ಪೈಶಾಚಿಕ ಹಮಾಸ್ ಭಯೋತ್ಪಾದಕ ದಾಳಿಯನ್ನು ಹಿಮ್ಮೆಟ್ಟಿ, ಹಮಾಸ್ ಉಗ್ರರ ಹುಟ್ಟಡಗಿಸಲು ಪ್ರಧಾನಿ ನೆತನ್ಯಾಹು ನೇತೃತ್ವದಲ್ಲಿ ಇಸ್ರೇಲ್ ಕಂಕಣಬದ್ಧವಾಗಿದೆ. ಈ ವೇಳೆ ಕಂಕಣ ತೊಡುವ ಕೈಗಳು ಭಾರೀ ಸಾಹಸವನ್ನೆ ಮಾಡಿದೆ. ತನ್ಮೂಲಕ ತನ್ನ ದೇಶದ ರಕ್ಷಣೆಗೆ ತಾನೂ ಕಟಿಬದ್ಧ ಎಂದು ಆ ಯುವತಿ (Israeli woman) ಸಾಧಿಸಿ ತೋರಿಸಿದ್ದಾಳೆ. ಹಮಾಸ್ ಉಗ್ರರು ತಾನಿದ್ದ ಗ್ರಾಮದ ಮೂಲಕ ಕೇಕೆ ಹಾಕುತ್ತಾ ಹಾದುಹೋಗುವುದನ್ನು 25 ವರ್ಷದ ಆ ಯುವತಿ ಮೊದಲೇ ನೋಡಿಬಿಟ್ಟಳು… ಅಷ್ಟೇ. ಮುಂದೆ ಥೇಟ್ ನಮ್ಮ ದುರ್ಗದ ವೀರಮಹಿಳೆ ಒನಕೆ ಓಬವ್ವನಂತೆ (Onake Obavva) ಯುದ್ಧಭೂಮಿಯಲ್ಲಿ ಕಾಲೂರಿ ನಿಂತು 25 ಭಯೋತ್ಪಾದಕರನ್ನು ಸದೆಬಡಿದಳು. ಇಷ್ಟಾದರೂ ಆ ಹಮಾಸ್ ಉಗ್ರರಿಗೆ ಅದರ ಚಿಕ್ಕ ಸುಳಿವೂ ಸಿಗಲಿಲ್ಲ. ತನ್ನನ್ನು ಇಸ್ರೇಲಿನವರು ಹೇಗೆ ಹೊಡೆದು ಉರುಳಿಸುತ್ತಿದ್ದಾರೆ ಎಂದು ಅರಿಯುವ ಮುನ್ನ ಒಂದು ಹಂತಕ ಪಡೆ (Hamas) ನಿರ್ನಾಮವಾಗಿತ್ತು. ಇಷ್ಟಕ್ಕೂ ಇಸ್ರೇಲಿನ ಒನಕೆ ಓಬವ್ವ ಹೇಗೆ ಶತ್ರು ಪಾಳೆಯದ ಸೈತಾನ್ಗಳನ್ನು ಹೇಗೆ ಸದೆಬಡಿದಳು, ಅದಕ್ಕೆ ತನ್ನ ಗ್ರಾಮದ ಯುವಕರನ್ನು ಹೇಗೆ ಸಜ್ಜುಗೊಳಿಸಿದಳು… ಇಲ್ಲಿದೆ ಆ ಸ್ಟೋರಿ. ಆ ಯುವತಿಯ ಬಗ್ಗೆ ನಿಮಗೊಂದು ಕಲ್ಪನೆ ಮೂಡುವ ಮುನ್ನ ಮೇಲಿನ ಚಿತ್ರವನ್ನೊಮ್ಮೆ ನೋಡಿ. ಈ ಹಿಂದೆ ಯಾವತ್ತೋ ಸೂರ್ಯೋದಯದ ಬೆನ್ನಿಗೆ ಗುಡ್ಡದ ಮೇಲೆ ಕುಳಿತು ಪೋಸ್ ಕೊಟ್ಟಿರುವ ಯುವತಿಯೇ 25 ವರ್ಷದ ಇನ್ಬಾರ್ ಲೈಬರ್ಮನ್ ( Inbar Lieberman) – ಆಕೆಯಷ್ಟೇ ಖಡಕ್ಕಾಗಿ ಆಕೆಯ ಬೆನ್ನಿಗೆ ನಿಂತಿರುವುದು ಯುದ್ಧ ಸನ್ನದ್ಧ ನಾಯಿ!
ಇಸ್ರೇಲಿನ ಈ ಧೈರ್ಯಶಾಲಿ ಯುವತಿ ಇನ್ಬಾರ್ ಲೀಬರ್ಮನ್ ತನ್ನ ದೇಶದೊಳಕ್ಕೆ ಅಚಾನಕ್ಕಾಗಿ ದಂಡೆತ್ತಿ ಬರುತ್ತಿದ್ದ ಹಮಾಸ್ ಉಗ್ರರನ್ನು ಸದೆಬಡಿದು, ತನ್ನ ಪುಟ್ಟ ಗ್ರಾಮವಾದ ನಿರ್ ಆಮ್ ಕಿಬ್ಬುಟ್ಜ್ (Nir Am kibbutz) ಅನ್ನು ಉಳಿಸಿಕೊಂಡಿದ್ದಾಳೆ. ಕಿಬ್ಬುಟ್ಜ್ ಗ್ರಾಮದ ರಕ್ಷಣೆಯನ್ನು ಮುನ್ನಡೆಸಿದ್ದಕ್ಕಾಗಿ ಆಕೆ ಈಗ ದೊಡ್ಡ ಹೀರೋ ಆಗಿದ್ದು, ಎಲ್ಲೆಡೆ ಶ್ಲಾಘನೆಗಳು ಕೇಳಿಬರುತ್ತಿವೆ. ಅಂದಹಾಗೆ ಇಸ್ರೇಲ್ ಎಂಬುದು ಪುಟ್ಟ ಸ್ವಾಭಿಮಾನಿ ರಾಷ್ಟ್ರ. ಅಲ್ಲಿನ ಪ್ರಜೆಗಳು ಒಂದು ಕ್ಷಣವೂ ಮೈಮರೆಯುವ ಹಾಗಿಲ್ಲ. (ಹಾಗೆ ಮೈಮರೆತಿದ್ದಕ್ಕೇ ಇಸ್ರೇಲ್ ಪ್ರಸ್ತುತ ದೊಡ್ಡ ಬೆಲೆಯನ್ನು ಕಟ್ಟುತ್ತಿರುವುದು ಎಂಬುದು ಬೇರೆ ಮಾತು). ಅಲ್ಲಿನ ಪ್ರತಿ ಪ್ರಜೆಯೂ ಯುದ್ಧ ತರಬೇತಿ ಪಡೆದಿರುತ್ತಾರೆ. ಯುದ್ಧ ಸನ್ನದ್ಧವಾಗಿ ಇರುತ್ತಾರೆ. ಮತ್ತು ದೇಶದ ತುಂಬಾ ಅಲ್ಲಲ್ಲಿ ಸ್ಥಳೀಯ ಮಟ್ಟದಲ್ಲಿ ಪುಟ್ಟ ಪುಟ್ಟ ರಕ್ಷಣಾ ಪಡೆಗಳನ್ನು ನಿಯೋಯಿಸಿಕೊಂಡಿರುತ್ತದೆ. ಹಾಗಾಗಿ ಇನ್ಬಾರ್ ಲೈಬರ್ಮನ್ ಎಂಬ ಈ ಕಥಾನಾಯಕಿ ತನ್ನ ನಿರ್-ಆಮ್ ಕಿಬ್ಬುಟ್ಜ್ ಎಂಬ ಗ್ರಾಮದ ಭದ್ರತಾ ಮುಖ್ಯಸ್ಥೆಯಾಗಿದ್ದಳು.
ಉಗ್ರರ ಕರಿನೆರಳಿನಲ್ಲಿರುವ ಗಾಜಾ ಪಟ್ಟಿಯಿಂದ ಕೇವಲ ಒಂದು ಮೈಲಿ ದೂರದಲ್ಲಿರುವ ನಿರ್ ಆಮ್ ಕಿಬ್ಬುಟ್ಜ್ ಮೂಲಕ ಹತ್ತಾರು ಉಗ್ರರ ಪಡೆಯೊಂದು ಇಸ್ರೆಲಿನಲ್ಲಿ ಪೈಶಾಚಿಕತೆ ಮೆರೆಯಲು ಮುನ್ನುಗ್ಗುತ್ತಿದ್ದರು. ಸರಿಯಾಗಿ ಅದೇ ವೇಳೆಗೆ ಎಚ್ಚೆತ್ತ ಇನ್ಬಾರ್ ಲೈಬರ್ಮನ್, ಗ್ರಾಮಸ್ಥರನ್ನು ಬಡಿದೆಬ್ಬಿಸಿದ್ದಾಳೆ. ಅಂದು ಶನಿವಾರ ಬೆಳಗಿನ ಜಾವ (Saturday October 7). ಹಮಾಸ್ ಉಗ್ರರು ಮನಬನದಂತೆ ರಾಕೆಟ್ ದಾಳಿ ಮಾಡುತ್ತಾ ಇಸ್ರೇಲಿನತ್ತ ಧಾವಿಸುತ್ತಿದ್ದರು. ಆ ರಣಕೇಕೆ ಇನ್ಬಾರ್ ಲೈಬರ್ಮನ್ ನನ್ನು ಮೊದಲು ಬಡಿದೆಬ್ಬಿಸಿದೆ. ಏನೋ ಯಡವಟ್ಟು ಘಟಿಸುತ್ತಿದೆ ಎಂದು ಎಚ್ಚೆತ್ತ ಆ ಯುವತಿ ಮೊದಲು ಕೈ ಹಾಕಿದ್ದು ತನ್ನ ಊರಿನಲ್ಲಿ ಶೇಖರಣೆಯಾಗಿರುವ ಶಸ್ತ್ರಾಸ್ತ ಕೋಠಿಗೆ. ಪಟ್ಟಣದ ಶಸ್ತ್ರಾಗಾರವನ್ನು ತಲುಪಿದ ಇನ್ಬಾರ್ ಲೈಬರ್ಮನ್ ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಹೊರತೆಗೆದು ಒಂದೊಂದಾಗಿ ತನ್ನ ಊರಿನ ಯುವಕರ ಪಡೆಗೆ ಹಸ್ತಾಂತರಿಸಿದಳು.
12 ಸದಸ್ಯರ ಯುವ ಭದ್ರತಾ ತಂಡವನ್ನು ರಚಿಸಿಕೊಂಡು ಉಗ್ರರ ಸದೆಬಡಿಯಲು ಮುಂದಾದಳು. ಕಿಬ್ಬುಟ್ಜ್ ಗ್ರಾಮದಲ್ಲಿ ಆಯಕಟ್ಟಿನ ರಕ್ಷಣಾತ್ಮಕ ಸ್ಥಾನಗಳಿಗೆ ಕಳುಹಿಸಿದಳು. ತನಗೆಷ್ಟು ಸಾಮರ್ಥ್ಯವಿದೆಯೋ ಅದಕ್ಕಿಂತ ಒಂದು ತೂಕ ಹೆಚ್ಚಿಗೇ ಶಸ್ತ್ರಗಳನ್ನು ಸ್ವತಃ ತನ್ನ ಮೈಮೇಲೆಯೂ ಹೇರಿಕೊಂಡಳು. ಹಮಾಸ್ ಬೇಲಿಯನ್ನು ಹಾರಿ, ಕೆಲವೇ ನಿಮಿಷಗಳಲ್ಲಿ ತನ್ನ ಗ್ರಾಮದ ಮೂಲಕ ದೇಶದೊಳಕ್ಕೆ ನುಗ್ಗುವುದನ್ನು ಅಂದಾಜಿಸಿದಳು. ತನ್ನ ಗ್ರಾಮದ ಯುದ್ಧ ಸನ್ನದ್ಧ ಯುವಪಡೆಯನ್ನು ಹುರಿದುಂಬಿಸುತ್ತಾ ಹಮಾಸ್ ಉಗ್ರರ ಮೇಲೆ ದೊಡ್ಡ ಸಮರವನ್ನೇ ಸಾರಿದಳು.
ಕಣ್ಣಿಗೆ ಕಂಡ 25 ಉಗ್ರರ ಪೈಕಿ ಯಾರೊಬ್ಬರೂ ದೇಶದೊಳಕ್ಕೆ ನುಸುಳಬಾರದು. ಅವರನ್ನೆಲ್ಲ ಇಲ್ಲೇ ಚೆಂಡಾಡಿಬಿಡಿ ಎಂದು ಮಿಲಿಟರಿ ಕಮಾಂಡ್ ಕೊಟ್ಟಳು ಅಷ್ಟೇ… ಅದಾಗತಾನೆ ನಿದ್ದೆಯಿಂದ ಎಚ್ಚೆತ್ತ ಯುವಕರ ಪಡೆ ತನ್ನ ನಾಯಕಿಯ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತಾ ಹಮಾಸ್ ಸೈತಾನ್ಗಳನ್ನು ಹೊಡೆದುರುಳಿಸತೊಡಗಿದರು. ಎಲ್ಲಿಂದ, ಯಾರು ತಮ್ಮ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎಂಬುದು ಆ ಉಗ್ರರ ಅರಿವಿಗೆ ಬರುವ ಮುನ್ನ 25ಕ್ಕೂ ಹೆಚ್ಚು ಉಗ್ರರು ನೆಲಕ್ಕುರುಳಿದ್ದರು. ನಾಯಕಿ ಲೈಬರ್ಮನ್ ಸ್ವತಃ ಐವರನ್ನು ಕೊಂದಿದ್ದಳು.
ये युवा महिला, इनबल लिबरमैन, निर-एम किबुत्ज़ सुरक्षा की प्रमुख है।
हमास के आतंकवादी हमले के समय इन्होने तत्परता दिखाते हुए सभी महिलाओं और बच्चों को सुरक्षित स्थानों पर इकट्ठा किया और बहादुरी से लड़ते हुए 25 आतंकवादियों को मार गिराया।
इस वीरांगना कि वजह से पूरे किबुत्ज़ को बचा… pic.twitter.com/f8w8fZdVQs
— Israel in India (@IsraelinIndia) October 10, 2023
ಆ ಮೇಲೆ ‘ಹತ್ಯಾಕಾಂಡ’ದ ಸ್ಥಳಕ್ಕೆ ಟ್ರಕ್ ಸಮೇತ ಬಂದ ದೇಶದ ಸೈನಿಕ ಪಡೆ, ಅಷ್ಟೂ ಉಗ್ರರ ದೇಹಗಳನ್ನು ಟ್ರಕ್‌ಗೆ ತುಂಬಿಕೊಂಡು ಹೋದರು. ಇಸ್ರೇಲ್ ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ಬರುವವರೆಗೂ ಸುಮಾರು ಮೂರು ಗಂಟೆಗಳ ಕಾಲ ಭೀಕರ ಗುಂಡಿನ ಕಾಳಗ ಆ ಗ್ರಾಮದಲ್ಲಿ ನಡೆದಿತ್ತು.
ಘಟನೆಯ ಬಳಿಕ ಇನ್ಬಾರ್ ಲೈಬರ್ಮನ್ ಪತಿ, ಗ್ರಾಮದ ಸಾಂಸ್ಕೃತಿಕ ಸಂಯೋಜಕ ಇಲಿತ್ ಪಾಜ್, ಸ್ಥಳೀಯ ಸುದ್ದಿವಾಹಿನಿ ಇಸ್ರೇಲ್ ಹಯೋಮ್ ಜೊತೆ ಮಾತನಾಡುತ್ತಾ “ಇದು ಅದ್ಭುತವಾಗಿದೆ. ನನ್ನ ಪತ್ನಿ ಸ್ಟ್ಯಾಂಡ್‌ಬೈ ಯುದ್ಧ ಘಟಕದ ಭಾಗವಾಗಿದ್ದಳು, ಅದು ಹೆಚ್ಚಿನ ಸಾವುನೋವುಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿತು ಎಂದು ಎದೆಯುಬ್ಬಿಸಿ ಹೇಳಿದ್ದಾನೆ.
ಮತ್ತೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆ ಹತ್ಯಾಕಾಂಡವನ್ನು ಹೀಗೆ ವ್ಯಾಖ್ಯಾನಿಸಿದ್ದಾರೆ: ಇಸ್ರೇಲ್ ಯೋಜಿತ ರೀತಿಯಲ್ಲಿ ಹಮಾಸ್ ನಾಮಾವಶೇಷ ಮಾಡಿದ ಬಳಿಕ ಸಈ ಮಹಿಳೆ Inbar Lieberman ಇಸ್ರೇಲ್ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ. ಆಕೆಯ ವೀರತ್ವದ ಕಥೆಯು ಇಸ್ರೇಲಿ ಪುರಾಣದಲ್ಲಿ ತಲೆಮಾರುಗಳವರೆಗೆ ಉಳಿಯುವ ಕಥೆಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ