ಚಿತ್ರದುರ್ಗ: ಲಾರಿ ಹರಿದು 20ಕ್ಕೂ ಹೆಚ್ಚು ಕುರಿಗಳ ದುರ್ಮರಣ; ಚಾಲಕ ಪರಾರಿ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 150(ಎ) ನಲ್ಲಿ, ಚಳ್ಳಕೆರೆಯ ಅಶೋಕ್ ಮತ್ತು ಚಿಕ್ಕಣ್ಣ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಲಾರಿ ಹರಿದು 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು ಇತ್ತೀಚೆಗಷ್ಟೇ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ವಿಷಪೂರಿತ ಆಹಾರ ಸೇವಿಸಿ 200 ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದವು.
ಚಿತ್ರದುರ್ಗ, ಆ.29: ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ 200 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 150(ಎ) ನಲ್ಲಿ, ಚಳ್ಳಕೆರೆಯ ಅಶೋಕ್ ಮತ್ತು ಚಿಕ್ಕಣ್ಣ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಲಾರಿ ಹರಿದು 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು ಕುರಿ ಮಂದೆ ಮೇಲೆ ಲಾರಿ ಹರಿಸಿ ಲಾರಿ ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡರಗಿ ತಾಲೂಕಿನಲ್ಲಿ ವಿಷಪೂರಿತ ಆಹಾರ ಸೇವಿಸಿ ಮೃತಪಟ್ಟಿದ್ದ 200 ಕ್ಕೂ ಹೆಚ್ಚು ಕುರಿಗಳು
ಹೌದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗ್ರಾಮವೊಂದರಲ್ಲಿ ಕಟಾವು ಮಾಡಿದ್ದ ಸೂರ್ಯಕಾಂತಿ ಹೊಲದಲ್ಲಿ ಆಹಾರ ಸೇವಿಸಿ, ನೀರು ಕುಡಿದ ಬಳಿಕ ಹೊಟ್ಟೆ ಉಬ್ಬಿಕೊಂಡು ಸುಮಾರು 200 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿತ್ತು. ಈ ಮೂಲಕ ಬರೊಬ್ಬರಿ 20 ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದ್ದು, ಕುರಿ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಒಂದೇ ಕಡೆ ಬರೊಬ್ಬರಿ 2 ಸಾವಿರ ಕುರಿಗಳನ್ನು ಬಿಡಲಾಗಿತ್ತು. ಆದರೆ, ವಿಷಾಹಾರ ಸೇವಿಸಿದ ಇನ್ನೂರು ಕುರಿಗಳು ಮಾತ್ರ ಕೊನೆಯುಸಿರೆಳೆದಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ:Belagavi: ಪ್ರತಿಭಟನಾಕಾರರು ಬಿಸಾಡಿದ್ದ ಊಟ ತಿಂದು 10 ಕುರಿಗಳು ಸಾವು
ಅನುಮಾಸ್ಪದವಾಗಿ ಮೃತ ಪಟ್ಟ ಹುಲಿ
ಚಾಮರಾಜನಗರ: ಅನುಮಾಸ್ಪದವಾಗಿ ಹುಲಿಯೊಂದು ಮೃತಪಟ್ಟ ಘಟನೆ ಜಿಲ್ಲೆಯ ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯಾಧಿಕಾರಿಗಳು ಇಂದು ಬಿ.ಆರ್.ಟಿ ಹುಲಿಸಂರಕ್ಷಿತ ಪ್ರದೇಶ ಅತ್ತಿಕಾನೆ ಬಳಿ ರೌಂಡ್ಸ್ ಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಹುಲಿಯ ಮೃತದೇಹವನ್ನು ಪಶು ವೈದ್ಯರು ಮೆಡಿಕಲ್ ಎಕ್ಸಾಮಿನ್ ನಡೆಸಿದ್ದು, ಮೃತ ಹುಲಿಯ ಮರಣೋತ್ತರ ಪರೀಕ್ಷೆ ವೇಳೆ ಮೃತ ದೇಹದ ಮೇಲೆ ಯಾವುದೇ ಗಾಯದ ಗುರುತು ಸಹ ಪತ್ತೆಯಾಗಿಲ್ಲ.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ
ಯಾವುದೇ ಗಾಯದ ಕಲೆಗಳು ಇಲ್ಲದೆ ಇದ್ರು, ಹುಲಿ ಮೃತಪಟ್ಟಿರುವ ಹಿನ್ನಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯವರು ‘ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಹುಲಿಯ ಸಾವಿನ ಅಸಲಿ ಸತ್ಯ ತಿಳಿಯಲಿದೆ ಎಂದಿದ್ದಾರೆ. ಇನ್ನು ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆ ಅತೀ ಹೆಚ್ಚು ಹುಲಿಯನ್ನು ಸಂರಕ್ಷಿತ ಮಾಡುತ್ತಿರುವ ಅರಣ್ಯ ಪ್ರದೇಶವಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹುಲಿ ಗಣತಿಯಲ್ಲಿ ಬಂಡೀಪುರ ಅರಣ್ಯ ಪ್ರದೇಶಕ್ಕೆ 2ನೇ ಸ್ಥಾನ ಸಿಕ್ಕಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ