ಚಿತ್ರದುರ್ಗ: ಪ್ರತಿ ವರ್ಷ ಕೋಟೆನಾಡಿನಲ್ಲಿ ಗಣೇಶೋತ್ಸವ ನಡೆಯುತ್ತಿತ್ತು. ಆದ್ರೆ ಈ ವರ್ಷ3ನೇ ಅಲೆ ಭೀತಿಯಿಂದ ಗಣೇಶೋತ್ಸವದ ಕೊರೊನಾ ಕರಿನೆರಳು ಬಿದ್ದಿದೆ. ಖಡಕ್ ರೂಲ್ಸ್ ಹೇರಿ ಅದ್ಧೂರಿ ಗಣೇಶೋತ್ಸವಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಹೀಗೆ ಸರ್ಕಾರದ ಟಫ್ ರೂಲ್ಸ್ ನಡುವೆ ಕೋಟೆನಾಡಿನ ಹಿಂದೂ ಮಹಾಸಭಾ ಗಣಪತಿ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಬೃಹತ್ ವೇದಿಕೆ ಗಣೇಶ ಉತ್ಸವಕ್ಕೆ ಸಜ್ಜಾಗುತ್ತಿದೆ. 7-8 ಅಡಿಯ ಗಣೇಶ ಪ್ರತಿಷ್ಠಾಪನೆಗೆ ಸಿನಿಮಾ ಸೆಟ್‌ನಂತೆ ವೇದಿಕೆ ರೆಡಿಮಾಡಿಕೊಳ್ಳಲಾಗುತ್ತಿದೆ. ಇನ್ನು ಎಂದಿನಂತೆ ಸಾಂಪ್ರದಾಯಿಕ ಆಚರಣೆ ನಡೆಯಲಿದ್ದು, 21ನೇ ದಿನ ಗಣೇಶ ವಿಸರ್ಜನೆ ಮಾಡುತ್ತೇವೆ ಎಂದು ಭಜರಂಗದಳ ಮುಖ್ಯಸ್ಥ ಪ್ರಭಂಜನ್ ತಿಳಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ಬೊಮ್ಮಾಯಿ ಸರ್ಕಾರ ಕೆಲ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಗಣೇಶ ಮೂರ್ತಿ ಎತ್ತರ, ಐದು ದಿನ ಮಾತ್ರ ಅವಕಾಶ ಹಾಗೂ ನಿಯಮಿತ ಪೆಂಡಾಲ್ ಸ್ಥಳ ಸೇರಿದಂತೆ ಇತರೆ ನಿರ್ಬಂಧಗಳನ್ನು ವಿಧಿಸಿದೆ. ಆದ್ರೆ, ಸಂಘ ಪರಿವಾರ ಮಾತ್ರ ನಾವು 21 ದಿನ ಗಣಪತಿ ಇಟ್ಟು ಅದ್ಧೂರಿಯಾಗಿ ಗಣೇಶ ಉತ್ಸವ ಮಾಡುತ್ತೇವೆ ಎನ್ನುತ್ತಿದೆ. ಸರ್ಕಾರ ನಿರ್ಬಂಧ ಸಡಿಲಿಸದಿದ್ದರೇ ಸಂಘ ಪರಿವಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ವಿಪುಲ್ ಜೈನ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ದದಲ್ಲಿ ಎಂದಿನಂತೆ ಅದ್ಧೂರಿ ಗಣೇಶೋತ್ಸವಕ್ಕೆ ಸಂಘ ಪರಿವಾರ ಸಿದ್ಧವಾಗಿದೆ. ಸರ್ಕಾರದ ಆದೇಶದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಗಣೇಶ ಹಬ್ಬಕ್ಕೆ ಸಜ್ಜಾಗುತ್ತಿದೆ. ಜಿಲ್ಲಾಡಳಿತ ಮತ್ತು ಸರ್ಕಾರ ಈ ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್ ಹಾಕುತ್ತಾ? ಅಥವಾ ಒತ್ತಡಕ್ಕೆ ಮಣಿದು ನಿಯಮಗಳನ್ನ ಸಡಿಲಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: Shamanthakopakyana: ತಿಳಿದೂತಿಳಿದು ಗಣೇಶ ಹಬ್ಬದ ದಿನ ಯಾಕೆ ಚಂದ್ರನನ್ನು ನೋಡುವಿರಿ? ಚಂದ್ರ ದೋಷ ಬಾಧಿಸುತ್ತದೆ
Published On - 7:40 am, Tue, 7 September 21