ಚಿತ್ರದುರ್ಗ ಹೊಳಲ್ಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

ಚಿತ್ರದುರ್ಗ ಹೊಳಲ್ಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!
ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಸಮರ್ಪಕ ಬೆಡ್ಗಳಿಲ್ಲದೆ ನೆಲದ ಮೇಲೆ ಮಲಗಿದ್ದಾರೆ

ಬೆಳಿಗ್ಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಉಪ್ಪಿಟ್ಟು ಉಪಹಾರ ಸೇವನೆ ಬಳಿಕ ಕೆಲ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮಧ್ಯಾಹ್ನ ಅನ್ನ, ಸಾರು ಸೇವನೆ ನಂತರ ಸಂಜೆ ವೇಳೆ ಐದಾರು ವಿದ್ಯಾರ್ಥಿಗಳಿಗೆ ವಾಂತಿ ಶುರುವಾಗಿದೆ.

TV9kannada Web Team

| Edited By: sandhya thejappa

Nov 13, 2021 | 12:37 PM

ಚಿತ್ರದುರ್ಗ: ಹೊಳಲ್ಕೆರೆ ಪಟ್ಟಣ ಬಳಿಯ ಕಣಿವೆ ಪ್ರದೇಶದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ, ಬೇಧಿಯಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳು ಹೊಳಲ್ಕೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ (ನ.12) ಬೆಳಿಗ್ಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಉಪ್ಪಿಟ್ಟು ಉಪಹಾರ ಸೇವನೆ ಬಳಿಕ ಕೆಲ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮಧ್ಯಾಹ್ನ ಅನ್ನ, ಸಾರು ಸೇವನೆ ನಂತರ ಸಂಜೆ ವೇಳೆ ಐದಾರು ವಿದ್ಯಾರ್ಥಿಗಳಿಗೆ ವಾಂತಿ ಶುರುವಾಗಿದೆ. ರಾತ್ರಿ ಊಟದ ನಂತರ ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಇಂದು ಬೆಳಿಗ್ಗೆಯೂ ಕೆಲ ವಿದ್ಯಾರ್ಥಿಗಳಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಯಲ್ಲಿ ಅವ್ಯವಸ್ಥೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲು ಸಮರ್ಪಕ ಬೆಡ್ಗಳಿಲ್ಲದೆ ನೆಲದ ಹಾಸಿಗೆ ಮೇಲೆ ಮಲಗಿಸಲಾಗಿತ್ತು. ಅಸ್ವಸ್ಥ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಔಷಧಿಯ ಕೊರತೆಯಿದ್ದು ಆತಂಕ ಸೃಷ್ಟಿಸಿದೆ. ಹೀಗಿದ್ದರೂ ತಹಶೀಲ್ದಾರ್ ರಮೇಶ್ ಆಚಾರ್ ಸೇರಿ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಬಗ್ಗೆ ಗಮನಹರಿಸದೆ ಬೇಜವಬ್ದಾರಿ ಪ್ರದರ್ಶಿಸಿದ್ದಾರೆ ಎಂದು ಅಸ್ವಸ್ಥ ವಿದ್ಯಾರ್ಥಿಯ ಪೋಷಕರಾದ ಶಂಕರಪ್ಪ ಕಿರಿಕಾರಿದ್ದಾರೆ.

ಅಧಿಕಾರಿಗಳು ಭೇಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಅಸ್ವಸ್ಥರಾದ ವಿಷಯ ತಿಳಿದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರದೀಪ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ನಿನ್ನೆ ಸೇವಿಸಿದ ಆಹಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ನಿನ್ನೆ ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾರು ಸೇವಿಸಿದ್ದಾರೆ. ಆಹಾರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಅಂತೆಯೇ ನೀರಿನ ಟ್ಯಾಂಕ್ ಸಹ ವೀಕ್ಷಿಸಿದ್ದು ನೀರು ಸಹ ಕಲುಷಿತಗೊಂಡಿಲ್ಲ. ಆದರೆ ಚಳ್ಳಕೆರೆ ಭಾಗದ ವಿದ್ಯಾರ್ಥಿಗಳಿಗೆ ನಿನ್ನೆ ಪೋಷಕರು ಕಡಲೇಕಾಯಿ ತಂದು ನೀಡಿದ್ದರು. ಕಡಲೇಕಾಯಿ ಸೇವನೆಯಿಂದಾಗಿ ಮಕ್ಕಳು ಅಸ್ವಸ್ಥರಾಗಿರುವ ಶಂಕೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯಾರ್ಥಿಗಳು ಅಸ್ವಸ್ಥರಾಗಲು ನಿಖರ ಕಾರಣವೇನೆಂಬುದು ತಿಳಿದು ಬರಬೇಕಿದೆ ಅಂತ ಹಿಂದುಳಿದ ಕಲ್ಯಾಣ ಇಲಾಖೆ ಅಧಿಕಾರಿ ಪ್ರದೀಪ್ ತಿಳಿಸಿದ್ದಾರೆ.

ಸೂಕ್ತ ವ್ಯವಸ್ಥೆ ನಿನ್ನೆಯಷ್ಟೇ ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಶಿಬಿರವೊಂದು ನಡೆದಿತ್ತು. ಹೀಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ಬಂದಾಗ ಬೆಡ್ ವ್ಯವಸ್ಥೆ ಕಲ್ಪಿಸುವುದು ಕೆಲ ಹೊತ್ತು ವಿಳಂಬವಾಗಿದೆ. ಕೆಲ ಹೊತ್ತಿನಲ್ಲೇ ವಿದ್ಯಾರ್ಥಿಗಳಿಗೆ ಬೆಡ್ ವ್ಯವಸ್ಥೆ ಕಲ್ಪಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ ಅಂತ ಡಿಹೆಚ್ಓ ಡಾ.ರಂಗನಾಥ್ ಹೇಳಿದ್ದಾರೆ.

ಮದುವೆ ಊಟ ಮಾಡಿದ್ದ 150ಕ್ಕೂ ಹೆಚ್ಚು ಜನರು ಅಸ್ವಸ್ಥ ದಾವಣಗೆರೆ: ಮದುವೆ ಊಟ ಮಾಡಿದ್ದ 150ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಹೊನ್ನಾಳಿ ತಾಲೂಕಿನ ದೇವರಹೊನ್ನಾಳಿ ಗ್ರಾಮದಲ್ಲಿ 150 ಜನರಿಗೆ ವಾಂತಿ ಭೇದಿ ಶುರುವಾಗಿದೆ. ತೀವ್ರ ಅಸ್ವಸ್ಥರಾದವರಿಗೆ ಶಿವಮೊಗ್ಗದ ಮೆಗ್ಗಾನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ

15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಅಪರಾಧಿಗೆ 10 ವರ್ಷ ಜೈಲು, 40 ಸಾವಿರ ದಂಡ

Mohammad Rizwan: ಐಸಿಯುನಲ್ಲಿ ಚೆನ್ನಾಗಿ ನೋಡಿಕೊಂಡ ಭಾರತೀಯ ವೈದ್ಯನಿಗೆ ರಿಜ್ವಾನ್ ನೀಡಿದ ಗಿಫ್ಟ್ ಏನು ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada