ಚಿತ್ರದುರ್ಗದಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಇರುವ ಪ್ರೌಢ ಶಾಲೆ, ಪಿಯು ಕಾಲೇಜು ನಿರ್ಲಕ್ಷ್ಯಕ್ಕೆ ಗುರಿ

| Updated By: ಸಾಧು ಶ್ರೀನಾಥ್​

Updated on: Nov 28, 2023 | 3:38 PM

ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಕಂಪೌಂಡ್ ಇಲ್ಲದೆ ಎರಡು ವರ್ಷವೇ ಕಳೆದಿದೆ. ವಿದ್ಯಾರ್ಥಿಗಳು ನಿತ್ಯ ಮುಜುಗರಕ್ಕೀಡಾಗುತ್ತಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಶೀಘ್ರ ಶಾಲಾ ಕಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಚಿತ್ರದುರ್ಗದಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಇರುವ ಪ್ರೌಢ ಶಾಲೆ, ಪಿಯು ಕಾಲೇಜು ನಿರ್ಲಕ್ಷ್ಯಕ್ಕೆ ಗುರಿ
ಸಾವಿರಾರು ವಿದ್ಯಾರ್ಥಿನಿಯರು ಇರುವ ಚಿತ್ರದುರ್ಗ ಪ್ರೌಢ ಶಾಲೆ, ಪಿಯು ಕಾಲೇಜು ನಿರ್ಲಕ್ಷ್ಯಕ್ಕೆ ಗುರಿ
Follow us on

ಶಿಕ್ಷಣ ಕ್ಷೇತ್ರ ಅಭಿವೃದ್ಧಿಗಾಗಿ ನಾನಾ ಯೋಜನೆ ರೂಪಿಸಲಾಗುತ್ತದೆ. ಲೆಕ್ಕವಿಲ್ಲದಷ್ಟು ಹಣವನ್ನೂ ಖರ್ಚು ಮಾಡಲಾಗುತ್ತದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಸಾವಿರಾರು ವಿದ್ಯಾರ್ಥಿನಿಯರು ಇರುವ ಶಾಲೆ ನಿರ್ಲಕ್ಷಕ್ಕೆ ಒಳಗಾಗಿದೆ. ಈ ಕುರಿತು ವರದಿ ಇಲ್ಲಿದೆ. ಸಾವಿರಾರು ವಿದ್ಯಾರ್ಥಿನಿಯರು ವಿದ್ಯೆ ಕಲಿಯುವ ಶಾಲೆಗೆ ಕಂಪೌಂಡ್ ಇಲ್ಲ. ಕಳೆದ ಎರಡು ವರ್ಷದಿಂದ ಕಂಪೌಂಡ್ ಇಲ್ಲದೆ ಅಸುರಕ್ಷತೆ ಕಾಡುತ್ತಿದೆ. ನಿತ್ಯ ಮುಜುಗರಕ್ಕೆ ಒಳಗಾಗುತ್ತಿರುವ ವಿದ್ಯಾರ್ಥಿನಿಯರ ಪ್ರತಿಭಟನೆ, ಮನವಿಗೆ ಜಿಲ್ಲಾಡಳಿತ ಡೋಂಟ್ ಕೇರ್ (negligence) ಅಂದಿದೆ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ (chitradurga) ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (High school and PU college) ಬಳಿ. ಹೌದು, ಸರ್ಕಾರಿ ಬಾಲಕಿಯರ (girl students) ಪ್ರೌಢಶಾಲೆ ಮತ್ತು ಬಾಲಕಿಯರ ಪಿಯು ಕಾಲೇಜು ಸಹ ಈ ಕಟ್ಟಡದಲ್ಲಿದೆ.

ಆದ್ರೆ, ಕಳೆದ ಎರಡು ವರ್ಷದ ಹಿಂದೆ ರಸ್ತೆ ನಿರ್ಮಾಣ, ಅಗಲೀಕರಣಕ್ಕಾಗಿ ಈ ಶಾಲೆಯ ಸುತ್ತಲಿನ ಕಂಪೌಂಡ್ ತೆರವುಗೊಳಿಸಲಾಗಿತ್ತು. ಈವರೆಗೆ ಶಾಲಾ ಕಂಪೌಂಡ್ ನಿರ್ಮಾಣ ಆಗಿಲ್ಲ. ಹೀಗಾಗಿ, ಬಾಲಕಿಯರ ಶಾಲೆ, ಕಾಲೇಜು ಬಳಿ ಪುಂಡಪೋಕರಿಗಳ ಹಾವಳಿ ಹೆಚ್ಚಿದೆ. ಅಲ್ಲದೆ ಶೌಚಾಲಯ, ಆಟ, ಪಾಠಕ್ಕಾಗಿ ವಿದ್ಯಾರ್ಥಿನಿಯರು ಹೊರ ಬಂದಾಗ ಪುಂಡರ ಹಾವಳಿಯಿಂದ ಮುಜುಗರಕ್ಕೀಡಾಗುವ ಸ್ಥಿತಿ ಎದುರಾಗಿದೆ. ಹೀಗಾಗಿ, ಶೀಘ್ರ ಶಾಲೆಗೆ ಕಂಪೌಂಡ್ ನಿರ್ಮಾಣ ಮಾಡಬೇಕೆಂಬುದು ವಿದ್ಯಾರ್ಥಿನಿಯರ ಆಗ್ರಹವಾಗಿದೆ.

Also Read: ಕಂದಾಯ ಇಲಾಖೆಯ ಯಡವಟ್ಟು: ಯುವಕನ ಅಂತ್ಯಸಂಸ್ಕಾರಕ್ಕೆ ಪರದಾಟ

ಇನ್ನು ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಅನೇಕ ಸಲ ಪ್ರತಿಭಟನೆ ನಡೆಸಿದ್ದಾರೆ, ಡಿಸಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಇಂದು ಸಹ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ವಿರುದ್ಧ ಘೋಷಣೆ ಕೂಗಿ ವಿದ್ಯಾರ್ಥಿಗಳು ಕಿಡಿ ಕಾರಿದರು. ಈ ವೇಳೆ ಪ್ರತಿಕ್ರಿಯಿಸಿದ ಶಿವಕುಮಾರ್ ಈ ಬಗ್ಗೆ ಚಿತ್ರದುರ್ಗ ನಗರ ಠಾಣೆಗೆ ದೂರು ನೀಡಿದ್ದೇನೆ. ಪರಿಶೀಲಿಸಿ ಎಫ್ ಐಆರ್ ದಾಖಲಿಸುವುದಾಗಿ ಪೊಲೀಸ್ರು ತಿಳಿಸಿದ್ದಾರೆ. ನಿರ್ಲಕ್ಷಿಸಿದ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸದಿದ್ದರೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ