್ದು, ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆಯ ಬುಡ್ಡ ಜಂಗಮ ಕಾಲೋನಿ ನಿವಾಸಿ ಮಾರಪ್ಪ ಎಂಬುವವರು ದೂರು ನೀಡಿದ್ದಾರೆ. ಹೆಂಡತಿ ತಂದೆ ಮತ್ತು ಇತರರು ಸೇರಿ ತನ್ನನ್ನು ಮತಾಂತರ ಮಾಡಿ ಕ್ರಿಶ್ಚಿಯನ್ ಪದ್ಧತಿಯಂತೆ ವಿವಾಹ ಮಾಡಿದ್ದಾರೆ ಅಂತ ಮಾರಪ್ಪ ದೂರು ನೀಡಿದ್ದಾರೆ.

ಹೊಸದುರ್ಗದ ಜಂಗಮ ನಗರ ನಿವಾಸಿ ಸರಳಾ ಜತೆ 2020ರ ಜುಲೈ 6ರಂದು ಮಾರಪ್ಪ ವಿವಾಹವಾಗಿತ್ತು. ಸರಳಾ ತಂದೆ ವಸಂತಕುಮಾರ್ ಮತ್ತು ಇತರರು ಸೇರಿ ಮತಾಂತರ ಮಾಡಿ ಕ್ರಿಶ್ಚಿಯನ್ ಪದ್ಧತಿಯಂತೆ ವಿವಾಹ ಮಾಡಿದ್ದಾರೆ. ಕೆಲ ತಿಂಗಳ ಬಳಿಕ ಮಾರಪ್ಪ ಹಿಂದೂ ದೇವರ ಪೂಜೆ ಮಾಡಿದರೆ ಇದಕ್ಕೆ ಪತ್ನಿ ಸರಳಾ, ಮಾವ ವಂಸತಕುಮಾರ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

2021ರ ಡಿ.2ರಂದು ಹೆರಿಗೆಗೆಂದು ಮಗಳನ್ನ ಕರೆದೊಯ್ದಿದ್ದಾರೆ. ಜ.18ರಂದು ಪತ್ನಿ, ಮಗು ನೋಡಲು ಹೋದಾಗ ಹೆಂಡತಿ ಮನೆಯವರು ಗಲಾಟೆ ಮಾಡಿದ್ದಾರಂತೆ. ಕ್ರಿಶ್ಚಿಯನ್ ಪದ್ಧತಿ ಆಚರಿಸುವಂತೆ ಗಲಾಟೆ ಮಾಡಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಮಾರಪ್ಪ ಹೊಸದುರ್ಗ ಠಾಣೆಗೆ ಆಗಮಿಸಿ ನಿನ್ನೆ (ಜ.21) ದೂರು ನೀಡಿದ್ದಾರೆ.

ಮತಾಂತರ ಕಿರುಕುಳ; ವಿದ್ಯಾರ್ಥಿ ಆತ್ಮಹತ್ಯೆ                                                                                                                             ದೇಶದಾದ್ಯಂತ ಒತ್ತಾಯದಿಂದ ಮತಾಂತರ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಲೆ ಇರುತ್ತವೆ. ಈ ಹಿಂದೆ ತಮಿಳುನಾಡಿನ ತಂಜಾವೂರಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿ, ದೌರ್ಜನ್ಯ ನಡೆಸಿದ್ದರಿಂದ ಆಕೆ ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತಕ್ಷಣ ಆಕೆಯನ್ನು ಆಕೆಯ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವೈದ್ಯರ ಚಿಕಿತ್ಸೆಗೆ ಸ್ಪಂದಿಸದ ಆಕೆ ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.

ಇದನ್ನೂ ಓದಿ

ಕೇವಲ ಮಾಂಸಾಹಾರದಲ್ಲಿ ಮಾತ್ರ ಪೌಷ್ಠಿಕಾಂಶ ಅಡಗಿರುವುದಿಲ್ಲ, ಸಸ್ಯಾಹಾರದ ಅನೇಕ ಪದಾರ್ಥಗಳು ಪ್ರೊಟೀನಿನ ಭಂಡಾರವಾಗಿವೆ!

ಬಳ್ಳಾರಿಗೆ ಇದ್ದ ಪ್ರತ್ಯೇಕ ಕೊರೊನಾ ಗೈಡ್​ಲೈನ್​ ಹಿಂಪಡೆದ ಜಿಲ್ಲಾಧಿಕಾರಿ, ಹೊಸಪೇಟೆ ಅಧ್ಯಕ್ಷೆ, ಉಪಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

Published On - 8:31 am, Sat, 22 January 22