Shamanthakopakyana: ತಿಳಿದೂತಿಳಿದು ಗಣೇಶ ಹಬ್ಬದ ದಿನ ಯಾಕೆ ಚಂದ್ರನನ್ನು ನೋಡುವಿರಿ? ಚಂದ್ರ ದೋಷ ಬಾಧಿಸುತ್ತದೆ

Ganesha Chaturthi 2021: ಚಂದ್ರದೋಷ; ತಿಳಿದೋ ತಿಳಿಯದೆಯೋ ಗಣೇಶನ ಹಬ್ಬದ ದಿನ ಚಂದ್ರನನ್ನು ನೋಡಬೇಡಿ. ಪುರಾಣದ ಪ್ರಕಾರ ಅಂದು ಚಂದಿರನ ದರ್ಶನದಿಂದ ಚಂದ್ರ ದೋಷ ಬಾಧಿಸುತ್ತದೆ ನಿಮ್ಮನ್ನು. ಒಂದು ವೇಳೆ ನೋಡಿಬಿಟ್ಟರೆ ದೋಷ ಪರಿಹಾರಾರ್ಥವಾಗಿ ಏನು ಮಾಡಬೇಕು ಇಲ್ಲಿದೆ ಮಾಹಿತಿ, ಓದಿ ತಿಳಿದುಕೊಳ್ಳಿ.

Shamanthakopakyana: ತಿಳಿದೂತಿಳಿದು ಗಣೇಶ ಹಬ್ಬದ ದಿನ ಯಾಕೆ ಚಂದ್ರನನ್ನು ನೋಡುವಿರಿ? ಚಂದ್ರ ದೋಷ ಬಾಧಿಸುತ್ತದೆ
Ganesha Chaturthi 2021: ಚಂದ್ರದೋಷ; ತಿಳಿದೋ ತಿಳಿಯದೆಯೋ ಗಣೇಶನ ಹಬ್ಬದ ದಿನ ಚಂದ್ರನನ್ನು ನೋಡಬೇಡಿ. ಪುರಾಣದ ಪ್ರಕಾರ ಅಂದು ಚಂದಿರನ ದರ್ಶನದಿಂದ ಚಂದ್ರ ದೋಷ ಬಾಧಿಸುತ್ತದೆ ನಿಮ್ಮನ್ನು. ಒಂದು ವೇಳೆ ನೋಡಿಬಿಟ್ಟರೆ ದೋಷ ಪರಿಹಾರಾರ್ಥವಾಗಿ ಏನು ಮಾಡಬೇಕು ಇಲ್ಲಿದೆ ಮಾಹಿತಿ, ಓದಿ ತಿಳಿದುಕೊಳ್ಳಿ.
TV9kannada Web Team

| Edited By: sadhu srinath

Sep 07, 2021 | 5:07 PM

ಚಂದ್ರದೋಷ – ತಿಳಿದೋ ತಿಳಿಯದೆಯೋ ಗಣೇಶನ ಹಬ್ಬದ ದಿನ ಚಂದ್ರನನ್ನು ನೋಡಬೇಡಿ. ಪುರಾಣದ ಪ್ರಕಾರ ಅಂದು ಚಂದಿರನ ದರ್ಶನದಿಂದ ಚಂದ್ರ ದೋಷ ಬಾಧಿಸುತ್ತದೆ ನಿಮ್ಮನ್ನು. ಒಂದು ವೇಳೆ ನೋಡಿಬಿಟ್ಟರೆ ದೋಷ ಪರಿಹಾರಾರ್ಥವಾಗಿ ಏನು ಮಾಡಬೇಕು ಇಲ್ಲಿದೆ ಮಾಹಿತಿ, ಓದಿ ತಿಳಿದುಕೊಳ್ಳಿ.

ಶಮಂತಕೋಪಾಖ್ಯಾನ: ಗಣೇಶ ಚತುರ್ಥಿಯ ಹಬ್ಬದಂದು ತನ್ನ ಭಕ್ತರು ಅರ್ಪಿಸಿದ ಬಗೆಬಗೆಯ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕವಾಹನ. ಹೊಟ್ಟೆಯ ಭಾರದಿಂದ ಆಯ ತಪ್ಪಿ ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ. ಅದರಿಂದ ಅವಮಾನಿತನಾದ ಗಣಪ, ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ ಎಂದು ಶಪಿಸಿದನಂತೆ. ಉಂಡವನು ಗಣಪ, ನಕ್ಕವನು ಚಂದ್ರ, ಆದರೆ, ಶಾಪ ಮಾತ್ರ ಚಂದ್ರನನ್ನು ನೋಡಿದವರಿಗೆ!!

“ಚೌತಿಯ ಚಂದ್ರನ ದರುಶನದಿಂದ ಕಾಡಿತು ಕೃಷ್ಣಗೆ ಅಪವಾದ,ಈ ಕತೆ ಕೇಳಲು ದೊರೆವುದು ಜನರಿಗೆ ದೋಷದ ಪರಿಹಾರ.. “ ಹೀಗೊಂದು ಹಾಡನ್ನು ಕೇಳಿದ್ದೇವೆ. ಉಳಿದ ದಿನಗಳಲ್ಲಿ ಸಾಮಾನ್ಯವಾಗಿ ಸಂಜೆ ಮನೆಯ ಹೊರಗೆ ಬಂದು ಚಂದ್ರನನ್ನು ನೋಡುವುದಿಲ್ಲ, ನೋಡಿದ್ದರೂ ಗಮನಿಸುವುದಿಲ್ಲ. ಆದರೆ, ಚೌತಿಯ ದಿನ ತಪ್ಪದೇ ಚಂದ್ರದರ್ಶನವಾಗುತ್ತದೆ! ಕಾರಣವಿಷ್ಟೆ, ಅಕ್ಕ-ಪಕ್ಕದ ಮನೆಯವರು ಹಬ್ಬದ ದಿನ ಸಂಜೆ ಅರಶಿನ-ಕಂಕುಮಕ್ಕೆ ಬನ್ನಿ ಎಂದು ಆಹ್ವಾನಿಸಿರುತ್ತಾರೆ.

ಸದಾ ಸಂಜೆ ಮನೆಯೊಳಗೆ ಇರುವವರು, ಹಬ್ಬದ ದಿನ ಸಂಜೆ ಅಕ್ಕ-ಪಕ್ಕದ ಮನೆಗೆ ಹೋಗುವಾಗ ಅಯಾಚಿತವಾಗಿ ಆಕಾಶದತ್ತ ನೋಡಿರುತ್ತೇವೆ. ಸಾಮಾನ್ಯವಾಗಿ ಮೋಡದ ಮರೆಯಲ್ಲೋ, ಮರಗಳ ಎಡೆಯಲ್ಲೋ ಇರುವ ಚಂದ್ರ ಚೌತಿಯಂದು ಲಕಲಕನೇ ಹೊಳೆಯುತ್ತಾ ದರ್ಶನ ಕೊಡುತ್ತಾನೆ. ಅಲ್ಲಿಗೆ, ಪ್ರತಿವರ್ಷವೂ ಅಪವಾದ ಗ್ಯಾರಂಟಿ ಅಂತ ಆಯ್ತಲ್ಲ. ಅದಕ್ಕೂ ಶಾಸ್ತ್ರೀಯ ಪರಿಹಾರ ಬಹಳ ಸರಳ. ಶಮಂತಕೋಪಾಖ್ಯಾನವನ್ನು (Shamanthakopakyana) ಕೇಳಿದರಾಯಿತು!

ಶಮಂತಕೋಪಾಖ್ಯಾನ: ಸತ್ರಾಜಿತನು ಸೂರ್ಯನನ್ನು ಸಂಪ್ರೀತಗೊಳಿಸಿ ದಿನಕ್ಕೆ ಹತ್ತು ತೊಲ ಬಂಗಾರ ಕೊಡುವ ಶಮಂತಕ ಮಣಿಯನ್ನು ವರವಾಗಿ ಪಡೆಯುತ್ತಾನೆ. ಇದು ನಿನ್ನ ಬಳಿ ಇರುವುದು ಕ್ಷೇಮವಲ್ಲ ನನಗೆ ಕೊಡು ಎಂದು ಶ್ರೀ ಕೃಷ್ಣ ಕೇಳಲು ಇಲ್ಲವೆಂದು ನಿರಾಕರಿಸುತ್ತಾನೆ. ಒಮ್ಮೆ ಸತ್ರಾಜಿತನ ತಮ್ಮನಾದ ಪ್ರಸೇನಜಿತು ಆ ಮಣಿಯನ್ನು ಧರಿಸಿ ಕಾಡಿಗೆ ಬೇಟೆಗೆ ಹೋಗಲು ಅಲ್ಲಿ ಅವನನ್ನು ಒಂದು ಸಿಂಹವು ಕೊಂದಿತು. ಪ್ರಜ್ವಲಿಸುತ್ತಿದ್ದ ಮಣಿಯನ್ನು ಕಚ್ಚಿಕೊಂಡು ಹೋಗುವ ಸಿಂಹವನ್ನು ಜಾಂಬವಂತನು ಅಡ್ಡಗಟ್ಟಿ ಅದನ್ನು ಕೊಂದು ಮಣಿಯನ್ನು ತನ್ನ ಮಗನ ತೊಟ್ಟಿಲಿಗೆ ಕಟ್ಟಿದನು.

ಇತ್ತ ಮಹಾರಾಜನು ಪ್ರಸೇನಜಿತು ವಾಪಸ್ಸು ಬಾರದಿರಲು ಮಣಿಯ ಆಸೆಗಾಗಿ ಕೃಷ್ಣನೇ ಅವನನ್ನು ಕೊಂದಿದ್ದಾನೆ ಎಂದು ಅಪಪ್ರಚಾರ ಮಾಡಿದನು. ಅಪವಾದ ಹೊತ್ತ ಕೃಷ್ಣ ಕಾಡಿಗೆ ಹೋಗಿ ಹೆಜ್ಜೆ ಗುರುತುಗಳನ್ನು ಅನುಸರಿಸಿ ಜಾಂಬವಂತನು ಗುಹೆಗೆ ಹೋಗಿ ಮಣಿಯನ್ನು ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಹೊರಗೆ ಹೋಗಿದ್ದ ಜಾಂಬವಂತನು ಬರಲು ಅವರಿಬ್ಬರಿಗೂ ಘೋರ ಯುದ್ಧ ನಡೆಯಿತು.

28 ದಿನಗಳ ಯುದ್ಧದಲ್ಲಿ ತಾನು ಯುದ್ಧ ಮಾಡುತ್ತಿರುವುದು ರಾಮನ ಜೊತೆಗೆ ಎಂಬ ಅರಿವಾಗಿ, ಯುದ್ಧ ನಿಲ್ಲಿಸಿ ತಪ್ಪಾಯಿತೆಂದು ಕ್ಷಮೆ ಯಾಚಿಸಿ ಮಣಿಯನ್ನೂ, ತನ್ನ ಮಗಳು ಜಾಂಬವತಿಯನ್ನೂ ಅವನಿಗೆ ಕೊಟ್ಟನು. ಚಂದ್ರ ದರ್ಶನ ಮಾಡಿದ ಆರೋಪದಿಂದ ಮುಕ್ತಿ ಹೊಂದಲು ಜನರು ಶಮಂತಕ ಕಥೆ ಕೇಳಿ ಈ ಕೆಳಗಿನ ಶ್ಲೋಕವನ್ನು ಹೇಳಿಕೊಳ್ಳುತ್ತಾರೆ:

ಸಿಂಹ: ಪ್ರಸೇನ ಮಮ ಧೇ: ಸಿಂಹೋ ಜಾಂಬವತಾ ಹತ: ಸುಕುಮಾರಕ ಮಾ ರೋದೀಃ ತವ ಹ್ಯೇಷಃ: ಶ್ಯಮಂತಕ:

सिंह: प्रसेन मण्वधीत्सिंहो जाम्बवता हत:। सुकुमार मा रोदीस्तव ह्येष: स्यमन्तक:।।

Also Read: ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಹೇಗೆ?

(Shamanthakopakyana know why we should not see moon on ganesha chaturthi festival)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada