ಚಿತ್ರದುರ್ಗದಲ್ಲಿ ಪುರುಷರ ದಿನಾಚರಣೆ: ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೆ ಮನವಿ

| Updated By: ವಿವೇಕ ಬಿರಾದಾರ

Updated on: Nov 19, 2022 | 4:29 PM

ಇಂದು (ನ.19) ಪುರುಷರ ದಿನಾಚರಣೆ ಹಿನ್ನೆಲೆ ಚಿತ್ರದುರ್ಗದಲ್ಲಿ ನಾಗರೀಕರ ವೇದಿಕೆಯಿಂದ ಕೇಕ್ ಕತ್ತರಿಸಿ ಸಿಹಿ ಹಂಚಿ ಪುರುಷರ ದಿನಾಚರಣೆ ಆಚರಿಸಲಾಯಿತು.

ಚಿತ್ರದುರ್ಗದಲ್ಲಿ ಪುರುಷರ ದಿನಾಚರಣೆ: ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೆ ಮನವಿ
ನಾಗರಿಕರ ವೇದಿಕೆಯಿಂದ ಪುರುಷರ ದಿನಾಚರಣೆ
Follow us on

ಚಿತ್ರದುರ್ಗ: ಇಂದು (ನ.19) ಪುರುಷರ (Men’s day) ದಿನಾಚರಣೆ ಹಿನ್ನೆಲೆ ನಗರದಲ್ಲಿ ನಾಗರೀಕರ ವೇದಿಕೆಯಿಂದ ಕೇಕ್ ಕತ್ತರಿಸಿ ಸಿಹಿ ಹಂಚಿ ಪುರುಷರ ದಿನಾಚರಣೆ ಆಚರಿಸಲಾಯಿತು. ನಾಗರೀಕರ ವೇದಿಕೆಯ ರಾಜ್ಯಾಧ್ಯಕ್ಷ, ವಕೀಲ ಬಿ.ಕೆ.ರೆಹಮತ್​ವುಲ್ಲಾ ನೇತೃತ್ವದಲ್ಲಿ ಆಚರಿಸಲಾಯಿತು. ಈ ವೇಳೆ ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೆ ಮಾಡುವಂತೆ ಜಿಲ್ಲಾಧಿಕಾರಿಗಳ  ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ಮಹಿಳೆಯರ ರಕ್ಷಣೆಗೆ ಅನೇಕ ಕಾಯ್ದೆ, ವಿಶೇಷ ಕಾನೂನು ಜಾರಿಯಲ್ಲಿವೆ. ನೊಂದ ಮಹಿಳೆಯರಿಗೆ ಕಾನೂನಿನ ಅವಶ್ಯಕತೆಯಿದೆ. ಆದರೆ, ಕೆಲವರಿಂದ ಕಾನೂನಿನ ದುರುಪಯೋಗ ಆಗುತ್ತಿದೆ. ಅಧಿಕಾರಿಗಳು, ಮಠಾಧೀಶರು, ರಾಜಕಾರಣಿಗಳು ಸೇರಿ ಹಲವರ ವಿರುದ್ಧ ಸುಳ್ಳು ಕೇಸ್ ದಾಖಲಾಗುತ್ತಿವೆ. ಅನೇಕ ಕೇಸ್ ಪೊಲೀಸ್ ಹಂತದಲ್ಲೇ ಬಿ.ರಿಪೋರ್ಟ್ ಆಗುತ್ತಿವೆ. ಪುರುಷರು ಖಿನ್ನತೆಗೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಹಿಳೆಯರಂತೆ ಪುರುಷರಿಗೂ ರಕ್ಷಣೆ ನೀಡುವ ಕಾನೂನು ಜಾರಿಗೆ ತರಬೇಕು ಎಂದು ಮನವಿ ಪತ್ರ ಸಲ್ಲಿಸಲಾಗಿದೆ. ಈ ವೇಳೆ ಕೆಲ ಮಹಿಳಾ ವಕೀಲರು ಸಾಥ್ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Sat, 19 November 22