ಕೋಟೆನಾಡಿನಲ್ಲಿ ಭಾರೀ ಉದ್ಯೋಗ ಆಮಿಷ: ಮೈಸೂರು ಜಿಲ್ಲೆಯ ವಂಚಕ ಅರೆಸ್ಟ್, ಇಡೀ ಗ್ಯಾಂಗ್ಗೆ ಬಲೆ ಬೀಸಿದ ದುರ್ಗದ ಪೊಲೀಸರು
chitradurga police: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುವ ಜಾಲವೊಂದು ಕೆಲ ದಿನಗಳಿಂದ ಕಾರ್ಯಪ್ರವೃತ್ತಿ ಆಗಿದೆ. ಇನ್ನಾದ್ರೂ ಜನ ಇಂಥ ವಂಚಕರ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.
ನಿರುದ್ಯೋಗ ಎಂಬುದು ಯುವಪಡೆಗೆ ಪೆಡಂಭೂತವಾಗಿ ಕಾಡುತ್ತಿದೆ. ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದು ಮೋಸದ ಬಲೆ ಬೀಸುತ್ತಿದ್ದಾರೆ. ಆದ್ರೆ ಸಮಾಧಾನದ ಸಂಗತಿಯೆಂದರೆ ಕೋಟೆನಾಡಿನಲ್ಲಿ ಪೊಲೀಸ್ರು ವಂಚಕನ ಹೆಡೆಮುರಿ ಕಟ್ಟಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ಬಲೆ ಬೀಸಿದ್ದ ವಂಚಕರು (fake job scam). ಸುಮಾರು 30ಕ್ಕೂ ಹೆಚ್ಚು ಜನರಿಗೆ ವಿವಿಧ ಹುದ್ದೆ ಕೊಡಿಸುತ್ತೇವೆಂದು ಟೋಪಿ. ವಂಚಕರ ಜಾಲ ಬೇಧಿಸಿದ ಕೋಟೆನಾಡಿನ ಪೊಲೀಸರು. ಹೌದು, ಮೈಸೂರು ಜಿಲ್ಲೆ ಹೆಚ್ ಡಿ ಕೋಟೆಯ ಗಿರೀಶ್ ಮತ್ತು ದಿನೇಶ್ ಎಂಬುವರು ಉದ್ಯೋಗಾಕಾಂಕ್ಷಿಗಳಿಗೆ ಬಲೆ ಬೀಸುತ್ತಿದ್ದರು. ಶಿಕ್ಷಕ ಹುದ್ದೆ, ಕಂಪ್ಯೂಟರ್ ಶಿಕ್ಷ ಹುದ್ದೆ ಸೇರಿ ವಿವಿಧ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ಪೀಕುತ್ತಿದ್ದರು. ಚಿತ್ರದುರ್ಗದಲ್ಲಿ 30ಕ್ಕೂ ಹೆಚ್ಚು ಜನರ ಬಳಿ ಒಟ್ಟು 30 ಲಕ್ಷಕ್ಕೂ ಅಧಿಕ ಹಣ ದೋಚಿದ್ದಾರೆ. ಹೀಗಾಗಿ, ವಂಚಿತರು ಚಿತ್ರದುರ್ಗ ನಗರದ ಕೋಟೆ ಠಾಣೆಗೆ ದೂರು ನೀಡಿದ್ದು ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಅಂತೆಯೇ ಪೊಲೀಸ್ರು ಮೈಸೂರು ಮೂಲದ ಗಿರೀಶ್ ನನ್ನು ಬಂಧಿಸಿದ್ದಾರೆ. ಆದ್ರೆ, ಮೋಸದ ಜಾಲ ದೊಡ್ಡದಾಗಿದ್ದು ಪೊಲೀಸ್ರು (chitradurga police) ಕೂಲಂಕಷ ತನಿಖೆ ನಡೆಸಬೇಕೆಂಬುದು ಸಂತ್ರಸ್ಥರು ಆಗ್ರಹಿಸಿದ್ದಾರೆ.
ಇನ್ನು ಚಿತ್ರದುರ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸ್ರು ಈಗಾಗಲೇ ಮೊದಲ ಆರೋಪಿ ಗಿರೀಶ್ ನನ್ನು ಬಂಧಿಸಿದ್ದಾರೆ. ಇನ್ನುಳಿದಂತೆ ಮೋಸದ ಜಾಲದ ಬಗ್ಗೆ ತನಿಖೆ ಮುಂದುವರೆದಿದೆ. ಆದ್ರೆ, ಜನರು ವಂಚಕರ ಬಣ್ಣದ ಮಾತಿಗೆ ಮರಳಾಗಬಾರದು. ಎಚ್ಚರದಿಂದ ಇರಬೇಕು ಎಂದು ಎಸ್ಪಿ ಕೆ.ಪರಶುರಾಮ್ ಹೇಳಿದ್ದಾರೆ.
ಇದನ್ನೂ ಓದಿ:ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕೋಡಿ ಭೂದಾಖಲೆಗಳ ಸಹಾಯಕ ನಿರ್ದೇಶಕ
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುವ ಜಾಲವೊಂದು ಕೆಲ ದಿನಗಳಿಂದ ಕಾರ್ಯಪ್ರವೃತ್ತಿ ಆಗಿತ್ತು. ಅಂತೆಯೇ ಅನೇಕರಿಗೆ ನಂಬಿಸಿ ಮಕ್ಮಲ್ ಟೋಪಿಯನ್ನು ಸಹ ಹಾಕಿದೆ. ಹೀಗಾಗಿ, ಇನ್ನಾದ್ರೂ ಜನರು ಇಂಥ ವಂಚಕರಿಂದ ವಂಚನೆಗೊಳಗಾಗುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.
ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ