15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಅಪರಾಧಿಗೆ 10 ವರ್ಷ ಜೈಲು, 40 ಸಾವಿರ ದಂಡ

15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಅಪರಾಧಿಗೆ 10 ವರ್ಷ ಜೈಲು, 40 ಸಾವಿರ ದಂಡ
ಜೈಲು (ಪ್ರಾತಿನಿಧಿಕ ಚಿತ್ರ)

ವಿಚಾರಣೆ ನಡೆಸಿದ ತುಮಕೂರು ಪೋಕ್ಸೋ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶ ಕೃಷ್ಣಯ್ಯ ಅವರು ಆದೇಶ ನೀಡಿದ್ದು, ಸರ್ಕಾರಿ ವಕೀಲೆ ಬಿವಿ ಗಾಯತ್ರಿ ರಾಜು ವಾದ ಮಂಡಿಸಿದ್ದರು.

TV9kannada Web Team

| Edited By: sandhya thejappa

Nov 13, 2021 | 12:02 PM

ತುಮಕೂರು: 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಅಪರಾಧಿಗೆ ಕೋರ್ಟ್ 10 ವರ್ಷ ಜೈಲು ಹಾಗೂ 40 ಸಾವಿರ ದಂಡ ಹಾಕಿದೆ. ತುಮಕೂರಿನ ಪೋಕ್ಸೋ ನ್ಯಾಯಾಲಯವು ಆದೇಶ ನೀಡಿದ್ದು, ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದೆ. 2019ರಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. 28 ವರ್ಷದ ಮಂಜುನಾಥ್ ಎಂಬುವವನು 15 ವರ್ಷದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಮಾಡಿದ್ದ. ಈ ಬಗ್ಗೆ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ತುಮಕೂರು ಪೋಕ್ಸೋ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶ ಕೃಷ್ಣಯ್ಯ ಅವರು ಆದೇಶ ನೀಡಿದ್ದು, ಸರ್ಕಾರಿ ವಕೀಲೆ ಬಿವಿ ಗಾಯತ್ರಿ ರಾಜು ವಾದ ಮಂಡಿಸಿದ್ದರು. ಸದ್ಯ ಅತ್ಯಾಚಾರ ಆರೋಪಿಗೆ ಹತ್ತು ವರ್ಷ ಜೈಲು ಹಾಗೂ 40 ಸಾವಿರ ರೂ. ದಂಡ ವಿಧಿಸಿದೆ. ಈ ಮೂಲಕ ನೊಂದ ಹೆಣ್ಣು ಮಗಳಿಗೆ ನ್ಯಾಯ ಸಿಕ್ಕಂತಾಗಿದೆ.

ಅಪರಾಧಿ ಗ್ರಾಮದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಗ್ರಾಮದ 15 ವರ್ಷದ ಬಾಲಕಿಯನ್ನ ಯಾರು ಇಲ್ಲದ ಸಮಯದಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯನ್ನ ಅಪಹರಿಸಿ ಗ್ರಾಮದ ಹೊರವಲಯಕ್ಕೆ ತಂದು ಕೃತ್ಯ ಎಸಗಿದ್ದ. ಅಲ್ಲದೇ ಈ ಬಗ್ಗೆ ಮನೆಯಲ್ಲಿ ಅಥವಾ ಯಾರಿಗಾದರೂ ತಿಳಿಸಿದರೇ ಕೊಲೆ ಮಾಡುವ ಬೆದರಿಕೆ ಹಾಕಿದ್ದನಂತೆ. ಮನೆಯಲ್ಲಿ ಅನುಮಾನ ಬಂದು ಪೋಷಕರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಪೋಷಕರು ನೀಡಿದ ದೂರು ದಾಖಲಾಗಿ ವಿಚಾರಣೆ ನಡೆಯುತ್ತಿತ್ತು. ಸದ್ಯ ತುಮಕೂರಿನ ಪೋಕ್ಸೋ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ; ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್‌ ಸುಟ್ಟು ಭಸ್ಮ

ರೈತರಿಗೆ ಮೋಸ ಮಾಡಿದ್ದ ಆರೋಪಿಗಳಿಂದ ಹಣ ವಸೂಲಿ; ಪೊಲೀಸರ ಕಾರ್ಯಕ್ಕೆ ಮೆಚ್ಚಿ 1 ಲಕ್ಷ ರೂ. ಬಹುಮಾನ

Follow us on

Related Stories

Most Read Stories

Click on your DTH Provider to Add TV9 Kannada